ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿಯ 3 SUV ಅನಾವರಣ.. ಹೊಸ ಇವಿ 500 ಕಿ.ಮೀ ಮೈಲೇಜ್ ನೀಡುತ್ತದೆಯಂತೆ?

ಬಹುನಿರೀಕ್ಷಿತ ಆಟೋ ಎಕ್ಸ್‌ಪೋ ಈ ತಿಂಗಳು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿದೆ. ಮಹೀಂದ್ರಾ, ಸ್ಕೋಡಾ, ಫೋಕ್ಸ್‌ವ್ಯಾಗನ್, ಹೋಂಡಾ, ಬಿಎಂಡಬ್ಲ್ಯು ಮುಂತಾದ ದೊಡ್ಡ ಕಾರು ತಯಾರಕರು, ಈ ವರ್ಷ ಆಟೋ ಎಕ್ಸ್‌ಪೋದಿಂದ ದೂರ ಉಳಿದಿದ್ದಾರೆ. ಹ್ಯುಂಡೈ, ಮಾರುತಿ ಸುಜುಕಿ, ಟಾಟಾ ಮತ್ತು ಟೊಯೊಟಾ ಕಂಪನಿಗಳು ತಮ್ಮ ಕಾರುಗಳನ್ನು ಪ್ರದರ್ಶಿಸಲಿವೆ.

ಈ ಆಟೋ ಎಕ್ಸ್‌ಪೋ 2023ರಲ್ಲಿ ದೇಶದ ಅತಿದೊಡ್ಡ ವಾಹನ ತಯಾರಿಕ ಮಾರುತಿ ಸುಜುಕಿ, ಹೊಸ ಕಾರು ಮತ್ತು ಕೆಲವು ವಾಹನಗಳ ಪರಿಕಲ್ಪನೆ ಅನಾವರಣಗೊಳಿಸುವ ನಿರೀಕ್ಷೆಯಿದೆ. ಕಂಪನಿಯು ಈವೆಂಟ್‌ನಲ್ಲಿ ಮೂರು ಹೊಸ ಎಸ್‌ಯುವಿಗಳನ್ನು ಪ್ರದರ್ಶಿಸುವ ಸಾಧ್ಯತೆಯಿದೆ, ಇದರಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಪರಿಕಲ್ಪನೆಯನ್ನು ಪರಿಚಯಿಸಬಹುದು. ಇದರಿಂದ ಗ್ರಾಹಕರಿಗೆ ನಿರೀಕ್ಷೆಗಳು ಹೆಚ್ಚಿವೆ ಎಂದು ಹೇಳಬಹುದು. ಈ ವರ್ಷದ ಆಟೋ ಎಕ್ಸ್‌ಪೋದಲ್ಲಿ ಮೂರು ಬಹು ನಿರೀಕ್ಷಿತ ಮಾರುತಿ ಸುಜುಕಿ ಎಸ್‌ಯುವಿಗಳು ಇಲ್ಲಿವೆ.

ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿಯ 3 SUV ಅನಾವರಣ..

ಜಿಮ್ನಿ 5 - ಡೋರ್:
ಮಾರುತಿ ಸುಜುಕಿ ಜಿಮ್ನಿ ಆಫ್-ರೋಡಿಂಗ್ ಎಸ್‌ಯುವಿ 5-ಡೋರ್ ಆವೃತ್ತಿಯನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿದೆ. ಹೊಸ ಎಸ್‌ಯುವಿಯ ಉತ್ಪಾದನಾ ಆವೃತ್ತಿಯು ಆಟೋ ಎಕ್ಸ್‌ಪೋ 2023ನಲ್ಲಿ ತನ್ನ ಚೊಚ್ಚಲ ಬಾರಿಗೆ ಪ್ರದರ್ಶಿಸುವ ಸಾಧ್ಯತೆಯಿದೆ. ಜಿಮ್ನಿ 5-ಡೋರ್ ಉದ್ದವಾದ ವೀಲ್‌ಬೇಸ್ ಹೊಂದಿರಬಹುದು. 3-ಡೋರ್ ಆವೃತ್ತಿಗೆ ಹೋಲಿಸಿದರೆ, ಹೆಚ್ಚುವರಿ ಹಿಂಭಾಗದ ಬಾಗಿಲು ಹೊರತುಪಡಿಸಿ, ಎಸ್‌ಯುವಿಯ ಬೇರೆ ಯಾವುದೇ ಪ್ರಮುಖ ವಿನ್ಯಾಸ ಬದಲಾವಣೆಗಳನ್ನು ಮಾಡಿಲ್ಲ ಎಂದು ಹೇಳಲಾಗಿದೆ. ದೊಡ್ಡ ಫೆಂಡರ್ ಫ್ಲೇರ್‌ಗಳು, ರೌಂಡ್ ಹೆಡ್‌ಲ್ಯಾಂಪ್‌ಗಳು, ವರ್ಟಿಕಲ್ ಸ್ಲ್ಯಾಟ್ ಗ್ರಿಲ್ ಅನ್ನು ಪಡೆದಿರಬಹುದು.

ಮಾರುತಿ ಸುಜುಕಿ ಜಿಮ್ನಿ 5-ಡೋರ್ ಅನ್ನು ಕಂಪನಿಯ 1.5-ಲೀಟರ್ ನಾಲ್ಕು ಸಿಲಿಂಡರ್ K15B ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಖರೀದಿಗೆ ಲಭ್ಯವಾಗಬಹುದು. ಇದು 105PS ಗರಿಷ್ಠ ಪವರ್ ಮತ್ತು 138Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 5-ಸ್ಪೀಡ್ MT ಮತ್ತು ಐಚ್ಛಿಕ 4-ಸ್ಪೀಡ್ AT ಗೇರ್ ಬಾಕ್ಸ್ ಹೊಂದಿರಲಿದ್ದು, ಸುಜುಕಿಯ ಆಲ್‌ಗ್ರಿಪ್ ಆಲ್-ವೀಲ್ ಡ್ರೈವ್ ಸಿಸ್ಟಮ್ ಇರಲಿದೆ. ಮಾರುತಿ ಸುಜುಕಿ ಜಿಮ್ನಿ 5-ಡೋರ್ ಮುಂಬರುವ ಮಹೀಂದ್ರ ಥಾರ್ 5-ಡೋರ್ ಮತ್ತು ಫೋರ್ಸ್ ಗೂರ್ಖಾ 5-ಡೋರ್ ಎಸ್‌ಯುವಿಗಳಿಗೆ ಪೈಪೋಟಿ ನೀಡಬಹುದು.

YTB ಕ್ರಾಸ್ಒವರ್ ಎಸ್‌ಯುವಿ:
ಮಾರುತಿ ಸುಜುಕಿಯು ಹೊಚ್ಚ ಹೊಸ ಕೂಪೆ ಕ್ರಾಸ್‌ಒವರ್ ಎಸ್‌ಯುವಿ ತಯಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಈಗಾಗಲೇ ತಿಳಿದುಬಂದಿದೆ. ಇದಕ್ಕೆ ಆಂತರಿಕವಾಗಿ YTB ಎಂಬ ಕೋಡ್ ನೇಮ್ ನೀಡಲಾಗಿದೆ. ಹೊಸ ಕ್ರಾಸ್ಒವರ್, ಮಾರುತಿ ಸುಜುಕಿಯ ಲೈನ್-ಅಪ್‌ನಲ್ಲಿ ಬ್ರೆಜ್ಜಾ ಕಾರಿನ ಕೆಳಗೆ ಇರಲಿದ್ದು, ಬ್ರ್ಯಾಂಡ್‌ನ ಪ್ರೀಮಿಯಂ ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟಕ್ಕೆ ಸಿಗಲಿದೆ. ಈ ಕ್ರಾಸ್ಒವರ್ 16-ಇಂಚಿನ ಅಲಾಯ್ ವೀಲ್ಸ್ ಹೊಂದಿರುವ ಸಾದ್ಯತೆಯಿದೆ ಎಂದು ಹೇಳಲಾಗಿದೆ.

ಕ್ರಾಸ್ಒವರ್ ಎಸ್‌ಯುವಿಯನ್ನು ಯಾವ ಪವರ್‌ಟ್ರೇನ್‌ನೊಂದಿಗೆ ನೀಡಲಾಗುವುದು ಎಂಬುದನ್ನು ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇನ್ನೂ ದೃಢೀಕರಿಸದಿದ್ದರೂ, ವದಂತಿಗಳು, ಬಲೆನೊ RS ಮಾದರಿಯಂತೆ 1.0-ಲೀಟರ್ ಟರ್ಬೊ ಪೆಟ್ರೋಲ್ ಮೋಟರ್ ಅನ್ನು ಪಡೆಯಬಹುದೆಂದು ಹೇಳುತ್ತಿವೆ. ಈ ಎಂಜಿನ್ ಕಾರ್ಯಕ್ಷಮತೆ ಆಧಾರಿತ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಸುಮಾರು 100 PS ಗರಿಷ್ಠ ಪವರ್ ಮತ್ತು 150 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆಯಂತೆ. ಇದು ಗ್ರಾಹಕರಿಗೆ ಇಷ್ಟವಾಗಬಹುದು.

YY8 EV ಪರಿಕಲ್ಪನೆ:
ಜಿಮ್ನಿ 5-ಡೋರ್ ಮತ್ತು YTB ಕ್ರಾಸ್‌ಒವರ್ ಹೊರತುಪಡಿಸಿ, ಮಾರುತಿ ಸುಜುಕಿ ಈ ವರ್ಷದ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಹೊಚ್ಚ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಪರಿಕಲ್ಪನೆಯನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. YY8 ಎಂಬ ಕೋಡ್ ನೇಮ್ ಹೊಂದಿರುವ ಈ ಕಾರು, ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಪರಿಕಲ್ಪನೆಯಾಗಿದೆ. ಮುಂಬರುವ ವರ್ಷಗಳಲ್ಲಿ ಇದರ ಉತ್ಪಾದನೆಗೆ ಸಿದ್ಧವಾದ ಆವೃತ್ತಿಯನ್ನು ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ.

ಮಾರುತಿ ಸುಜುಕಿ EV ಪರಿಕಲ್ಪನೆಯ ಕುರಿತು ಯಾವುದೇ ವಿವರಗಳು ಇನ್ನೂ ಲಭ್ಯವಿಲ್ಲ. ಆದರೆ, ಇದು ಟಾಟಾ ನೆಕ್ಸಾನ್ EV ಮತ್ತು ಮುಂಬರುವ ಮಹೀಂದ್ರಾ XUV400 ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಬಹುದು. ಎಲೆಕ್ಟ್ರಿಕ್ ಎಸ್‌ಯುವಿಯನ್ನು ಟೊಯೊಟಾ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ನಿರೀಕ್ಷೆಯಿದೆ. ವಿದೇಶಿ ಮಾರುಕಟ್ಟೆಗಳಲ್ಲಿಯೂ ಪರಿಚಯಿಸಬಹುದು. ಮುಂಬರುವ ಮಾರುತಿ ಸುಜುಕಿ ಎಲೆಕ್ಟ್ರಿಕ್ ಎಸ್‌ಯುವಿ ಒಂದೇ ಸಂಪೂರ್ಣ ಚಾರ್ಜ್‌ನಲ್ಲಿ ಸುಮಾರು 500 ಕಿಮೀ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

Article Published On: Tuesday, January 3, 2023, 18:02 [IST]
English summary
Maruti suzuki 3 suv unveiled at auto expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+