ಈ ಬಲೇನೋ ನೀವಂದುಕೊಂಡ ಹಾಗಿಲ್ಲ: ಮತ್ತಷ್ಟು ಸೇಫ್ಟಿ ಫೀಚರ್‌ ಪರಿಚಯಿಸಿದ ಮಾರುತಿ

ಮಾರುಕಟ್ಟೆಗೆ ಬಂದು ಬಿಡುಗಡೆಯಾಗಿ ಹಲವಾರು ವರ್ಷಗಳು ಕಳೆದರೂ ಇಂದಿಗೂ ಭಾರತದ ಒಂದಷ್ಟು ವರ್ಗ ಜನರ ಮಾರುತಿ ಸುಜುಕಿ ಫೇವರೀಟ್‌ ಕಾರು ಎಂದರೆ ಅದು ಮಾರುತಿ ಸುಜುಕಿ ಬಲೇನೋ. ಈ ಕಾರು ಭಾರತದಲ್ಲಿ ಇಷ್ಟೊಂದು ಜನಪ್ರಿಯತೆ ಗಳಿಸಲು ಹಲವಾರು ಕಾರಣಗಳಿದ್ದು ಅದರಲ್ಲಿ ಇದರ ವೇರಿಯೆಂಟ್‌ಗಳು ಸಹ ಒಂದು.

ಭಾರತದ ಅತಿ ದೊಡ್ಡ ಕಾರು ನಿರ್ಮಾಣ ಕಂಪನಿಯಾದ ಮಾರುತಿ ಸುಜುಕಿ ಇದೀಗ ತನ್ನ ಹೆಸರಾಂತ ಕಾರು 2023 ರ ಬಲೇನೋ ಕಾರಿಗೆ ಸೇಫ್ಟಿ ಫೀಚರ್‌ಗಳನ್ನು ಸೇರಿಸುವ ಮೂಲಕ ಅಪ್‌ಡೇಟ್‌ ಅನ್ನು ನೀಡಿದೆ. ಮಾರುತಿ ಸುಜುಕಿ ಬಲೇನೋ 2023 ಸಿಗ್ಮಾ ಬೇಸ್‌ ವೇರಿಯೆಂಟ್‌ ಹಲವಾರು ಅಪ್‌ಡೇಟ್‌ಗಳನ್ನು ಪಡೆದುಕೊಂಡಿದ್ದು ಹಿಂದೆಂದಿಗಿಂತಲೂ ಹೆಚ್ಚು ಆಕರ್ಷಕವಾಗಿ ಗ್ರಾಹಕರ ಕೈ ಸೇರಲಿದೆ.

Maruti Suzuki Baleno 2023

2023 ರ ಮಾರುತಿ ಸುಜುಕಿ ಬಲೇನೋ ಕಾರು ಹಲವಾರು ಸೇಪ್ಟಿ ಅಪ್‌ಡೇಟ್‌ಗಳನ್ನು ಪಡೆದುಕೊಂಡಿದ್ದು ಕಳೆದ ಬಾರಿಯ ಬಲೇನೋ ಗಿಂತ ಹೆಚ್ಚಿನ ಆಕರ್ಷಕ ರೀತಿಯಲ್ಲಿ ಈ ಕಾರು ರೋಡಿಗಿಳಿದಿದೆ. ಕಳೆದ ಬಲೇನೋ ಕಾರಿಗಿಂತ ಸುರಕ್ಷತೆಯ ವಿಚಾರದಲ್ಲೂ ಸಹ ಈ ಕಾರು ಮುಂದಿದೆ ಎಂದು ತಿಳಿದು ಬಂದಿದೆ. ಮಾರುತಿ ಸುಜುಕಿ ಬಲೇನೋ (Maruti Suzuki Baleno 2023) ಇದೀಗ ಹೆಚ್ಚಿನ ಹೆಡ್‌ರೆಸ್ಟ್ ಜೊತೆ ಬರುತ್ತಿದ್ದು, ಹಿಂಭಾಗದಲ್ಲಿ ಮಧ್ಯ ಸೀಟ್‌ನಲ್ಲಿ ಕುಳಿತುಕೊಳ್ಳುವವರಿಗೂ ಇನ್ನು ಆರಾಮದಾಯಕ ರೀತಿಯಲ್ಲಿ ಪ್ರಯಾಣ ಮಾಡಬಹುದಾಗಿದೆ.

ಇನ್ನು ಮಾರುತಿ ಸುಜುಕಿ ಕಂಪನಿಯು ರೋಡ್‌ ಸೇಫ್ಟಿಯಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು ತನ್ನ ಬಲೇನೋ ಕಾರಿನಲ್ಲಿ ತ್ರೀ ಪಾಯಿಂಟ್‌ ಸೀಟ್ ಬೆಲ್ಟ್‌ ಸೇಫ್ಟಿ ಫೀಚರ್‌ ಅನ್ನು ಸಹ ನೀಡಲಾಗುತ್ತಿದ್ದು ಇದು ಹಿಂಬದಿ ಸವಾರರು ಸುರಕ್ಷಿತವಾಗಿರಲು ಸಹಾಯ ಮಾಡಲಾಗುತ್ತದೆ. ಇತ್ತೀಚೆಗೆ ನಿತಿನ್‌ ಗಡ್ಕರಿ ಕಾರಿನಲ್ಲಿರುವ ಪ್ರತಿಯೊಬ್ಬ ಪ್ರಯಾಣಿಕನೂ ಸಹ ತ್ರೀ ಪಾಯಿಂಟ್‌ ಸೀಟ್‌ ಬೆಲ್ಟ್‌ ಧರಿಸಿರಬಬೇಕು ಎಂಬ ನಿಯಮವನ್ನು ತಂದಿದ್ದರು. ಈ ಕಾರಣದಿಂದ ಬಲೇನೋದಲ್ಲೂ ಈ ಫೀಚರ್‌ಅನ್ನು ಪರಿಚಯಿಸಲಾಗಿದೆ.

Maruti Suzuki Baleno 2023

ಇನ್ನು ವಿಡಿಯೋದಲ್ಲಿ ಕಾಣುವಂತೆ ಮಾರುತಿ ಸುಜುಕಿ ಬಲೇನೋ ಕಾರಿನ 2023 ರ ಸಿಗ್ಮಾ ಮಾಡೆಲ್, ಕಣ್ಣುಗಳನ್ನು ಆಕರ್ಷಿಸುತ್ತಿರುವುದರಲ್ಲಿ ಎರಡು ಮಾತಿಲ್ಲ. ಕಪ್ಪು ಬಣ್ಣದಲ್ಲಿ ಕಂಗೊಳಿಸುತ್ತಿರುವ ಬಲೇನೋ, ಡಿಸೈನ್‌ ಮತ್ತು ಇತರ ವಿನ್ಯಾಸಗಳು ನೋಡುಗರ ಕಣ್ಮನ ಸೆಳೆಯುತ್ತಿದೆ. ಕ್ರೋಮ್‌ ಡೋರ್ ಹ್ಯಾಂಡಲ್ಸ್, ಮಿರರ್ ಕ್ಯಾಪ್ಸ್, ವಿಂಡೋ ವೈಸರ್‌ ಇದರಲ್ಲಿ ಪ್ರಮುಖವಾದವು. ಏರೋಡೈನಾಮಿಕ್‌, ನೀಟಾದ ಬಾಡಿ ಲೈನ್ಸ್‌ನೊಂದಿಗೆ ಸ್ಲೀಕ್ ಡಿಸೈನ್, ಎಲ್‌ಇಡಿ ಡಿಆರ್‌ಎಲ್‌, ‌ ಈ ಕಾರಿನ ಹೊರಾಂಗಣ ವಿನ್ಯಾಸದಲ್ಲಿರುವುದು ಇದಕ್ಕೆ ಕಾರಣ.

2022 ರ ನಂತರ ಕಂಪನಿಯು ಬಲೇನೋ ಕಾರಿಗೆ ಮತ್ತಷ್ಟು ಡಿಸೈನ್‌ಗಳನ್ನು ಸೇರಿಸಿ ಇದಕ್ಕೆ ಮತ್ತಷ್ಟು ಪ್ರೀಮಿಯಂ ಟಚ್‌ ನೀಡಿದೆ. ಮಾರತಿ ಸುಜುಕಿ ಬಲೇನೋ, ಭಾರತೀಯರ ಫೇವರಿಟ್‌ ಕಾರಾಗುವಲ್ಲಿ ಈ ಕಾರಿನ ಫೀಚರ್‌ಗಳು ಸಹ ಒಂದು ಕಾರಣ. ಇತ್ತೀಚೆಗೆ ಬಲೇನೋದಲ್ಲಿ ಹೊಸ ಹೊಸ ಫೀಚರ್‌ಗಳಾದ 9 ಇಂಚ್‌ಗಳ ಟಚ್‌ಸ್ಕ್ರೀನ್‌ ಇನ್ಫೋಟೈನ್‌ಮೆಂಟ್‌ ಸಿಸ್ಟಂ, ವೈರ್‌ಲೆಸ್‌ ಆಂಡ್ರ್ಯಾಯ್ಡ್‌ ಆಟೋ ಮತ್ತು ಅ್ಯಪಲ್‌ ಕಾರ್‌ಪ್ಲೇ, ಹೆಡ್‌ಅಪ್‌ ಡಿಸ್ಪ್ಲೇ ಮುಂತಾದ ಅತ್ಯಾಧುನಿಕ ಫೀಚರ್‌ಗಳಿವೆ.

ಮಾರುತಿ ಸುಜಿಕಿ ಬಲೇನೋ ಕಾರು ಪ್ರೀಮಿಯಂ ಫೇವರ್‌ಗಳೊಂದಿಗೆ ಬರುವ ಬಜೆಟ್‌ ಫ್ರೆಂಡ್ಲೀ ಕಾರು. ಹಲವು ಸೇಫ್ಟೀ ಫೀಚರ್‌ಗಳೊಂದಿಗೆ ಬರುವ ಈ ಕಾರು ತನ್ನ ಸೆಗ್ಮೆಂಟ್‌ನಲ್ಲಿ 6 ಏರ್‌ಬ್ಯಾಗ್‌ಗಳನ್ನು ನೀಡುತ್ತಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆಯು 6.61 ಲಕ್ಷದಿಂದ 9.88 ಲಕ್ಷ ರೂಗಳಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, July 29, 2023, 17:40 [IST]
English summary
Maruti suzuki baleno 2023 gets more saftey updates
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+