Maruti Suzuki: 4 ಲಕ್ಷ ಆರಂಭಿಕ ಬೆಲೆಯ ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿಸಬೇಕೇ.. ಮಹತ್ವದ ಮಾಹಿತಿ
ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (Maruti Suzuki) ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದೆ. ಅದರ ಕೈಗೆಟುಕುವ ಬೆಲೆಯ ಕಾರುಗಳ ವಿನ್ಯಾಸ ಹಾಗೂ ವೈಶಿಷ್ಟ್ಯ ಪ್ರತಿಯೊಬ್ಬರಿಗೂ ಇಷ್ಟವಾಗಲಿದ್ದು, ಅವುಗಳನ್ನೇ ಖರೀದಿಸಲು ಬಯಸುತ್ತಾರೆ. ಸದ್ಯ, ಅಗ್ಗದ ಬೆಲೆಯ ಆಲ್ಟೊ ಕೆ10 (Alto K10) ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ.
ನೀವು ಇವತ್ತು ಆಲ್ಟೊ ಕೆ10 ಹ್ಯಾಚ್‌ಬ್ಯಾಕ್ ಖರೀದಿಸಲು ಬುಕ್ಕಿಂಗ್ ಮಾಡಿದರೆ, ವಿತರಣೆಯಾಗಲು 8 ವಾರಗಳು (ಎರಡು ತಿಂಗಳು) ಕಾಯಬೇಕಾಗಿದೆ. ಜೊತೆಗೆ ಈ ಕಾರು, ಗರಿಷ್ಠ ರಿಯಾಯಿತಿ ಪ್ರಯೋಜನವನ್ನು ಹೊಂದಿದ್ದು, ಇದೇ ತಿಂಗಳು (ಜುಲೈ) ಆಲ್ಟೊ ಕೆ10 ಕೊಂಡುಕೊಂಡರೆ ರೂ. 59,000 ಡಿಸ್ಕೌಂಟ್ ದೊರೆಯಲಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್‌ಶಿಪ್ ಸಂಪರ್ಕಿಸಿರಿ.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಆಲ್ಟೊ ಕೆ10 ರೂ.4 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. LXi, VXi, ಸೇರಿದಂತೆ ನಾಲ್ಕು ರೂಪಾಂತರ ಹಾಗೂ ಸಾಲಿಡ್ ವೈಟ್, ಸಿಲ್ಕಿ ಸಿಲ್ವರ್, ಗ್ರಾನೈಟ್ ಗ್ರೇ, ಸ್ಪೀಡಿ ಬ್ಲೂ, ಸಿಜ್ಲಿಂಗ್ ರೆಡ್, ಅರ್ಥ್ ಗೋಲ್ಡ್, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ.
ಮಾರುತಿ ಸುಜುಕಿ ಆಲ್ಟೊ ಕೆ10 ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1 ಲೀಟರ್ ಡ್ಯೂಯಲ್ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. 67 PS ಗರಿಷ್ಠ ಪವರ್ ಹಾಗೂ 89Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
ಸಿಎನ್‌ಜಿ ಕಿಟ್ ಪಡೆದಿರುವ ಆಲ್ಟೊ ಕೆ10, ಅದೇ ಎಂಜಿನ್ ಹೊಂದಿದ್ದು, ಆದರೆ, ಕಾರ್ಯಕ್ಷಮತೆ ಕೊಂಚ ಕಡಿಮೆಯಿದೆ. 57 PS ಪವರ್ ಹಾಗೂ 82 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಕೇವಲ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 24.39 - 24.9 kmpl ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಕಾರಾಗಿರುವ ಆಲ್ಟೊ ಕೆ10 ಬೆಲೆಗೆ ತಕ್ಕಂತೆಯೇ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಐಡೆಲ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕೀಲೆಸ್ ಎಂಟ್ರಿ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಅನ್ನು ಹೊಂದಿದೆ.
ಸುರಕ್ಷತೆಯ ದೃಷ್ಟಿಯಿಂದ ಕೂಡ ಮಾರುತಿ ಸುಜುಕಿ ಆಲ್ಟೊ ಒಂದಷ್ಟು ಉತ್ತಮ ಫೀಚರ್ಸ್ ಪಡೆದಿದೆ. ಫ್ರಂಟ್ ಡ್ಯೂಯಲ್ ಏರ್ ಬ್ಯಾಗ್, ABS (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರಿವರ್ಸ್ ಕ್ಯಾಮೆರಾ ಹಾಗೂ ರೇರ್ ಪಾರ್ಕಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಆಲ್ಟೊ ಕೆ10ಗೆ ರೆನಾಲ್ಟ್ ಕ್ವಿಡ್ ಬಿಟ್ಟರೆ, ಸಮೀಪದ ಪ್ರತಿಸ್ಪರ್ಧಿಯಾಗಿ ಬೇರೆ ಯಾವ ಕಾರುಗಳಿಲ್ಲ. ಇತರೆ ಕಂಪನಿ ಕಾರುಗಳಿಗೆ ಹೋಲಿಸಿದರೆ, ಈ ಆಲ್ಟೊ ಕೆ10 ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಆ ಕಾರಣಕ್ಕೆ ಇದರ ಕಾಯುವಿಕೆ ಅವಧಿ ಎರಡು ತಿಂಗಳಿಗೆ ಮುಟ್ಟಿದೆ.


Click it and Unblock the Notifications