ಮಾರುತಿ ಜಿಮ್ನಿ vs ಫೋರ್ಸ್ ಗೂರ್ಖಾ: ಬೆಸ್ಟ್ ಆಫ್‌ರೋಡರ್ ಬೇಕೇ? ಕಂಡಿತ ಇದನ್ನೊಮ್ಮೆ ಓದಿ...

ಭಾರತದಲ್ಲಿ ಈ ವರ್ಷದ ಬಹುನಿರೀಕ್ಷಿತ ಆಫ್‌ರೋಡ್‌ ಎಸ್‌ಯುವಿ ಎಂದರೆ ಅದು ಮಾರುತಿ ಜಿಮ್ನಿ. ಇದೇ ವರ್ಷಾರಂಭದಲ್ಲಿ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಅನಾವರಣಗೊಳಿಸತ್ತು. ಸಾಧ್ಯವಾದಷ್ಟು ಉತ್ತಮ ಬುಕಿಂಗ್‌ಗಳನ್ನು ಕೂಡ ಪಡೆದುಕೊಂಡಿದೆ. ಸದ್ಯ ಇದರ ಎದುರಾಳಿಯಾದ ಫೋರ್ಸ್ ಗೂರ್ಖಾ ನಡುವಿನ ವ್ಯತ್ಯಾಸವನ್ನು ಇಲ್ಲಿ ನೋಡಣ.

ಬೆಲೆ: ಕಂಪನಿಯು ಜಿಮ್ನಿಯ ಬೆಲೆಯನ್ನು ಇನ್ನೂ ಘೋಷಿಸಿಲ್ಲ ಆದರೆ, ಮಾರುತಿ ಸುಜುಕಿ ಭಾರತದಲ್ಲಿ ಮಾರಾಟವಾಗುವ ಇತರ ಆಫ್‌ರೋಡ್‌ ಎಸ್‌ಯುವಿಗಳಿಗೆ ಹೋಲಿಸಿದರೆ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು ಗೂರ್ಖಾಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಫೋರ್ಸ್ ಗೂರ್ಖಾ ರೂ. 14.75 ಲಕ್ಷ ಎಕ್ಸ್ ಶೋರೂಂ ಬೆಲೆ ಹೊಂದಿದೆ.

Maruti Jimny

ಉದ್ದಳತೆಗಳು: ಮಾರುತಿ ಜಿಮ್ನಿ ವೀಲ್‌ಬೇಸ್ ಹೊರತುಪಡಿಸಿ ಎಲ್ಲಾ ಅಂಶಗಳಲ್ಲಿ ಗೂರ್ಖಾ ದೊಡ್ಡದಾಗಿದೆ. ಗೂರ್ಖಾ 4,116 ಮಿ.ಮೀ ಉದ್ದ, 1,812 ಮಿ.ಮೀ ಅಗಲ ಮತ್ತು 2,075 ಮಿ.ಮೀ ಎತ್ತರವಿದೆ. ಜಿಮ್ನಿಯನ್ನು ನೋಡುವುದಾದ್ರೆ 3,985 ಮಿ.ಮೀ ಉದ್ದ, 1,645 ಮಿ.ಮೀ ಅಗಲ ಮತ್ತು 1,720 ಮಿ.ಮೀ ಎತ್ತರವನ್ನು ಹೊಂದಿದೆ. ಇದು 2,590 ಮಿ.ಮೀ ವೀಲ್‌ಬೇಸ್ ಹೊಂದಿದೆ.

ಪವರ್ ಮತ್ತು ಪರ್ಫಾಮೆನ್ಸ್: ಫೋರ್ಸ್ ಗೂರ್ಖಾ 89 bhp ಮತ್ತು 250 Nm ಉತ್ಪಾದಿಸುವ ಮರ್ಸಿಡಿಸ್ ಮೂಲದ 2.6-ಲೀಟರ್ ಡೀಸೆಲ್ ಎಂಜಿನ್‌ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯಿಲ್ಲ. ಇದು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಮ್ಯಾನುಯಲ್ ಡಿಫರೆನ್ಷಿಯಲ್ ಲಾಕ್‌ಗಳೊಂದಿಗೆ ಬರುತ್ತದೆ.

Maruti Jimny

ಜಿಮ್ನಿಯು 1.5-ಲೀಟರ್ K15B, ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ ಹೊಂದಿದೆ. 103 bhp ಮತ್ತು 134 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಸಂಯೋಜಿಸಲ್ಪಟ್ಟಿದೆ. ಇದು ಸುಜುಕಿಯ AllGrip Pro 4x4 ಸಿಸ್ಟಮ್ ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ.

ಜಿಮ್ನಿಯನ್ನು ಭಾರತದಲ್ಲಿ ಕೇವಲ 5-ಬಾಗಿಲಿನ ಆವೃತ್ತಿಯಲ್ಲಿ ಮಾತ್ರ ನೀಡಲಾಗುತ್ತಿದೆ. ಆದರೆ ಫೋರ್ಸ್ ಗೂರ್ಖಾ ಮೂರು-ಬಾಗಿಲಿನ ಆವೃತ್ತಿಯಲ್ಲಿ ಹಿಂದಿನ ಸೀಟ್‌ಗಳೊಂದಿಗೆ ಬರುತ್ತದೆ. ಜಿಮ್ನಿ ಆರು ಏರ್‌ಬ್ಯಾಗ್‌ಗಳು, ಎಂಜಿನ್ ಸ್ಟಾರ್ಟ್/ಸ್ಟಾಪ್ ಪುಶ್ ಬಟನ್, ಆಟೋಮ್ಯಾಟಿಕ್ ಎಲ್‌ಇಡಿ ಹೆಡ್‌ಲ್ಯಾಂಪ್, ಹೆಡ್‌ಲ್ಯಾಂಪ್ ವಾಷರ್‌ಗಳೊಂದಿಗೆ ಬರುತ್ತದೆ.

Maruti Jimny

ಮಾರುತಿ ಜಿಮ್ನಿ ವೈಶಿಷ್ಟ್ಯಗಳನ್ನು ನೋಡುವುದಾದ್ರೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 9-ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಇಎಸ್‌ಪಿ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಇದೆ.

ಗೂರ್ಖಾ ಬಗ್ಗೆ ಹೇಳುವುದಾದರೆ ಡ್ಯುಯಲ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಡಿಆರ್‌ಎಲ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಕಾರ್ನರಿಂಗ್ ಲ್ಯಾಂಪ್‌ಗಳು, 12 ವಿ ಆಕ್ಸೆಸರಿ ಸಾಕೆಟ್ ಮತ್ತು ಯುಎಸ್‌ಬಿ ಸಾಕೆಟ್‌ಗಳನ್ನು ಹೊಂದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಕೂಡ ಇದ್ದು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಪಡೆಯುತ್ತದೆ.

Article Published On: Saturday, May 27, 2023, 15:46 [IST]
English summary
Maruti jimny vs force gurkha price design features difference
Read more on auto news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+