ಮಾರುತಿ ಜಿಮ್ನಿ ಹೊಸ ಜಾಹೀರಾತು ಬಿಡುಗಡೆ... ಮಗನ ಕನಸಿನ ಕಾರಿನ ಬಗ್ಗೆ ಮೊಮ್ಮಗನಿಗೆ ಕಥೆ ಹೇಳಿದ ಅಜ್ಜ

2023 ಆಟೋ ಎಕ್ಸ್‌ಪೋದಲ್ಲಿ ತನ್ನ ಬಹುನಿರೀಕ್ಷಿತ 5-ಡೋರ್ ವರ್ಷನ್ ಜಿಮ್ನಿಯನ್ನು ಅನಾವರಣಗೊಳಿಸಿದ ಮಾರುತಿ, ಇದೀಗ ದಾಖಲೆ ಮಟ್ಟದ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ಅಧಿಕೃತ ಮೂಲಗಳ ಪ್ರಕಾರ 15 ಸಾವಿರ ಗ್ರಾಹಕರು ಬುಕ್ ಮಾಡಿದ್ದಾರೆ. ಈ ಬುಕಿಂಗ್‌ಗಳು ಬಿಡುಗಡೆ ವೇಳೆಗೆ ಇನ್ನಷ್ಟು ಹೆಚ್ಚಾಗಲು ಮಾರುತಿ ಸುಜುಕಿ ಇದೀಗ ಜಿಮ್ನಿಯ ಹೊಸ ಜಾಹೀರಾತು ಬಿಡುಗಡೆ ಮಾಡಿದೆ.

ಕಂಪನಿಯ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಹೊಸ ಜಾಹಿರಾತು ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೊದಲ್ಲಿ, ಚಿಕ್ಕ ಮಗು ತನ್ನ ಅಜ್ಜನ ನಡುವಿನ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದು. ಆರಂಭದಲ್ಲಿ, ವೀಡಿಯೊದಲ್ಲಿರುವ ಮಗು ಆಟಿಕೆ ಕಾರನ್ನು ಶೆಲ್ಫ್‌ನಲ್ಲಿರುವುದನ್ನು ನೋಡುತ್ತದೆ, ಅದರ ಮುಂದೆ "ಮುಟ್ಟಬೇಡಿ'' ಎಂದು ಬರೆಯಲಾಗಿರುತ್ತದೆ. ಎಚ್ಚರಿಕೆಯ ಹೊರತಾಗಿಯೂ ಮಗು ಆಟಿಕೆ ಕಾರನ್ನು ಮುಟ್ಟುತ್ತದೆ. ಅಜ್ಜ ಲಘು ಸ್ವರದಿಂದ ಮಗುವನ್ನು ಮಾತನಾಡಿದಾಗ, ಆಟಿಕೆ ಕಾರು ಇಲ್ಲಿ ಏಕೆ ಇದೆ ಎಂದು ಪ್ರಶ್ನಿಸುತ್ತದೆ.

ಮಾರುತಿ ಜಿಮ್ನಿ ಹೊಸ ಜಾಹೀರಾತು ಬಿಡುಗಡೆ... ಮಗನ ಕನಸಿನ ಕಾರಿನ ಬಗ್ಗೆ ಮೊಮ್ಮಗನಿಗೆ ಕಥೆ ಹೇಳಿದ ಅಜ್ಜ

ಅದಕ್ಕೆ ಅಜ್ಜ, ಈ ಆಟಿಕೆ ಕಾರು ನಿನ್ನ್ ತಂದೆಗೆ ಸೇರಿದ್ದು ಅವನ ಕನಸಿನ ಕಾರಿದು ಎಂದು ಉತ್ತರಿಸುತ್ತಾನೆ. ಬಳಿಕ "ನಾನು ನಿನಗೆ ಒಂದು ಕಥೆ ಹೇಳುತ್ತೇನೆ" ಎಂದು ಹೇಳುವ ಮೂಲಕ ಜಿಮ್ನಿಯಾ ಮೊದಲ ತಲೆಮಾರಿನ ಮಾದರಿಯ ಕುರಿತು ಹೇಳಲು ಪ್ರಾರಂಭಿಸುತ್ತಾನೆ. ವಿಶ್ವದ ಮೊದಲ ಜಂಬೋ ಜೆಟ್ ಆಗಿ ಬೋಯಿಂಗ್ 747 ಅನ್ನು ಪ್ಯಾನ್ ಆಮ್‌ನೊಂದಿಗೆ ಸೇವೆಗೆ ಸೇರಿಸಲಾಯಿತು. ಜನರನ್ನು ಆಕಾಶದಲ್ಲಿ ಎತ್ತರಕ್ಕೆ ಕೊಂಡೊಯ್ಯಲು ಮೊದಲ ಜಂಬೋ ಜೆಟ್ ಅನ್ನು ರಚಿಸಲಾಯಿತು. ಹಾಗೆಯೇ ಜಿಮ್ನಿಯ ರಚನೆಯು ಜನರನ್ನು ಎತ್ತರಕ್ಕೆ ಮತ್ತು ದೂರಕ್ಕೆ ಕರೆದೊಯ್ಯಲು ನಿರ್ಮಿಸಲಾಗಿದೆ ಎಂದು ಅಜ್ಜ ಹೇಳುತ್ತಾನೆ.

ಮೊದಲ ಜಿಮ್ನಿಯ ಯಶಸ್ಸಿನ ನಂತರ ಎರಡನೇ ತಲೆಮಾರಿನ ಜಿಮ್ನಿ 1981 ರಲ್ಲಿ ಲಗ್ಗೆಯಿಟ್ಟಿತು. ಎರಡನೇ ಜನ್ ಎಸ್‌ಯುವಿಯನ್ನು ಪ್ರಬಲ ಪರ್ವತಗಳು, ನದಿಗಳು ಮತ್ತು ಮರಳುಗಾಡುಗಳ ಮೂಲಕ ಚಲಿಸುವಂತೆ ಮಾಡಲಾಯಿತು ಎಂದಾಗ, ಮಗು ಕುತೂಹಲದಿಂದ ಮುಂದೇನಾಯಿತು ಎಂದು ಕೇಳುತ್ತದೆ. ಅದಕ್ಕೆ ಅಜ್ಜ ಉತ್ತರಿಸಿ 1998 ರಲ್ಲಿ ಜಿಮ್ನಿ ಮತ್ತೊಮ್ಮೆ ಬದಲಾಯಿತು. ಜಿಮ್ನಿಯ ಈ ಮಾದರಿಯನ್ನು "ಮೌಂಟೇನ್ ಮೇಕೆ" ಎಂದು ಕರೆಯುವುದಾಗಿ ಹೇಳಿದರು.

ಇದನ್ನು ಅನುಸರಿಸಿ ಅವರು 2023 ರ ಜಿಮ್ನಿ ಕುರಿತು ಹೇಳುವಾಗ, ಹೊಸ ನಾಲ್ಕನೇ ತಲೆಮಾರಿನ ಜಿಮ್ನಿ ಮನೆಯ ಕಿಟಕಿಯ ಮುಂದೆ ಬರುತ್ತದೆ. ಮಗು ಮತ್ತು ಅಜ್ಜ ಅದನ್ನು ಒಮ್ಮೆ ನೋಡುತ್ತಾರೆ. ಆಗ ಅಜ್ಜ ತನ್ನ ಮೊಮ್ಮಗನಿಗೆ ಹೇಳುತ್ತಾ "ನಿಮ್ಮ ತಂದೆ ಅಂತಿಮವಾಗಿ ತನ್ನ ಕನಸಿನ ಕಾರನ್ನು ಪಡೆದಂತೆ ತೋರುತ್ತಿದೆ ಎನ್ನುತ್ತಾರೆ." ಈ ಜಾಹಿರಾತಿನಲ್ಲಿ ಜಿಮ್ನಿ ಮಾನಿಕರ್ ಒಯ್ಯುವ ಪರಂಪರೆಯನ್ನು ಉತ್ತಮವಾಗಿ ಚಿತ್ರಿಸಲಾಗಿದೆ. ಈ ಮೂಲಕ ಇದು ಜಗತ್ತಿನ ಅತ್ಯಂತ ಜನಪ್ರಿಯ ಆಫ್-ರೋಡಿಂಗ್ SUV ಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

ಐದು-ಬಾಗಿಲಿನ ಜಿಮ್ನಿ, ಈಗಾಗಲೇ ಜನಪ್ರಿಯವಾಗಿರುವ ನಾಲ್ಕನೇ ಜನ್ ಮೂರು-ಬಾಗಿಲಿನ ಜಿಮ್ನಿಯ ಉದ್ದನೆಯ ಪುನರಾವರ್ತನೆಯಾಗಿದೆ, ಇದು 2018 ರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಹೊಸ ಜಿಮ್ನಿ ಫೈವ್ ಡೋರ್ ಲ್ಯಾಡರ್-ಆನ್-ಫ್ರೇಮ್ ಚಾಸಿಸ್ ಮತ್ತು ಮೀಸಲಾದ ಆಫ್-ರೋಡ್ ಸಿಸ್ಟಮ್‌ನೊಂದಿಗೆ ದೇಶದಲ್ಲಿ ಬ್ರ್ಯಾಂಡ್‌ನ ಏಕೈಕ ಕೊಡುಗೆಯಾಗಿದೆ. SUV ಸುಜುಕಿ ಆಲ್‌ಗ್ರಿಪ್ ಪ್ರೊ ಸಿಸ್ಟಮ್‌ನೊಂದಿಗೆ ಸಜ್ಜುಗೊಂಡಿದೆ. ಇದು 2H, 4H ಮತ್ತು 4L ಕಡಿಮೆ-ಶ್ರೇಣಿಯ ವರ್ಗಾವಣೆ ಗೇರ್ ಅನ್ನು ಒಳಗೊಂಡಿದೆ.

ಸದ್ಯಕ್ಕೆ ಕಂಪನಿಯು ಈ ಎಸ್‌ಯುವಿಯ ಬೆಲೆಯನ್ನು ಘೋಷಿಸಿಲ್ಲವಾದರೂ ಇದು ರೂ. 12 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಇಂಡೋ-ಜಪಾನೀಸ್ ಕಾರು ತಯಾರಕರಿಂದ ಪ್ರಸ್ತುತ ದೇಶಕ್ಕೆ ನಿರ್ದಿಷ್ಟ ಆಫ್-ರೋಡ್ ವ್ಯವಸ್ಥೆಯನ್ನು ಒದಗಿಸುವ ಏಕೈಕ ವಾಹನ ಜಿಮ್ನಿ ಆಗಿದೆ. ಈ ಮಾರುತಿ ಜಿಮ್ನಿಯು ಬಿಡುಗಡೆ ಬಳಿಕ ಥಾರ್‌ಗೆ ತೀರ್ವ ಪೈಪೋಟಿ ನೀಡುವ ನಿರೀಕ್ಷೆಯಿದೆ. ಆದರೆ ಥಾರ್ ಕೂಡ ಉತ್ತಮ ಮಾರಾಟ ಗಳಿಸುತ್ತಿದ್ದು, ಈ ಎರಡೂ ವಾಹನಗಳ ಪೈಪೋಟಿ ನೋಡಲು ಕೆಲ ದಿನಗಳು ಕಾಯಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, February 7, 2023, 13:01 [IST]
English summary
Maruti jimny new ad release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+