Maruti Jimny ladakh Ad: ಪರಿಸರ ಹಾನಿ ಪ್ರಶ್ನಿಸಿ ಕಂಪನಿ ವಿರುದ್ಧ ರೊಚ್ಚಿಗೆದ್ದ ಲಡಾಖ್ ಸಂಸದ
ಭಾರತದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಮಾರುತಿ ಜಿಮ್ನಿ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿತ್ತು. ಇನ್ನೇನು ಈ ಎಸ್‌ಯುವಿ ಬಿಡುಗಡೆಯಾಗಿ ಗ್ರಾಹಕರ ಕೈಸೇರುವುದೊಂದೆ ಬಾಕಿ ಇದೆ. ಈ ನಡುವೆ ವಾಹನಕ್ಕೆ ಬೇಡಿಕೆ ಹೆಚ್ಚಿಸಲು ಜಾಹೀರಾತುಗಳು ಅನಿವಾರ್ಯವಾಗಿದೆ. ಆದರೆ ಇದೇ ಜಾಹೀರಾತು ಶೂಟಿಂಗ್ ಈಗ ಪೇಚಿಗೆ ಸಿಲುಕಿದೆ.
ಮಾರುತಿ ಸುಜುಕಿ ಜಿಮ್ನಿ ಜಾಹೀರಾತಿಗಾಗಿ ಪ್ರಕೃತಿಯನ್ನು ಹಾಳುಮಾಡುವುದು ಸರಿಯಲ್ಲ ಎಂಬ ಟೀಕೆಗಳು ಎದ್ದಿವೆ. ಎಸ್‌ಯುವಿ ಚಿತ್ರೀಕರಣಕ್ಕಾಗಿ ಲಡಾಖ್ ಸರೋವರದಲ್ಲಿ ಜಿಮ್ನಿ ಕಾರನ್ನು ಓಡಿಸಿರುವುದನ್ನು ಲಡಾಖ್ ಸಂಸದ ಟೀಕಿಸಿದ್ದಾರೆ. ಲಡಾಖ್‌ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರು ಮಾರುತಿ ಸುಜುಕಿ ಚಿತ್ರೀಕರಿಸಿದ ಜಿಮ್ನಿ ಜಾಹೀರಾತನ್ನು ನಿಲ್ಲಿಸಲು ಆಗ್ರಹಿಸಿದ್ದಾರೆ. ಚಿತ್ರೀಕರಣ ವೇಳೆ ಹೊರಗಿನವರು ರೆಕಾರ್ಡ್ ಮಾಡಿದ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಹಂಚಿಕೊಂಡು ಸಂಸದ ಟೀಕಿಸಿದ್ದಾರೆ.

ವಿಡಿಯೋವನ್ನು ಪರಿಶೀಲಿಸಿದರೆ ಮಾರುತಿ ಜಿಮ್ನಿ ನದಿಯ ಅಂಚಿನಲ್ಲಿ ತುಸು ವೇಗವಾಗಿ ನದಿ ಹರಿಯುವುದಕ್ಕೆ ವಿರುದ್ಧ ದಿಕ್ಕನಲ್ಲಿ ಬರುತ್ತಿದೆ. ಅಂದರೆ ಎಂಥಹ ಕಠಿಣ ಪರಿಸ್ಥಿತಿಗಳಲ್ಲೂ ಜಿಮ್ನಿ ನಿಭಾಯಿಸಬಲ್ಲದು ಎಂಬುದು ಜಾಹೀರಾತಿನ ಮೂಲ ಉದ್ದೇಶವಾಗಿರಬಹುದು. 15-ಸೆಕೆಂಡ್‌ನ ಈ ವೀಡಿಯೋದಲ್ಲಿ ಮಾರುತಿ ಜಿಮ್ನಿ SUV ಅನ್ನು ಟಿವಿ ಸಿಬ್ಬಂದಿ ಜೊತೆಗೆ ಶೂಟ್ ಮಾಡುವಾಗ ಅಲ್ಲಿನ ಸವಾಲಿನ ಭೂಪ್ರದೇಶವನ್ನು ನಾವು ನೋಡಬಹುದು. ಜೊತೆಗೆ ನೋಡಲು ಇದು ತುಂಬಾ ಸುಂದರ ಪ್ರದೇಶವೂ ಹೌದು.
