ಮಾರುತಿ ಗ್ರಾಹಕರಿಗೆ ಬಂಪರ್ ಆಫರ್... 2025ಕ್ಕೆ ಸಾಕಷ್ಟು ಬದಲಾವಣೆ, 31ರ ವೇಳೆಗೆ ಆರು ಇವಿಗಳು ಖಚಿತ
ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಇಂಡಿಯಾ, ಮಾರ್ಚ್ 2025 ರ ವೇಳೆಗೆ 57 ಹೊಸ Nexa ಶೋರೂಂಗಳನ್ನು ತೆರೆಯಲು ಯೋಜಿಸಿದೆ. ಅವರ ಉನ್ನತ ಮಟ್ಟದ ಪ್ರೀಮಿಯಂ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿದುಬಂದಿದೆ.
ಮಾರುತಿ ಸುಜುಕಿಗೆ ಹೊಸ ರೀತಿಯ ಗ್ರಾಹಕರನ್ನು ಪರಿಚಯಿಸಲು Nexa ವನ್ನು ವಿನ್ಯಾಸಗೊಳಿಸಲಾಗಿದೆ. ಮಾರುತಿ ಸುಜುಕಿ ವಿಶ್ವಾಸಾರ್ಹತೆ, ಗುಣಮಟ್ಟ, ವಿಶಾಲವಾದ ನೆಟ್‌ವರ್ಕ್, ಕಡಿಮೆ ನಿರ್ವಹಣಾ ವೆಚ್ಚಗಳು ಮತ್ತು ಹಣಕ್ಕೆ ತಕ್ಕ ಮೌಲ್ಯಕ್ಕೆ ಹೆಸರುವಾಸಿಯಾಗಿದೆ. ಆರ್ಥಿಕತೆಯು ಬೆಳೆದಂತೆ, ಅವರ ಖರೀದಿಗಳಿಗೆ ವಿಭಿನ್ನ ಮಾನದಂಡಗಳನ್ನು ಹೊಂದಿರುವ ಗ್ರಾಹಕರ ಗುಂಪನ್ನು ನಾವು ಗುರುತಿಸಿದ್ದೇವೆ ಎಂದು ಮಾರುತಿ ಸುಜುಕಿ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀವಾಸ್ತವ ಹೇಳಿದ್ದಾರೆ.

ಮಾರುತಿ ಸುಜುಕಿ ಕಂಪನಿಯ ಇತ್ತೀಚಿನ ವಾರ್ಷಿಕ ವರದಿ ಬಗ್ಗೆ ಮಾತನಾಡಿದ ಅಧ್ಯಕ್ಷ ಆರ್.ಸಿ ಭಾರ್ಗವ, ಆರ್ಥಿಕ ವರ್ಷ 2031 ರ ವೇಳೆಗೆ ಆರು ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಸೇರಿದಂತೆ ಸುಮಾರು 28 ಹೊಸ ಕಾರುಗಳನ್ನು ತರಲು ಯೋಜನೆಯಿದೆ. ಪ್ರಸ್ತುತ, ಕಂಪನಿಯು 18 ವಿಭಿನ್ನ ಮಾದರಿಗಳನ್ನು ನೀಡುತ್ತಿದೆ. 2031 ರವರೆಗೆ ಭಾರತೀಯ ಕಾರು ಉದ್ಯಮಕ್ಕೆ ಶೇ6 ರಷ್ಟು ವಾರ್ಷಿಕ ಬೆಳವಣಿಗೆ ದರವನ್ನು ನಿರೀಕ್ಷಿಸಿರುವುದಾಗಿ ತಿಳಿಸಿದರು.
ಹೆಚ್ಚಾಯ್ತು ಮಾರಾಟ: ನೆಕ್ಸಾ ಈ ಜುಲೈವರೆಗೆ ಮಾರುತಿ ಸುಜುಕಿ ಇಂಡಿಯಾದ ಒಟ್ಟು ಮಾರಾಟದಲ್ಲಿ ಶೇ 31 ರಷ್ಟು ಪಾಲನ್ನು ಹೊಂದಿದೆ. ಇದು ಶ್ರೀವಾಸ್ತವ ಹೇಳಿದಂತೆ ಇಡೀ ಆರ್ಥಿಕ ವರ್ಷ 2023 (2022-23) ಕ್ಕೆ ಶೇ 22.4 ರಷ್ಟು ಹೆಚ್ಚಾಗಿದೆ. ಮಾರುತಿ ಸುಜುಕಿಯ ಹದಿನೇಳು ಪ್ರಯಾಣಿಕ ವಾಹನಗಳ ಪೈಕಿ ಅಗ್ರ ಎಂಟು ಮಾದರಿಗಳಾದ ಇಗ್ನಿಸ್, ಗ್ರ್ಯಾಂಡ್ ವಿಟಾರಾ, ಬಲೆನೊ, ಫ್ರಾಂಕ್ಸ್, ಜಿಮ್ನಿ, ಸಿಯಾಜ್, ಇನ್ವಿಕ್ಟೊ ಮತ್ತು XL6 - ನೆಕ್ಸಾ ಶೋರೂಮ್‌ಗಳ ಮೂಲಕ ಮಾರಾಟವಾಗುತ್ತವೆ.

ಉಳಿದ ಮಾದರಿಗಳು ಕಂಪನಿಯ 2,842 ಅರೆನಾ ಔಟ್‌ಲೆಟ್‌ಗಳಲ್ಲಿ ಲಭ್ಯವಿವೆ. ಇದಲ್ಲದೆ, ಕಂಪನಿಯು ತನ್ನ ವಾಣಿಜ್ಯ ವಾಹನವಾದ ಸೂಪರ್ ಕ್ಯಾರಿಯನ್ನು ಪ್ರತ್ಯೇಕ ವಾಣಿಜ್ಯ ಮಳಿಗೆಗಳ ಮೂಲಕ ಮಾರಾಟ ಮಾಡುತ್ತದೆ. ಕಳೆದ ಕೆಲವು ವರ್ಷಗಳಿಂದ, ಮಾರುತಿ ಸುಜುಕಿ, ಯುಟಿಲಿಟಿ ವೆಹಿಕಲ್ (UV) ವಿಭಾಗದಲ್ಲಿ, ವೇಗವಾಗಿ ಬೆಳೆಯುತ್ತಿರುವ ವಲಯದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವತ್ತ ಗಮನಹರಿಸಿದೆ.
ಕಂಪನಿಯು ಈ ವರ್ಗದಲ್ಲಿ ಗ್ರ್ಯಾಂಡ್ ವಿಟಾರಾ, ಜಿಮ್ನಿ, ಫ್ರಾಂಕ್ಸ್ ಮತ್ತು ಇನ್ವಿಕ್ಟೊದಂತಹ ಮಾದರಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಕಾರ್ಯತಂತ್ರದ ಬದಲಾವಣೆಯು ಆರ್ಥಿಕ ವರ್ಷ 2024 ರ ಮೊದಲ ತ್ರೈಮಾಸಿಕದಲ್ಲಿ UV ವಿಭಾಗದಲ್ಲಿ ಶೇ23.12 ರಷ್ಟು ಮಾರುಕಟ್ಟೆ ಪಾಲನ್ನು ಪಡೆಯಲು ಮಾರುತಿ ಸುಜುಕಿಗೆ ಸಹಾಯ ಮಾಡಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 17.4 ರಷ್ಟು ಹೆಚ್ಚಾಗಿದೆ.

ಮಾರುತಿ ಸುಜುಕಿ ಅರೆನಾ ಗ್ರಾಹಕರಿಗೆ ಹೋಲಿಸಿದರೆ Nexa ಗ್ರಾಹಕರು ಸ್ವಲ್ಪ ಕಡಿಮೆ ಇದ್ದಾರೆ. ಇವರೆಲ್ಲರೂ ಹೆಚ್ಚು ನಗರವಾಸಿಗಳೇ ಆಗಿದ್ದಾರೆ. ಇವರೆಲ್ಲಾ ಹೆಚ್ಚಿನ ಸರಾಸರಿ ಮಾಸಿಕ ಆದಾಯವನ್ನು ಹೊಂದಿದ್ದಾರೆ. ಜುಲೈನಲ್ಲಿ, ನೆಕ್ಸಾ ಭಾರತದ ಆಟೋ ಉದ್ಯಮದಲ್ಲಿನ ಎಲ್ಲಾ ಮಾರಾಟಗಳಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಆರ್ಥಿಕ ವರ್ಷ 2022 ರಲ್ಲಿ ಅಗ್ರ ನಾಲ್ಕು ಮಾರಾಟ ಬ್ರಾಂಡ್‌ಗಳನ್ನು ನೋಡುವುದಾದ್ರೆ ಈ ಕೆಳಗಿನಂತಿವೆ.
ಮೊದಲ ಸ್ಥಾನದಲ್ಲಿ ಮಾರುತಿ ಅರೆನಾ, ಹ್ಯುಂಡೈ, ಟಾಟಾ ಮೋಟಾರ್ಸ್ ಮತ್ತು ನೆಕ್ಸಾ ನಾಲ್ಕನೇ ಸ್ಥಾನದಲ್ಲಿದೆ. ಹೀಗೆ ನೋಡಿಕೊಂಡರೆ ಮಾರುತಿ ಸುಜುಕಿಯ ಪ್ರೀಮಿಯಂ ಮಾದರಿಗಳಿಗೂ ಬೇಡಿಕೆ ಹೆಚ್ಚಾಗಿದೆ. ಇದು ಮುಂದಿನ ದಿನಗಳಲ್ಲಿ ಇತರ ಬ್ರಾಂಡ್‌ಗಳನ್ನು ಹಿಂದಿಕ್ಕುವ ನಿರೀಕ್ಷೆಯಿದ್ದು ಮೊದಲೆರಡು ಸ್ಥಾನಗಳಲ್ಲಿ ಅರೆನಾ ಹಾಗೂ ನೆಕ್ಸಾವನ್ನು ತರಲು ಕಂಪನಿ ಯೋಜನೆ ರೂಪಿಸಿಕೊಂಡಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಕಾದು ನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications