Maruti Suzuki: ಮಾರುತಿ ಸುಜುಕಿ ಆಲ್ಟೊ ಕೆ10 ಕಾರಿಗೆ ದೊಡ್ಡ ರಿಯಾಯಿತಿ.. 33 km ಮೈಲೇಜ್, 4 ಲಕ್ಷ ಬೆಲೆ
ದೇಶದಲ್ಲಿ ಮಾರುತಿ ಸುಜುಕಿ (Maruti Suzuki) ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಈ ವರ್ಷಾಂತ್ಯದಲ್ಲಿ ಕಂಪನಿಯು ನೆಕ್ಸಾ, ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ಕಾರುಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ಡಿಸ್ಕೌಂಟ್ ಆಫರ್ ನಗದು ರಿಯಾಯಿತಿ, ವಿನಿಮಯ ಬೋನಸ್, ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಒಳಗೊಂಡಿದೆ.
ಸದ್ಯ, ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಆಲ್ಟೊ ಕೆ10 (Alto K10) ಹ್ಯಾಚ್‌ಬ್ಯಾಕ್ ಒಟ್ಟು ರೂ.54,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಆಲ್ಟೊ ಕೆ10 ಪೆಟ್ರೋಲ್ ರೂಪಾಂತರಗಳು ರೂ.35,000 ನಗದು ರಿಯಾಯಿತಿ (Cash Discount), ರೂ.15,000 ವಿನಿಮಯ ಬೋನಸ್ (Exchange Bonus) ಹಾಗೂ ರೂ.4,000 ಕಾರ್ಪೊರೇಟ್ ರಿಯಾಯಿತಿಯನ್ನು (Corporate Discount) ಪಡೆದಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಕಾರಿನ ಸಿಎನ್‌ಜಿ ರೂಪಾಂತರಗಳು ರೂ.25,000 ನಗದು ರಿಯಾಯಿತಿ ಮತ್ತು ರೂ.15,000 ವಿನಿಮಯ ಬೋನಸ್ ಅನ್ನು ಒಳಗೊಂಡಿದೆ. ಆದರೂ ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್ ಮೂಲಕ ಅನ್ವಯ ಈ ರಿಯಾಯಿತಿ ಸೌಲಭ್ಯಗಳು ಬೇರೆ ಇರಲಿದ್ದು, ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಶೋರೂಂನ್ನು ಸಂಪರ್ಕಿಸಿರಿ.
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಆಲ್ಟೊ ಕೆ10 ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ ಸೇರಿದಂತೆ 4 ರೂಪಾಂತರ ಹಾಗೂ ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ ಒಳಗೊಂಡಂತೆ 6 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಆಲ್ಟೊ ಕೆ10, 1 - ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 67 PS ಗರಿಷ್ಠ ಪವರ್, 89 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. 5 - ಸ್ವೀಡ್ ಮ್ಯಾನುವಲ್ ಅಥವಾ 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ.
ಈ ಕಾರಿನ ಸಿಎನ್‌ಜಿ ರೂಪಾಂತರ ಇದೇ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆದರೆ, ಕಡಿಮೆ 57 PS ಪವರ್, 82 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಕೇವಲ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಗ್ರಾಹಕರಿಗೆ ಸಿಗುತ್ತದೆ. ಪೆಟ್ರೋಲ್ ರೂಪಾಂತರಗಳು 24.39 kmpl - 24.90 kmpl ಹಾಗೂ ಸಿಎನ್‌ಜಿ ರೂಪಾಂತರಗಳು 33.85 km/kg ಮೈಲೇಜ್ ನೀಡುತ್ತವೆ.

ಮಾರುತಿ ಸುಜುಕಿ ಆಲ್ಟೊ ಕೆ10, ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕೀಲೆಸ್ ಎಂಟ್ರಿ, ಸೆಮಿ - ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ - ಮೌಂಟೆಡ್ ಕಂಟ್ರೋಲ್ ಸೇರಿದಂತೆ ಹತ್ತಾರು ಫೀಚರ್ಸ್ ಒಳಗೊಂಡಿದೆ.
ಈ ಮಾರುತಿ ಸುಜುಕಿ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್ ಬೆಲೆಗೆ ತಕ್ಕಂತೆ ಡುಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರಿವರ್ಸಿಂಗ್ ಕ್ಯಾಮೆರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ ಒಳಗೊಂಡಂತೆ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿಗೆ ರೆನಾಲ್ಟ್ ಕ್ವಿಡ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