ಇದನ್ನೇ ಪ್ರಶ್ನಿಸಿ ಸಂಸದರು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅಲ್ಲಿನ 'ದುರ್ಬಲವಾದ ಪರಿಸರ ವ್ಯವಸ್ಥೆ'ಗೆ ತೊಂದರೆಯಾಗಬಾರದು ಎಂದು ಅವರು ಹೇಳಿದ್ದಾರೆ. "ನಾನು @Maruti_Corp ನ ಬೇಜವಾಬ್ದಾರಿ ಜಾಹೀರಾತನ್ನು ಖಂಡಿಸುತ್ತೇನೆ. ದುರ್ಬಲವಾದ ಪರಿಸರ ವ್ಯವಸ್ಥೆಯನ್ನು ವಾಣಿಜ್ಯ ಲಾಭಕ್ಕಾಗಿ ನಾಶಪಡಿಸಬಾರದು. ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಆಡಳಿತವನ್ನು ಒತ್ತಾಯಿಸುತ್ತೇನೆ. ಲಡಾಖ್‌ನ ಅನನ್ಯ ಸೌಂದರ್ಯವನ್ನು ಭವಿಷ್ಯದ ಜನರಿಗಾಗಿ ಸಂರಕ್ಷಿಸೋಣ" ಎಂದು ನಮ್ಗ್ಯಾಲ್ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.
ಮಾರುತಿ ಜಿಮ್ನಿ:
ಸದ್ಯ ಮಾರುತಿ ಜಿಮ್ನಿ SUV ದೇಶಾದ್ಯಂತ ಡೀಲರ್‌ಶಿಪ್‌ಗಳನ್ನು ತಲುಪಲು ಪ್ರಾರಂಭಿಸಿದೆ. ಆದರೆ ಬಿಡುಗಡೆ ಮಾತ್ರ ಇನ್ನೂ ಆಗಿಲ್ಲದಿರುವುದು ಹಲವರನ್ನು ನಿರಾಸೆಗೊಳಿಸಿದೆ. ಕಂಪನಿಯು ಭಾರತದಲ್ಲಿ ಮೇ ಎರಡನೇ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು ಐದು ಬಾಗಿಲಿನೊಂದಿಗೆ ಈಗಿನ ಟೆಕ್‌ಗೆ ಅನುಗುಣವಾಗಿ ಹಲವು ಫೀಚರ್‌ಗಳನ್ನು ಒಳಗೊಂಡಿದೆ. ಏಳು ಬಣ್ಣಗಳ ಆಯ್ಕೆಯೊಂದಿಗೆ ಬರಲಿದ್ದು, ಕೈನೆಟಿಕ್ ಯೆಲ್ಲೋ ವಿತ್ ಬ್ಲ್ಯಾಕ್ ರೂಫ್‌ಗೆ ವೇರಿಯೆಂಟ್ ಹೆಚ್ಚಿನ ಬುಕಿಂಗ್‌ಗಳನ್ನು ಪಡೆದುಕೊಂಡಿದೆ.
ಇನ್ನು ಇದರ ವೈಶಿಷ್ಟ್ಯಗಳನ್ನು ನೋಡುವುದಾದರೆ, ಒಂಬತ್ತು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಯುನಿಟ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಆರು ಏರ್‌ಬ್ಯಾಗ್‌ಗಳು, ಫಾಗ್ ಲ್ಯಾಂಪ್‌ಗಳು, ವಾಷರ್‌ನೊಂದಿಗೆ LED ಹೆಡ್ ಲ್ಯಾಂಪ್‌ಗಳು ಸೇರಿದಂತೆ 15 ಇಂಚಿನ ಅಲಾಯ್ ವೀಲ್‌ಗಳ ಜೊತೆಗೆ ಹಲವು ಫೀಚರ್‌ಗಳೊಂದಿಗೆ ಬರುತ್ತದೆ. ಇದರ ಪರ್ಫಾಮೆನ್ಸ್ ಬಗ್ಗೆ ತಿಳಿಯಬೇಕಾದರೆ ಬಿಡುಗಡೆವೆರೆಗೆ ಕಾಯಬೇಕಾಗುತ್ತದೆ.

ಜನವರಿಯಲ್ಲಿ ಅನಾವರಣಗೊಂಡ ಬಳಿಕ ಬಹುನಿರೀಕ್ಷಿತ ಐದು-ಬಾಗಿಲಿನ ಜಿಮ್ನಿಯ ಅಧಿಕೃತ ಬುಕಿಂಗ್ ಶೀಘ್ರದಲ್ಲೇ ಪ್ರಾರಂಭವಾಯಿತು. ಮೂಲಗಳ ಪ್ರಕಾರ ಕಾರಿನ ಪರೀಕ್ಷಾ ಹಂತಗಳನ್ನು ಮುಗಿಸಿರುವ ಕಂಪನಿಯು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಈಗಾಗಲೇ ದಾಖಲೆ ಮಟ್ಟದಲ್ಲಿ ಗ್ರಾಹಕರು ಈ ಎಸ್‌ಯುವಿಯನ್ನು ಬುಕ್ ಮಾಡಿದ್ದಾರೆ. ಮಾರುತಿ ಜಿಮ್ನಿ ಆರ್ಡರ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದಾಗಿನಿಂದ ಇಲ್ಲಯವರೆಗೆ ಬರೋಬ್ಬರಿ 23,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸಂಗ್ರಹಿಸಿದೆ ಎಂದು ಕಂಪನಿ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications