2 ಲಕ್ಷ ಕಡಿಮೆ ಬೆಲೆಯಲ್ಲಿ ಮಾರುತಿ ಜಿಮ್ನಿಯ ಥಂಡರ್ ಎಡಿಷನ್ ಬಿಡುಗಡೆ: ಥಾರ್‌ಗೆ ಆತಂಕ ಶುರು
ಮಾರುತಿ ಜಿಮ್ನಿ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ. ಇದೀಗ ದೇಶದ ಅತಿದೊಡ್ದ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಜಿಮ್ನಿ ಲೈಫ್‌ಸ್ಟೈಲ್ ಆಫ್ ರೋಡ್ ಎಸ್‌ಯುವಿಯ ಹೊಸ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದು, ಇದಕ್ಕೆ ಮಾರುತಿ ಜಿಮ್ನಿ ಥಂಡರ್ ಎಡಿಷನ್ (Maruti Jimny Thunder Edition) ಎಂಬ ಹೆಸರನ್ನು ನೀಡಲಾಗಿದೆ.
ಮಾರುತಿ ಜಿಮ್ನಿ ಥಂಡರ್ ಎಡಿಷನ್ ಝೀಟಾ ಮತ್ತು ಆಲ್ಫಾ ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ. ಈ ಸ್ಪೆಷಲ್ ಎಡಿಷನ್ ಮಾದರಿಯು ಝೀಟಾ ಮತ್ತು ಆಲ್ಫಾ ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ. ಇದೀಗ ಮಾರುತಿ ಜಿಮ್ನಿಯ ವಿಶೇಷ ಆವೃತ್ತಿಯ ಆವೃತ್ತಿಯನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ತಂದಿದೆ. ಈ ಮಾರುತಿ ಜಿಮ್ನಿ ಥಂಡರ್ ಎಡಿಷನ್ ಮಾದರಿಯ ಬೆಲೆಯು ರೂ.10.74 ಲಕ್ಷದಿಂದ ರೂ.14.05 ಲಕ್ಷವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಈ ಲಿಮಿಟೆಡ್ ಎಡಿಷನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ವಿವಿಧ ಕಾಸ್ಮೆಟಿಕ್ ಅಪ್ಡೇಟ್ ಪಡೆದುಕೊಂದಿದೆ. ಸ್ಟ್ಯಾಂಡರ್ಡ್ ಜಿಮ್ನಿ ಮಾದರಿಗೆ ಹೋಲಿಸಿದರೆ 2 ಲಕ್ಷ ರೂ. ಕಡಿಮೆಯಾಗಿದೆ. ಜಿಮ್ನಿ ಥಂಡರ್ ಎಡಿಷನ್ ಮುಂಭಾಗದ ಬಂಪರ್, ORVM ಗಳು, ಬಾನೆಟ್ ಮತ್ತು ಸೈಡ್ ಫೆಂಡರ್‌ನಲ್ಲಿ ವಿಶೇಷ ಅಲಂಕಾರವನ್ನು ಹೊಂದಿದೆ. ಹೆಚ್ಚುವರಿ ಅಕ್ಸೆಸರೀಸ್ ಗಳಲ್ಲಿ, ಸೈಡ್ ಡೋರ್ ಕ್ಲಾಡಿಂಗ್, ಫ್ರಂಟ್ ಸ್ಕಿಡ್ ಪ್ಲೇಟ್, ಡೋರ್ ಸಿಲ್ ಗಾರ್ಡ್ ಮತ್ತು ವಿಶೇಷ ಗ್ರಾಫಿಕ್ಸ್ ಸೇರಿವೆ.
ಇನ್ನು ಈ ಎಸ್‍ಯುವಿಯ ಒಳಭಾಗದಲ್ಲಿ ಕಂದು ಬಣ್ಣವನ್ನು ಪಡೆಯುತ್ತದೆ. ಇನ್ನು ಉಳಿದಂತೆ ಯಾವುದೇ ಬದಲಾವಣೆಗಳಿಲ್ಲ. ಮಾರುತಿ ಜಿಮ್ನಿ ಎಸ್‍ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 6000 rpm ನಲ್ಲಿ 104.8 ಪಿಎಸ್ ಗರಿಷ್ಠ ಪವರ್ ಹಾಗೂ 4000 rpm ನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಎಸ್‍ಯುವಿಯು 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಮಾರುತಿ ಸುಜುಕಿ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 16.94 ಕಿ,ಮೀ ಮೈಲೇಜ್ ನೀಡಿದರೆ, ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 16.39 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಹಳೆಯ ಜಿಪ್ಸಿಯಂತೆಯೇ, ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಬಳಸುತ್ತದೆ. ಜಿಮ್ನಿ ಕಾಂಪ್ಯಾಕ್ಟ್ ಆಯಾಮಗಳನ್ನು ಹೊಂದಿದೆ, ಇದು ಗರಿಷ್ಠ ಟ್ರಾಫಿಕ್ ಸಮಯದಲ್ಲಿ ಚಾಲನೆ ಮಾಡಲು ಸುಲಭ. ರಸ್ತೆಯಲ್ಲಿ ಕಡಿಮೆ ಜಾಗ ಸಾಕಾಗುತ್ತದೆ. ಅದರ ಹೊರತಾಗಿ, ಜಿಮ್ನಿಯು ಕುಶಲತೆಯಿಂದ ಕಂಟ್ರೋಲ್ ಮಾಡಲು ತುಂಬಾ ಸುಲಭವಾಗಿದೆ. ಏಕೆಂದರೆ ಇದು ತೂಕದಲ್ಲಿ ಹೆಚ್ಚು ಹಗುರವಾಗಿರುತ್ತದೆ.
ಈ ಮಾರುತಿ ಜಿಮ್ನಿ 5 ಡೋರ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಂಡ್ರಾಯ್ಡ್ ಆಟೋ ಹೊಂದಿದೆ. ಇದರೊಂದಿಗೆ ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಹಾಗೂ ಕಿವಿಗೆ ಕೇಳಲು ಹಿತವಾಗಿರುವ ಸೌಂಡ್ ಸಿಸ್ಟಮ್ ಹೊಂದಿದೆ.
ಇನ್ನು ಮಾರುತಿ ಜಿಮ್ನಿ ಎಸ್‍ಯುವಿಯ ಸುರಕ್ಷತಾ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಇದು 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಸೈಡ್ ಇಂಪ್ಯಾಕ್ಟ್ ಡೋರ್ ಬೀಮ್ಸ್ ಒಳಗೊಂಡಂತೆ ವಿವಿಧ ಪಿಚರ್ಸ್ ಗಳನ್ನು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications