Maruti Suzuki 3.0 ಬಹಿರಂಗ: ಅಗ್ಗದ ಆರು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಖಚಿತವೆಂದ ಮಾರುತಿ!
ಮಾರುತಿ ಸುಜುಕಿ 3.0 ದೃಷ್ಟಿಕೋನವು ಹೊಸ ಮಾದರಿಗಳು ಮತ್ತು ತಂತ್ರಜ್ಞಾನಗಳನ್ನು ತರುವುದು, ಕಾರ್ಬನ್ ಕಡಿಮೆ ಮಾಡುವುದರ ಜೊತೆಗೆ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವುದಾಗಿದೆ. ಮುಂಬರುವ ಒಂಬತ್ತು ವರ್ಷಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ನಾಲ್ಕು ಮಿಲಿಯನ್ (40 ಲಕ್ಷ) ಯುನಿಟ್‌ಗಳಿಗೆ ದ್ವಿಗುಣಗೊಳಿಸಲು ಯೋಜಿಸಲಾಗಿದೆ ಎಂದು ಮಾರುತಿ ಸುಜುಕಿ ಅಧ್ಯಕ್ಷ ಆರ್‌ಸಿ ಭಾರ್ಗವ ಹೇಳಿದ್ದಾರೆ.
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಆರ್ಥಿಕ ವರ್ಷ 2022-23 ಕ್ಕಾಗಿ ತನ್ನ ವಾರ್ಷಿಕ ಸಮಗ್ರ ವರದಿಯನ್ನು 'Maruti Suzuki 3.0' ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಿದೆ. 2022-23ರ ಕಂಪನಿಯ ವಾರ್ಷಿಕ ವರದಿಯಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಆರ್‌ಸಿ ಭಾರ್ಗವ, ಕಂಪನಿಯು ತನ್ನ ಮುಂದಿನ ಹಂತದ ಬೆಳವಣಿಗೆಗೆ ಏನೆಲ್ಲಾ ಪ್ರಸ್ತಾಪಿಸುತ್ತಿದೆ ಎಂಬುದನ್ನು ಆದಷ್ಟು ಬೇಗ ಪ್ರಕಟಿಸಲಿದೆ ಎಂದು ಹೇಳಿದರು.

ಮಾರುತಿ ಸುಜುಕಿ 3.0 ವ್ಯಾಪಾರ ಯೋಜನೆ ಕುರಿತು ಮಾತನಾಡಿ, ಭಾರತೀಯ ಕಾರು ಮಾರುಕಟ್ಟೆಯು ವಿಶ್ವದಲ್ಲೇ ಮೂರನೇ ಅತಿ ದೊಡ್ಡದಾಗಿದೆ. ಮಾರುತಿ ಸುಜುಕಿ 3.0 ಯೋಜನೆಯ ಭಾಗವಾಗಿ ಹೊಸ ಮಾದರಿಗಳು ಮತ್ತು ತಂತ್ರಜ್ಞಾನಗಳನ್ನು ತರುವುದು, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವುದು ಮುಖ್ಯ ಗುರಿಯಾಗಿದೆ ಎಂದರು.
ಆರ್ಥಿಕ ವರ್ಷ 2030-31 ರ ಹೊತ್ತಿಗೆ ಕಂಪನಿಯು 1.5 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳನ್ನು ಹೊರತರುವ ಗುರಿಯನ್ನು ಹೊಂದಿದೆ. ಮಾರುತಿ ಸುಜುಕಿ 3.0 ಯೋಜನೆಯ ಅಂತ್ಯದ ವೇಳೆಗೆ ತನ್ನ ದೇಶೀಯ ಮಾರುಕಟ್ಟೆಯಲ್ಲಿ 28 ವಾಹನಗಳನ್ನು ಹೊಂದಿರುತ್ತದೆ. ಇಂಡೋ-ಜಪಾನೀಸ್ ತಯಾರಕರು ಈ ಯೋಜನೆಯ ಅಂತ್ಯದ ವೇಳೆಗೆ ವರ್ಷಕ್ಕೆ ನಾಲ್ಕು ಮಿಲಿಯನ್‌ಗಿಂತಲೂ ಹೆಚ್ಚು ವಾಹನಗಳನ್ನು ಉತ್ಪಾದಿಸಲು ಯೋಜಿಸಿದ್ದಾರೆ ಎಂದು ತಿಳಿಸಿದರು.

ಇವುಗಳಲ್ಲಿ ಶೇ 15 ರಿಂದ 20 ರಷ್ಟು BEV (ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು) ಮತ್ತು ಹೈಬ್ರಿಡ್ ವಾಹನಗಳು ಸೇರಿವೆ. ಯೋಜಿತ 4 ಮಿಲಿಯನ್ ಯೂನಿಟ್‌ಗಳಲ್ಲಿ, 3.2 ಮಿಲಿಯನ್ ಯುನಿಟ್‌ಗಳನ್ನು ದೇಶೀಯ ಮಾರುಕಟ್ಟೆಗೆ ಹಂಚಲಾಗುತ್ತದೆ. ಮೊದಲೇ ಹೇಳಿದಂತೆ ಭಾರತದಲ್ಲಿ ಇಂಗಾಲವನ್ನು ಕಡಿಮೆ ಮಾಡುವುದು ಮುಖ್ಯ ಗುರಿಯಾಗಿದ್ದು, ಮಾರುತಿ ಸುಜುಕಿ ತನ್ನ ಉತ್ಪಾದನೆಯ ಶೇಕಡಾ 40 ರಷ್ಟು ಎಲೆಕ್ಟ್ರಿಫೈಡ್ ವಾಹನಗಳು ಮತ್ತು ಹೈಬ್ರಿಡ್ ಮಾಡೆಲ್‌ಗಳು ಸೇರಿವೆ.
ಮೊದಲೇ ಹೇಳಿದಂತೆ 2030-31 ರ ವೇಳೆಗೆ ಕಂಪನಿಯು ಸುಮಾರು 28 ವಿಭಿನ್ನ ಮಾದರಿಗಳನ್ನು ಹೊಂದಬಹುದು ಎಂದು ಕಂಪನಿ ಹೇಳಿದೆ. ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಯು ಗುಜರಾತ್ ಸೌಲಭ್ಯದಲ್ಲಿ ಮುಂದುವರಿಯುತ್ತಿದೆ. 2024-25ರಲ್ಲಿ ಮೊದಲ ಮಾದರಿಯ ಮಾರಾಟವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. 2030-31 ರ ವೇಳೆಗೆ 6 EV ಮಾದರಿಗಳನ್ನು ನಿರೀಕ್ಷಿಸಲಾಗಿದೆ.

ವರ್ಷಕ್ಕೆ ಸುಮಾರು 20,000 ಕಾರುಗಳನ್ನು ಉತ್ಪಾದಿಸುವುದರಿಂದ ಆರಂಭಿಸಿ ಈಗ ಆರ್ಥಿಕ ವರ್ಷ 2022-23 ರಲ್ಲಿ ವರ್ಷಕ್ಕೆ 2 ಮಿಲಿಯನ್ (20 ಲಕ್ಷ) ಕಾರುಗಳನ್ನು ಉತ್ಪಾದಿಸುವವರೆಗೆ ಕಂಪನಿಯು ಬೆಳೆದು ನಿಂತಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ 27 ಮಿಲಿಯನ್ ಗ್ರಾಹಕರನ್ನು ಮತ್ತು ಸುಮಾರು 100 ದೇಶಗಳಲ್ಲಿನ ಜನರನ್ನು ಸಂತೋಷಪಡಿಸಿದೆ ಎಂದರು.
"ಕಂಪನಿಯು ಈಗ 9 ವರ್ಷಗಳ ಅವಧಿಯಲ್ಲಿ ಮುಂದಿನ 2 ಮಿಲಿಯನ್ ಗುರಿಯನ್ನು ತಲುಪಬೇಕಾಗಿದೆ. ವರ್ಷಕ್ಕೆ 4 ಮಿಲಿಯನ್ ಯೂನಿಟ್‌ಗಳ ಉತ್ಪಾದನೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿರ್ವಹಿಸುವ ಕಾರ್ಯವು ಗಮನದಲ್ಲಿಟ್ಟುಕೊಂಡು ಕಂಪನಿಯ ರಚನೆಯ ಗಣನೀಯ ಚಿಂತನೆ ಮತ್ತು ಸಂಭವನೀಯ ಮರುಸಂಘಟನೆಯ ಅಗತ್ಯವಿದೆ. ನಾವು, ಸಾಧ್ಯವಾದಷ್ಟು ಬೇಗ ಏನನ್ನು ಪ್ರಸ್ತಾಪಿಸುತ್ತಿದ್ದೇವೆ ಎಂಬುದನ್ನು ಪ್ರಕಟಿಸುತ್ತೇವೆ ಎಂದು ಷೇರುದಾರರಿಗೆ ತಿಳಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications