Maruti Suzuki: ಮಾರುತಿ ಸುಜುಕಿ ಕಾರುಗಳಿಗೆ ಫುಲ್ ಡಿಮ್ಯಾಂಡ್.. ಆರ್ಡರ್ ಸಂಖ್ಯೆಯಲ್ಲಿ ವಿಶೇಷ ದಾಖಲೆ
ಭಾರತದಲ್ಲಿ ಮಾರುತಿ ಸುಜುಕಿ (Maruti Suzuki) ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿದೆ. ಎಸ್‌ಯುವಿ ವಿಭಾಗದಲ್ಲಿ ವೇಗವಾಗಿ ಮುನ್ನುಗ್ಗಿತ್ತಿದ್ದು, ಅತ್ಯಧಿಕ ಮಾರುಕಟ್ಟೆ ಪಾಲನ್ನು ಹೊಂದುತ್ತಿದೆ. ಇದಕ್ಕೆ ಕಂಪನಿಯು ಕಳೆದ ಕೆಲವು ತಿಂಗಳಲ್ಲಿ ಬಿಡುಗಡೆ ಮಾಡಿದ ಬ್ರೆಝಾ, ಗ್ರ್ಯಾಂಡ್ ವಿಟಾರಾ ಫ್ರಾಂಕ್ಸ್ ಹಾಗೂ ನೂತನ ಆಫ್-ರೋಡ್ ಎಸ್‌ಯುವಿ ಜಿಮ್ನಿ ಕಾರಣವಾಗಿವೆ.
ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ಶೇಕಡ 50% ಪಾಲನ್ನು ಹೊಂದಲು ಬಯಸಿದೆ. ಅದರಲ್ಲೂ ಎಸ್‌ಯುವಿ ವಿಭಾಗದಲ್ಲಿ ಅತ್ಯುತ್ತಮ ಪ್ರಗತಿಯನ್ನು ಕಂಡಿದೆ. ಅಲ್ಲಿ ಶೇಕಡ 10.2% ರಿಂದ ಶೇಕಡ 25% ಬೆಳವಣಿಗೆ ಸಾಧಿಸಿದ್ದು, ಕಂಪನಿಯು ಒಟ್ಟು 3.86 ಲಕ್ಷ ಕಾರುಗಳ ಆರ್ಡರ್ ಬಾಕಿ ಉಳಿಸಿಕೊಂಡಿದೆ. ಜಿಮ್ನಿ 5 ಡೋರ್ 31,000ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ.

ಪ್ರತಿದಿನ ಏನಿಲ್ಲ ಅಂದರೂ ಸುಮಾರು 151 ಮಂದಿ ಜಿಮ್ನಿಗಾಗಿ ಆರ್ಡರ್ ಮಾಡುತ್ತಿದ್ದು, ಎಂಟು ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ. ಕಂಪನಿಯು ಗ್ರ್ಯಾಂಡ್ ವಿಟಾರಾ 33,000, ಬ್ರೆಝಾ 55,000 ಹಾಗೂ ಫ್ರಾಂಕ್ಸ್ ಎಸ್‌ಯುವಿಯ 28,000 ಯುನಿಟ್ ಕಾರನ್ನು ಪೂರೈಸಬೇಕಿದ್ದು, ಎರ್ಟಿಗಾ ಎಂಪಿವಿಯ 85,000 ಯುನಿಟ್ ಆರ್ಡರ್ ಬಾಕಿ ಉಳಿಸಿಕೊಂಡಿದೆ. ಫ್ರಾಂಕ್ಸ್ ನಾಲ್ಕು ಹಾಗೂ ಎರ್ಟಿಗಾ ಎಂಟು ತಿಂಗಳ ಬಳಿಕ ವಿತರಣೆಯಾಗಲಿದೆ.
ಮೊದಲಿಗೆ ಬಹುಬೇಡಿಕೆಯ ಆಫ್-ರೋಡ್ ಎಸ್‌ಯುವಿಯಾಗಿರುವ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಬಗ್ಗೆ ಮಾತನಾಡುವುದಾದರೆ, ಇದು, ರೂಪಾಂತರಗಳಿಗೆ ಅನುಗುಣವಾಗಿ ರೂ.12.74 ಲಕ್ಷದಿಂದ ರೂ.15.05 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ. ಪವರ್ ಫುಲ್ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 16.94 ರಿಂದ 16.39km/l ಮೈಲೇಜ್ ನೀಡುತ್ತದೆ.

ಫ್ರಾಂಕ್ಸ್ ಎಸ್‌ಯುವಿ, ರೂ.7.46 ಲಕ್ಷ ಆರಂಭಿಕ ಬೆಲೆಯಲ್ಲಿ ದೊರೆಯಲಿದ್ದು, ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, 1.2 ಲೀಟರ್ ಕೆ ಸೀರಿಯಸ್ ಡುಯೆಲ್ ಜೆಟ್ ಪೆಟ್ರೋಲ್, 1.0 ಲೀಟರ್ ಕೆ ಸೀರಿಯಸ್ ಟರ್ಬೋ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್. ಇದು, 20.01 km/l ರಿಂದ 22.89 km/l ಮೈಲೇಜ್ ನೀಡುತ್ತದೆ. 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಕಂಪನಿಯ ಗ್ರ್ಯಾಂಡ್ ವಿಟಾರಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಇದು, ರೂ.10.70 ಲಕ್ಷದಿಂದ ರೂ.19.79 ಲಕ್ಷ ದರದಲ್ಲಿ ಸಿಗುತ್ತದೆ. ಪೆಟ್ರೋಲ್ ಹಾಗೂ CNG ಎಂಜಿನ್ ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯಾಧುನಿಕವಾಗಿದೆ. 6 ಏರ್‌ಬ್ಯಾಗ್ಸ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿ ಹಲವು ಫೀಚರ್ಸ್ ಪಡೆದಿದೆ.
ಮಾರುತಿ ಸುಜುಕಿಯ ಜನಪ್ರಿಯ ಕಾರುಗಳಲ್ಲಿ ಬ್ರೆಝಾ ಪ್ರಮುಖವಾಗಿದೆ. ಇದು, ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯನ್ನು ಹೊಂದಿದ್ದು, 19.8 - 20.15 kmpl ಮೈಲೇಜ್ ನೀಡುತ್ತದೆ. ಐದು ಆಸನ ಆಯ್ಕೆಯನ್ನು ಹೊಂದಿದ್ದು, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನಂತಹ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಕಡೆಯದಾಗಿ ಎರ್ಟಿಗಾ ಎಂಪಿವಿ ಬಗ್ಗೆ ಮಾತನಾಡೋಣ. ಇದು, ರೂ.8.64 ಲಕ್ಷ 13.08 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಇನ್ನು, ದೇಶೀಯ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿರುವ ಮಾರುತಿ ಸುಜುಕಿ, ಟೊಯೊಟಾದೊಂದಿಗೆ ಸಹಭಾಗಿತ್ವ ಹೊಂದಿದ್ದು, ಕೆಲವೇ ದಿನಗಳಲ್ಲಿ ಇನ್ನೋವಾ ಹೈಕ್ರಾಸ್ ಆಧಾರಿತ ಇನ್ವಿಕ್ಟೊ ಎಂಪಿವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.


Click it and Unblock the Notifications