Maruti Jimny ಇತ್ತೀಚೆಗಷ್ಟೆ ಡೆಲಿವರಿ ಆರಂಭ: ಆಗ್ಲೆ ಸೆಕೆಂಡ್‌ ಹ್ಯಾಂಡ್ ಮಾರ್ಕೆಟ್‌ನಲ್ಲಿ ದರ್ಶನ!

ಮಾರುತಿ ಸುಜುಕಿ ಗ್ರಾಹಕರಲ್ಲಿ ತುಂಬಾ ನಿರೀಕ್ಷೆ ಹುಟ್ಟಿಸಿ ಇದೇ ವರ್ಷದ ಆರಂಭದಲ್ಲಿ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಐದು ಬಾಗಿಲಿನ Maruti Jimny ಅನಾವರಣಗೊಳಿಸಿತ್ತು. ಅನಾವರಣದ ಬಳಿಕ ಕಾರಿನ ಅಧಿಕೃತ ಬಿಡುಗಡೆಯೂ ಆಗಿದೆ, ಡೆಲಿವರಿ ಕೂಡ ಇತ್ತೀಚೆಗಷ್ಟೇ ಆರಂಭವಾಗಿದೆ. ಆದ್ರೆ ಅಷ್ಟೇ ಬೇಗ ಸೆಕೆಂಡ್‌ ಹ್ಯಾಂಡ್ ಮಾರುಕಟ್ಟೆಗೂ ತಲುಪಿದೆ.

ಮಾಹಿತಿಯ ಪ್ರಕಾರ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಜಿಮ್ನಿ SUV ಗಾಗಿ 30,000 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಸಂಗ್ರಹಿಸಿದೆ. ಪ್ರಸ್ತುತ, ಟಾಪ್-ಆಫ್-ಲೈನ್ ಆಲ್ಫಾ ಆಟೋಮ್ಯಾಟಿಕ್ ರೂಪಾಂತರಕ್ಕಾಗಿ ಸುಮಾರು 8 ತಿಂಗಳುಗಳು ಕಾಯಬೇಕಿದೆ. ಆದರೆ, ನಮೆಗೆ ದೀರ್ಘ ಕಾಲ ಕಾಯುವ ತಾಳ್ಮೆಯಿಲ್ಲ ಎಂದುಕೊಳ್ಳುವವರು ಈ ಸೆಕೆಂಡ್‌ ಹ್ಯಾಂಡ್ ಡೀಲರ್ ಅನ್ನು ಸಂಪರ್ಕಿಸಬಹುದು.

maruti-jimny-second-hand-market-details

ಪಂಜಾಬ್‌ನಲ್ಲಿರುವ ಉಪಯೋಗಿಸಿದ ಕಾರ್ ಡೀಲರ್‌ಶಿಪ್‌ ದೇಶದ ಮೊದಲ ಸೆಕೆಂಡ್‌ ಹ್ಯಾಂಡ್ ಮಾರುತಿ ಸುಜುಕಿ ಜಿಮ್ನಿಯನ್ನು ಮಾರಾಟಕ್ಕಿಟ್ಟಿದ್ದಾರೆ. ಈ ಕುರಿತ ಪ್ರಚಾರಕ್ಕಾಗಿ ಯುಟ್ಯೂಬ್‌ನಲ್ಲಿ ದಯಾಕರನ್ ಎಂಬಾತ ತಮ್ಮ ಚಾನೆಲ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದೇಶದ ಮೊದಲ ಬಳಸಿದ ಮಾರುತಿ ಸುಜುಕಿ ಜಿಮ್ನಿಯನ್ನು ಈ ಡೀಲರ್ ಹೊಂದಿರುವುದಾಗಿ ತಿಳಿಸಿದ್ದಾರೆ.

ಇದೇ ಡೀಲರ್‌ಶಿಪ್‌ನಲ್ಲಿ ಜಿಮ್ನಿ ಜೊತೆಗೆ ಮಹೀಂದ್ರಾ ಥಾರ್‌ ಕೂಡ ಇದ್ದು, ಎರಡೂ ಕಾರುಗಳು ಪಂಜಾಬ್‌ನ ಭಂಡಾರಿ ಕಾರ್ ಬಜಾರ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಎರಡೂ ಕಾರುಗಳ ಬೆಲೆಯನ್ನು ತಿಳಿಸಿಲ್ಲವಾದರೂ ಡೀಲರ್‌ಶಿಪ್‌ ಸಂಪರ್ಕಕ್ಕಾಗಿ ಫೋನ್‌ ನಂಬರ್‌ ಅನ್ನು ಹಂಚಿಕೊಂಡಿದ್ದಾರೆ. ಸೆಕೆಂಡ್‌ ಹ್ಯಾಂಡ್ ಆದ್ರೂ ಚಿಂತೆಯಿಲ್ಲ, ವಾಹನ ಶೀಘ್ರ ಕೈಸೇರಿದ್ರೆ ಸಾಕು ಎಂದುಕೊಳ್ಳುವವರು ಈ ಡೀಲರ್‌ ಅನ್ನು ಸಂಪರ್ಕಿಸಬಹುದು.

Maruti Jimny

ಉಳಿದಂತೆ ವಿಡಿಯೋದಲ್ಲಿ ಜಿಮ್ನಿ ಹಾಗೂ ಥಾರ್‌ ಅನ್ನು ಪಕ್ಕ-ಪಕ್ಕದಲ್ಲಿ ನಿಲ್ಲಿಸಿ ಹೋಲಿಕೆ ಮಾಡಲಾಗಿದೆ. ಎರಡು ಆಫ್ ರೋಡರ್‌ಗಳ ನಡುವಿನ ವ್ಯತ್ಯಾಸವನ್ನು ವಿವರಸಲಾಗಿದೆ. ಎರಡೂ ಕಾರ್‌ಗಳ ಮುಂಭಾಗ, ಬದಿ ಮತ್ತು ಹಿಂಭಾಗ, ವ್ಹೀಲ್‌ಬೇಸ್ ಮತ್ತು ಉದ್ದದಲ್ಲಿ ಒಂದೇ ರೀತಿಯದ್ದಾಗಿದ್ದರೂ, ಥಾರ್‌ಗೆ ಹೋಲಿಸಿದರೆ ಜಿಮ್ನಿ ಎತ್ತರ ಮತ್ತು ಅಗಲದಲ್ಲಿ ಸಾಕಷ್ಟು ಚಿಕ್ಕದಾಗಿದೆ.

ಜಿಮ್ನಿಯಲ್ಲಿರುವ 15-ಇಂಚಿನ ವೀಲ್‌ಗಳಿಗೆ ಹೋಲಿಸಿದರೆ ಥಾರ್ ದೊಡ್ಡ 18-ಇಂಚಿನ ವೀಲ್‌ಗಳನ್ನು ಪಡೆದಿದೆ. ಎರಡನೇ ತಲೆಮಾರಿನ ಮಹೀಂದ್ರಾ ಥಾರ್ 2020 ರಲ್ಲಿ ಪ್ರಾರಂಭವಾದಾಗಿನಿಂದ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಯಶಸ್ವಿ ಓಟದ ಮೂಲಕ ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದೆ. ಪ್ರಬಲವಾದ ಪವರ್‌ಟ್ರೇನ್ ಆಯ್ಕೆಗಳು ಮತ್ತು ಸಮರ್ಥ 4-ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಹೆಚ್ಚಿನ ಬೇಡಿಕೆ ಪಡೆದಿದೆ.

ಜನವರಿ 2023 ರಲ್ಲಿ ಬಿಡುಗಡೆಯಾದ ಥಾರ್‌ನ ಹಿಂಬದಿ-ಚಕ್ರ-ಡ್ರೈವ್ ಆವೃತ್ತಿಗಳು ಥಾರ್‌ನತ್ತ ಜನರ ಆಸಕ್ತಿಯನ್ನು ಹೆಚ್ಚಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟವಾಗುವ ಥಾರ್‌ಗಿಂತ ಭಿನ್ನವಾಗಿ, ಮಾರುತಿ ಜಿಮ್ನಿ ಕೇವಲ 1.5 ಲೀಟರ್ 104 PS ಪೆಟ್ರೋಲ್ ಎಂಜಿನ್‌ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಆಯ್ಕೆಗಳೊಂದಿಗೆ ನೀಡಲಾಗುವುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, June 21, 2023, 12:01 [IST]
English summary
Maruti jimny second hand market details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+