Maruti Suzuki cars: ಕಡಿಮೆ ಬೆಲೆಯಲ್ಲಿ ಮಾರುತಿ ಕಾರು ಕೊಂಡುಕೊಳ್ಳಬೇಕೇ.. ಮಹತ್ವದ ಮಾಹಿತಿ
ಭಾರತದಲ್ಲಿ ಮಾರುತಿ ಸುಜುಕಿ (Maruti Suzuki) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಇದರ ಕಾರುಗಳು ಕೈಗೆಟುಕುವ ಬೆಲೆ, ಆಕರ್ಷಕ ವೈಶಿಷ್ಟ್ಯದೊಂದಿಗೆ ಖರೀದಿಗೆ ದೊರೆಯಲಿದ್ದು, ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಸದ್ಯ, ಕಂಪನಿ ಈ ಜೂನ್ ತಿಂಗಳಲ್ಲೂ ಅರೆನಾ ಡೀಲರ್ ಶಿಪ್ ಮೂಲಕ ಸೇಲ್ ಮಾಡುವ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ನೀಡಿದೆ.
ಮೊದಲಿಗೆ ಮಾರುತಿ ಸುಜುಕಿ ವ್ಯಾಗನ್ ಆರ್ ಬಗ್ಗೆ ಮಾತನಾಡೋಣ, ಇದು ಭರ್ಜರಿ ಡಿಸ್ಕೌಂಟ್ ಆಫರ್ ಹೊಂದಿದೆ. 1.0-ಲೀಟರ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಪಡೆದಿರುವ ರೂಪಾಂತರಗಳು, ರೂ.61,000 ರಿಯಾಯಿತಿ ಪ್ರಯೋಜನವನ್ನು ಪಡೆದಿವೆ. 5 ಸ್ವೀಡ್ AMT ಗೇರ್‌ಬಾಕ್ಸ್ ಹೊಂದಿರುವ ರೂಪಾಂತರಗಳು ರೂ.26,000 ಡಿಸ್ಕೌಂಟ್ ಆಫರ್ ಹೊಂದಿವೆ.

CNG ಚಾಲಿತ ವ್ಯಾಗನ್ ಆರ್ VXi ಹಾಗೂ LXi ರೂಪಾಂತರಗಳು ರೂ.57,100 ವರೆಗೆ ರಿಯಾಯಿತಿ ಪ್ರಯೋಜನವನ್ನು ಒಳಗೊಂಡಿವೆ. ದೇಶೀಯ ಮಾರುಕಟ್ಟೆಯಲ್ಲಿ ನೂತನ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು, ರೂ.5.54 ಲಕ್ಷದಿಂದ ರೂ.7.42 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ CNG ಎಂಜಿನ್ ಪಡೆದಿರುವ ಈ ಕಾರು, 23.56 - 25.19 kmpl ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿಯ ಜನಪ್ರಿಯ ಕಾರಾಗಿರುವ ಸ್ವಿಫ್ಟ್ ಪಡೆದಿರುವ ರಿಯಾಯಿತಿ ಪ್ರಯೋಜನ ಬಗ್ಗೆ ಹೇಳುವುದಾದರೆ, ಇದರ ಎಲ್ಲ ಪೆಟ್ರೋಲ್ ರೂಪಾಂತರಗಳು ರೂ.52,000 ಡಿಸ್ಕೌಂಟ್ ಆಫರ್ ಒಳಗೊಂಡಿವೆ. LXi (ಪೆಟ್ರೋಲ್) ರೂಪಾಂತರ ಮಾತ್ರ ರೂ.47,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಸ್ವಿಫ್ಟ್ (ಪೆಟ್ರೋಲ್) ಆಟೋಮೆಟಿಕ್ ರೂಪಾಂತರಗಳು ರೂ.52,000 ಡಿಸ್ಕೌಂಟ್ ಆಫರ್ ಪಡೆದಿವೆ.
CNG ಚಾಲಿತ ಸ್ವಿಫ್ಟ್ ಕಾರು, ರೂ.18,100 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸ್ವಿಫ್ಟ್ ರೂ.5.99 ಲಕ್ಷದಿಂದ ರೂ.9.03 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಕೂಡ ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, 22.38 - 22.56 kmpl ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಪ್ರಮುಖ ಕಾರುಗಳಲ್ಲಿ S Presso ಕೂಡ ಒಂದಾಗಿದ್ದು, ಈ ಜೂನ್ ತಿಂಗಳಲ್ಲಿಯು ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಎಲ್ಲ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಪಡೆದಿರುವ (ಪೆಟ್ರೋಲ್) ರೂಪಾಂತರಗಳು ರೂ.61,000 ಡಿಸ್ಕೌಂಟ್ ಆಫರ್ ಹೊಂದಿವೆ. ಆಟೋಮೆಟಿಕ್ ಗೇರ್‌ಬಾಕ್ಸ್ ಹೊಂದಿರುವ ವೇರಿಯೆಂಟ್ಸ್ ರೂ.32,000 ರಿಯಾಯಿತಿ ಪ್ರಯೋಜನವನ್ನು ಪಡೆದಿವೆ.
CNG ಚಾಲಿತ S Presso ಕಾರು, ರೂ.52,000 ಡಿಸ್ಕೌಂಟ್ ಆಫರ್ ಹೊಂದಿದೆ. ನೂತನ S Presso ರೂ.4.26 ಲಕ್ಷದಿಂದ ರೂ.6.12 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು, ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯನ್ನು ಹೊಂದಿದ್ದು, 24.12 - 25.3 kmpl ಮೈಲೇಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನುಳಿದಂತೆ ಮಾರುತಿ ಸುಜುಕಿ ಸೆಲರಿಯೊ ರೂ.61,000, ಆಲ್ಟೊ ಕೆ10 ರೂ.57,000, ಆಲ್ಟೊ 800 ರೂ.35,000 ಹಾಗೂ Eeco ವ್ಯಾನ್ ರೂ.39,000ವರೆಗೆ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ನಿಮಗೆ ಗೊತ್ತಿರಲಿ.. ಈ ಡಿಸ್ಕೌಂಟ್ ಆಫರ್ ರಾಜ್ಯ ರಾಜ್ಯದಿಂದ ಬೇರೆ - ಬೇರೆ ರೀತಿ ಇರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್ ಶಿಪ್ ಗೆ ಸಂಪರ್ಕಿಸುವುದು ಉತ್ತಮ.


Click it and Unblock the Notifications