ಜನಪ್ರಿಯ ಮಾರುತಿ ಸುಜುಕಿ ಆಲ್ಟೊ 800ಗೆ ವಿದಾಯ: 23 ವರ್ಷಗಳ ಸುಧೀರ್ಘ ಪ್ರಯಾಣ ಅಂತ್ಯ

ಮಾರುತಿ ಸುಜುಕಿ 'ಆಲ್ಟೊ 800ನ 23 ವರ್ಷಗಳ ಸುಧೀರ್ಘ ಪ್ರಯಾಣ ಅಂತ್ಯಗೊಂಡಿದೆ. ಇನ್ಮುಂದೆ ಈ ಹ್ಯಾಚ್‌ಬ್ಯಾಕ್ ಉತ್ಪಾದನೆ ಮಾಡದಿರಲು ಕಂಪನಿ ತೀರ್ಮಾನಿಸಿದೆ. ಭಾರತದಲ್ಲಿ ಕಾರು ಮಾಲೀಕರಾಗಬೇಕೆಂಬ ಎಷ್ಟೋ ಜನರ ಕನಸು ಆಲ್ಟೊ 800 ಖರೀದಿಯೊಂದಿಗೆ ನನಸಾಗಿತ್ತು. ಆದರೀಗ ಅಂತಹ ಕಾರೇ ಇತಿಹಾಸದ ಪುಟ ಸೇರುತ್ತಿದೆ.

ವರ್ಷಗಳು ಕಳೆದಂತೆ ಆಲ್ಟೊ 800 ಜನಪ್ರಿಯತೆ ಕುಸಿತವಾಗಿವಾಗಿದೆ. ಜೊತೆಗೆ ದೇಶಾದ್ಯಂತ ಇಂದಿನಿಂದ ಜಾರಿಯಾಗಲಿರುವ (ಏಪ್ರಿಲ್ 1) BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಎಂಜಿನ್ ಮೇಲ್ದರ್ಜೆಗೇರಿಸಲು ಹೆಚ್ಚಿನ ವೆಚ್ಚವಾಗುವ ಕಾರಣ, ಈ ಕಾರಿನ ಉತ್ಪಾದನೆಯನ್ನೇ ಮಾರುತಿ ಸುಜುಕಿ ಸ್ಥಗಿತಗೊಳಿಸಿದೆ. ಹಾಗೆಂದು ಆಲ್ಟೊ 800 ನಾಳೆಯಿಂದಲೇ ಸಿಗುವುದಿಲ್ಲ ಎಂದು ಅಂದುಕೊಳ್ಳುವ ಅಗತ್ಯವಿಲ್ಲ. ಲಭ್ಯವಿರುವ ಹಳೆಯ ಸ್ಟಾಕ್ ಗಳನ್ನು ಕೆಲವು ದಿನಗಳವರೆಗೆ ಮಾರಾಟ ಮಾಡಲಾಗುತ್ತದೆ.

ಮಾರುತಿ ಸುಜುಕಿ ಆಲ್ಟೊ 800ಗೆ ವಿದಾಯ: 23 ವರ್ಷಗಳ ಸುಧೀರ್ಘ ಪ್ರಯಾಣ ಅಂತ್ಯ

ಮಾರುತಿ ಸುಜುಕಿ ಆಲ್ಟೊ 800 ಕಾರು, 2000ನೇ ಇಸವಿಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾದಾಗ ಗ್ರಾಹಕರು, ನಾಮುಂದು, ತಾಮುಂದು ಎಂದು ಕೊಂಡುಕೊಂಡರು. ಆದರೆ, ಬರಬರುತ್ತ ಇದರ ಖ್ಯಾತಿ ಕ್ಷೀಣಿಸತೊಡಗಿತು. ಅದಕ್ಕೆ ನಾನಾ ಕಾರಣಗಳಿದ್ದು, ಪ್ರಮುಖವಾಗಿ ಈ ಕಾರಿನ ಬೆಲೆಗೆ ಆಕರ್ಷಕ ವೈಶಿಷ್ಟ್ಯದ ಬೇರೆ ಕಂಪನಿ ಕಾರುಗಳು ಬಂದವು. ಜೊತೆಗೆ ಕಳೆದ ಎರಡು ದಶಕದಲ್ಲಿ ಜನರ ಜೀವನ ಮಟ್ಟವು ಕೊಂಚ ಸುಧಾರಿಸಿದ್ದು, ಉತ್ತಮ ಕಾರು ಖರೀದಿಯತ್ತ ಆಸಕ್ತಿ ತೋರಿರುವುದು.

ಈ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಎಷ್ಟು ಪ್ರಸಿದ್ದಿವಾಗಿತ್ತು ಅಂದರೆ, 2016ರ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿ ಕಂಪನಿ ಬರೋಬ್ಬರಿ 450,000 ಯುನಿಟ್ ಕಾರನ್ನು ಮಾರಾಟ ಮಾಡಿ, ಭಾರತದ ಕಾರು ಮಾರುಕಟ್ಟೆಯಲ್ಲಿ ಶೇಕಡ 15% ಪಾಲನ್ನು ತನ್ನದಾಗಿಸಿಕೊಂಡಿತ್ತು. ಆದರೆ, ದಿನದಿಂದ ದಿನಕ್ಕೆ ಸೇಲ್ಸ್ ಕುಸಿಯುತ್ತಲೇ ಹೋಗಿ, ಅದು ಪ್ರಸ್ತುತ (2023) ಶೇಕಡ 7% (250,000 ಯುನಿಟ್) ಇಳಿಕೆಯಾಗಿರುವುದು ವಿಷಾದನೀಯ.

ಮಾರುತಿ ಸುಜುಕಿ ಆಲ್ಟೊ 800ಗೆ ವಿದಾಯ: 23 ವರ್ಷಗಳ ಸುಧೀರ್ಘ ಪ್ರಯಾಣ ಅಂತ್ಯ

ದೇಶೀಯ ಮಾರುಕಟ್ಟೆಯಲ್ಲಿ 2000ರಲ್ಲಿ ಬಿಡುಗಡೆಯಾದ ಆಲ್ಟೊ 800 ಕಾರುಗಳನ್ನು ಸರಿ ಸುಮಾರು ಒಂದು ದಶಕ ಅಂದರೆ 2010ರವರೆಗೆ (ಆಲ್ಟೊ ಕೆ10 ಹ್ಯಾಚ್‌ಬ್ಯಾಕ್ ಬರುವರೆಗೆ) ಮಾರುತಿ ಸುಜುಕಿ ಕಂಪನಿ 1,800,000 ಯುನಿಟ್ ಮಾರಾಟ ಮಾಡಿತ್ತು. ಆ ಬಳಿಕ, ಇಲ್ಲಿಯವರೆಗೆ 1,700,000 ಯುನಿಟ್ ಆಲ್ಟೊ 800 ಹಾಗೂ 950,000 ಯುನಿಟ್ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್ ಗಳನ್ನು ಸೇಲ್ ಮಾಡಿದೆ. ಜೊತೆಗೆ ಬರೊಬ್ಬರಿ 4,450,000 ಯುನಿಟ್ ಆಲ್ಟೊ ಸರಣಿ ಕಾರುಗಳನ್ನು ಭಾರತದ ಗ್ರಾಹಕರು ಖರೀದಿಸಿದ್ದಾರೆ.

ಮಾರುತಿ ಸುಜುಕಿಯ ಅಧಿಕೃತ ವೆಬ್‌ಸೈಟ್ ಮಾಹಿತಿ ಪ್ರಕಾರ, ಆಲ್ಟೊ 800 ರೂ.3.54 ಲಕ್ಷದಿಂದ ರೂ.5.13 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಲಭ್ಯವಿದೆ. ಇದರ ಉತ್ಪಾದನೆಯನ್ನು ಸ್ಥಗಿತಗಳಿಸಿರುವುದರಿಂದ ಇನ್ಮುಂದೆ ಕಂಪನಿಯ ಆರಂಭಿಕ ಮಾದರಿಯಾಗಿ ಆಲ್ಟೊ ಕೆ10 ಇರಲಿದೆ. ಆಲ್ಟೊ 800ಗೆ ಹೋಲಿಸಿದರೆ ಆಲ್ಟೊ ಕೆ10 ಕೊಂಚ ಹೆಚ್ಚಿನ ದರ ಏರಿಕೆ ಪಡೆದುಕೊಂಡಿದ್ದು, ರೂ.3.99 ಲಕ್ಷದಿಂದ ರೂ 5.94 ಲಕ್ಷ ದರವನ್ನು ಹೊಂದಿದೆ.

ಮಾರುತಿ ಸುಜುಕಿ ಆಲ್ಟೊ 800ಗೆ ವಿದಾಯ: 23 ವರ್ಷಗಳ ಸುಧೀರ್ಘ ಪ್ರಯಾಣ ಅಂತ್ಯ

ಮಾರುತಿ ಸುಜುಕಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 796 ಸಿಸಿ ಎಂಜಿನ್ ಹೊಂದಿದ್ದು, 48 PS ಗರಿಷ್ಠ ಪವರ್ ಹಾಗೂ 69 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. CNG ಕಿಟ್ ಹೊಂದಿರುವ ಕಾರು, 41 PS ಪವರ್ ಹಾಗೂ 60 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಇನ್ನು, 23 ವರ್ಷಗಳ ಸುಧೀರ್ಘ ಪ್ರಯಾಣವನ್ನು ಮಾರುತಿ ಸುಜುಕಿ ಆಲ್ಟೊ 800 ಅಂತ್ಯಗೊಳಿಸಿರುವುದು ಅದರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇನ್ಮುಂದೆ ಕಂಪನಿಯ ಎಂಟ್ರಿ ಲೆವೆಲ್ ಸೆಗ್ಮೆಂಟ್ ನಲ್ಲಿ ಆಲ್ಟೊ ಕೆ10 ಮುಂದುವರಿಯಲಿದೆ. ಆದರೂ, ಹಳೆಯ ಸ್ಟಾಕ್ ಇರುವುದರಿಂದ ಒಂದಷ್ಟು ದಿನ ಆಲ್ಟೊ 800 ಮಾರಾಟವಾಗಲಿದ್ದು, ವರ್ಷಗಳು ಕಳೆದಂತೆ ಭಾರತದ ರಸ್ತೆಗಳಲ್ಲಿ ನಿಧಾನವಾಗಿ ಕಣ್ಮರೆಯಾಗಲಿದೆ ಎಂಬುದು ಬೇಸರದ ಸಂಗತಿ.

Article Published On: Saturday, April 1, 2023, 16:15 [IST]
English summary
Maruti suzuki alto 800 discontinued india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+