ಮಾರುತಿ ಸುಜುಕಿಯಿಂದ ದೊಡ್ಡ ರಿಯಾಯಿತಿ ಘೋಷಣೆ: ಇಲ್ಲಿದೆ ವಿವರ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ 'ಮಾರುತಿ ಸುಜುಕಿ' ಯಾವಾಗಲು ತನ್ನ ಗ್ರಾಹಕರೊಂದಿಗೆ ಇರಲು ಬಯಸುತ್ತದೆ. ಸದ್ಯ, ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟ ಮಾಡುವ ಆಯ್ದ ಕಾರುಗಳ ಮೇಲೆ ಈ ಏಪ್ರಿಲ್ ತಿಂಗಳಲ್ಲೂ ಡಿಸ್ಕೌಂಟ್ ಆಫರ್‌ಗಳನ್ನು ಮುಂದುವರಿಸುತ್ತಿರುವುದಾಗಿ ಘೋಷಿಸಿದೆ. ಹೆಚ್ಚಿನ ವಿವರ ಇಲ್ಲಿದೆ.

ಮೊದಲಿಗೆ ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಕಾರಾಗಿರುವ 'ಆಲ್ಟೊ ಕೆ10' ದೊಡ್ಡ ಮಟ್ಟದಲ್ಲಿ ರಿಯಾಯಿತಿ ಸೌಲಭ್ಯವನ್ನು ಹೊಂದಿದೆ. ರೂ.40000 ನಗದು ರಿಯಾಯಿತಿ, ರೂ.15000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.4000 ಕಾರ್ಪೊರೇಟ್ ಡಿಸ್ಕೌಂಟ್ ಪಡೆಯುವ ಮೂಲಕ ಒಟ್ಟು ರೂ.59,000 ವರೆಗೆ ಪ್ರಯೋಜನಗಳನ್ನು ಹೊಂದಿದೆ. ಸದ್ಯ, ಉತ್ಪಾದನೆ ಸ್ಥಗಿತಗೊಂಡು ಮಾರುಕಟ್ಟೆಯಲ್ಲಿ ಕೆಲವೇ ಸಂಖ್ಯೆಯಲ್ಲಿರುವ 'ಆಲ್ಟೊ 800' ರೂ.10,000 ನಗದು ರಿಯಾಯಿತಿ, ರೂ.15000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.3000 ಕಾರ್ಪೊರೇಟ್ ಡಿಸ್ಕೌಂಟ್ ಪಡೆದಿದೆ.

ಅಗ್ಗದ ಕಾರುಗಳ ಮೇಲೆ ಮಾರುತಿ ಸುಜುಕಿಯಿಂದ ದೊಡ್ಡ ರಿಯಾಯಿತಿ ಘೋಷಣೆ

ಮಾರುತಿ ಸುಜುಕಿಯ ಆಲ್ಟೊ ಕೆ10 ಕಾರಿನ ಬಗ್ಗೆ ಹೇಳುವುದಾದರೆ, ಇದು ರೂ.3.99 - 5.95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 1-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 67 PS ಪವರ್, 89 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್/5 ಸ್ವೀಡ್ AMT ಗೇರ್ ಬಾಕ್ಸ್ ಹೊಂದಿದೆ. ಜೊತೆಗೆ ಸಿಎನ್‌ಜಿ ಕಿಟ್ ಆಯ್ಕೆಯಲ್ಲಿಯು ಸಿಗಲಿದೆ. 24.39 - 24.9 kmpl ಮೈಲೇಜ್ ನೀಡುತ್ತದೆ.

ಬಹುಬೇಡಿಕೆಯ ವ್ಯಾಗನ್ ಆರ್, ಸ್ವಿಫ್ಟ್ ಹಾಗೂ ಎಸ್-ಪ್ರೆಸ್ಸೊ ಕಾರುಗಳು ಒಂದೇ ರೀತಿಯ ಡಿಸ್ಕೌಂಟ್ ಆಫರ್ ಹೊಂದಿವೆ. ರೂ.30,000 ನಗದು ರಿಯಾಯಿತಿ, ರೂ.15000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.4000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಪಡೆದಿವೆ. ಆದರೆ, ಸೆಲೆರಿಯೊ ಮಾತ್ರ ರೂ.25,000 ಕ್ಯಾಶ್ ಡಿಸ್ಕೌಂಟ್, ರೂ.15000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.4000 ಕಾರ್ಪೊರೇಟ್ ರಿಯಾಯತಿ ಹೊಂದಿದೆ.

ಮಾರುತಿ ಸುಜುಕಿಯ ಜನಪ್ರಿಯ ವ್ಯಾಗನ್ ಆರ್, ರೂ.5.53 ಲಕ್ಷದಿಂದ ರೂ.7.41 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. 23.56 - 25.19 kmpl ಮೈಲೇಜ್ ನೀಡಲಿದೆ. ಸ್ವಿಫ್ಟ್ ಕಾರು, ರೂ.6 ಲಕ್ಷದಿಂದ ರೂ.8.98 ಲಕ್ಷದಲ್ಲಿ ಖರೀದಿಗೆ ದೊರೆಯಲಿದೆ. ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, 22.38 - 22.56 kmpl ಮೈಲೇಜ್ ನೀಡುತ್ತದೆ. ಜೊತೆಗೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿಯ ಕಾರುಗಳಲ್ಲಿಯೇ ಅತಿಹೆಚ್ಚು ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುವ 'ಸೆಲೆರಿಯೊ' ರೂ.5.35 ಲಕ್ಷದಿಂದ ರೂ. 7.13 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಪೆಟ್ರೋಲ್, ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯಲ್ಲಿದ್ದು, 24.97 - 26.68 kmpl ಮೈಲೇಜ್ ನೀಡುತ್ತದೆ. ಕಂಪನಿಯ ಮತ್ತೊಂದು ಅಗ್ಗದ ಕಾರೆಂದು ಖ್ಯಾತಿಗಳಿಸಿರುವ 'ಎಸ್-ಪ್ರೆಸ್ಸೊ' ರೂ.4.25 ಲಕ್ಷದಿಂದ ರೂ.6.10 ಲಕ್ಷ ಬೆಲೆಯಲ್ಲಿ ಭಾರತ ಗ್ರಾಹಕರಿಗೆ ದೊರೆಯುತ್ತದೆ.

ಮಾರುತಿ ಸುಜುಕಿ ಡಿಸೈರ್ ಕೇವಲ ರೂ.10000 ಎಕ್ಸ್ಚೇಂಜ್ ಬೋನಸ್ ಪಡೆದುಕೊಂಡಿದೆ. ಪ್ರತಿಯೊಬ್ಬರು ಇಷ್ಟಪಡುವ ಇಕೋ ವ್ಯಾನ್, ರೂ.15,000 ಕ್ಯಾಶ್ ಡಿಸ್ಕೌಂಟ್, ರೂ.10,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.3100 ಕಾರ್ಪೊರೇಟ್ ರಿಯಾಯತಿಯನ್ನು ಹೊಂದಿದ್ದು, ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಇಕೋ ವ್ಯಾನ್ ರೂ.5.25 ಲಕ್ಷದಿಂದ ರೂ.6.51 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಐದರಿಂದ ಏಳು ಆಸನ ವ್ಯವಸ್ಥೆ ಹೊಂದಿದ್ದು, 19.71 kmpl ಮೈಲೇಜ್ ನೀಡುತ್ತದೆ.

ಇನ್ನು, ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟ ಮಾಡುವ ಬ್ರೆಝಾ ಎಸ್‌ಯುವಿಗೆ ಕಂಪನಿ ಯಾವುದೇ ರಿಯಾಯಿತಿ ನೀಡಿಲ್ಲ. ಪ್ರಗತಿಯೊಬ್ಬರು ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ, ಈ ಡಿಸ್ಕೌಂಟ್ ಆಫರ್ ಫ್ಯೂಯೆಲ್, ಪವರ್‌ಟ್ರೇನ್ ಆಧರಿಸಿ, ಬೇರೆ - ಬೇರೆಯಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಡೀಲರ್‌ಶಿಪ್ ಗಳಿಗೆ ಭೇಟಿ ನೀಡುವುದು ಉತ್ತಮ. ಅಲ್ಲಿ ಸ್ಪಷ್ಟ ಮಾಹಿತಿ ಸಿಗುತ್ತದೆ.

Article Published On: Friday, April 7, 2023, 12:25 [IST]
English summary
Maruti suzuki april 2023 discounts details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+