ಭಾರೀ ಮೈಲೇಜ್ ನೀಡುವ ಕಾರಿನ ಬುಕಿಂಗ್ ಪ್ರಾರಂಭಿಸಿದ ಮಾರುತಿ ಸುಜುಕಿ

ಭಾರತದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿಕೆಯಾಗಿದೆ. ಇದರಿಂದ ನೂತನ ವಾಹನ ಖರೀದಿಸುವವರೂ ಪರ್ಯಾಯ ಇಂಧನಗಳಿಂದ ಚಲಿಸುವ ಜೊತೆಗೆ ಹೆಚ್ಚಿನ ಮೈಲೇಜ್ ನೀಡುವ ವಾಹನಯನ್ನು ಹುಡುಕುತ್ತಿದ್ದಾರೆ. ಅಂತಹವರಿಗಾಗಿ ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿ 'ಮಾರುತಿ ಸುಜುಕಿ' ಬ್ರೆಝಾ ಸಿಎನ್‌ಜಿ ಆವೃತ್ತಿಯ ಬುಕಿಂಗ್ ಆರಂಭಿಸಿದೆ.

ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಬಹುನೀರಿಕ್ಷಿತ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಬ್ರೆಝಾ ಸಿಎನ್‌ಜಿ ಎಸ್‌ಯುವಿಯನ್ನು ಅನಾವರಣ ಮಾಡುವ ಮೂಲಕ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಇದೀಗ, ನಿನ್ನೆಯಿಂದ (ಮಾರ್ಚ್ 17) ಅಧಿಕೃತವಾಗಿ ಬುಕಿಂಗ್ ಆರಂಭಿಸಿದ್ದು, ಆಸಕ್ತ ಗ್ರಾಹಕರು, ಡೀಲರ್ ಶಿಪ್ ಅಥವಾ ಕಂಪನಿಯ ವೆಬ್‌ಸೈಟ್‌ ಗೆ ಭೇಟಿ ನೀಡಿ, ಬುಕ್ ಮಾಡಬಹುದು. ಇದನ್ನು ಗಮನಿಸಿದಾಗ ಈ ಎಸ್‌ಯುವಿ, ಶೀಘ್ರದಲ್ಲಿಯೇ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.

ಭಾರೀ ಮೈಲೇಜ್ ನೀಡುವ ಕಾರಿನ ಬುಕಿಂಗ್ ಪ್ರಾರಂಭಿಸಿದ ಮಾರುತಿ ಸುಜುಕಿ

ಎರ್ಟಿಗಾ ಎಂಪಿವಿಯಂತೆ ಬ್ರೆಝಾ ಸಿಎನ್‌ಜಿ ಎಸ್‌ಯುವಿ ಕೂಡ 1.5 ಲೀಟರ್ ಕೆ15 ಎಂಜಿನ್ ಹೊಂದಿರಲಿದ್ದು, 86.63 bhp ಗರಿಷ್ಠ ಪವರ್ ಹಾಗೂ 121.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮ್ಯಾನುವಲ್ ಅಥವಾ ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಬಹುದು. ಇದರ ಸುತ್ತಳತೆ ಗಮನಿಸುವುದಾದರೆ, ಇದು 3995ಎಂಎಂ ಉದ್ದ, 1790ಎಂಎಂ ಅಗಲ, 1685ಎಂಎಂ ಎತ್ತರ 2500 ಎಂಎಂ ವ್ಹೀಲ್ ಬೇಸ್ ಹೊಂದಿದೆ.

ಬೆಲೆ ವಿಚಾರಕ್ಕೆ ಬಂದರೆ, ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಎಸ್‌ಯುವಿ, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿದಾರರಿಗೆ ಸಿಗಲಿದ್ದು, ರೂ. 10 ಲಕ್ಷದಿಂದ ರೂ.12 ಲಕ್ಷ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು, 26.11 km/kg ಮೈಲೇಜ್ ನೀಡಬಹುದು. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರೆಝಾ ಪೆಟ್ರೋಲ್ ಆವೃತ್ತಿ ಬೆಲೆ ರೂ.7.99 ಲಕ್ಷದಿಂದ ರೂ.12.30 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಭಾರೀ ಮೈಲೇಜ್ ನೀಡುವ ಕಾರಿನ ಬುಕಿಂಗ್ ಪ್ರಾರಂಭಿಸಿದ ಮಾರುತಿ ಸುಜುಕಿ

ಸದ್ಯ, ಬುಕಿಂಗ್ ಆರಂಭವಾಗಿರುವ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿಯ ಹೊರಭಾಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಆದರೆ, ಒಳಭಾಗದಲ್ಲಿ ಸಂಪೂರ್ಣ ಕಪ್ಪು ಬಣ್ಣದಲ್ಲಿ ಇಂಟೀರಿಯರ್ ಇರಲಿದೆ. ಜೊತೆಗೆ 328 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದುಕೊಂಡಿದೆ. ಈ ಎಸ್‌ಯುವಿ ಕೂಡ ಎರಡು ರೂಪಾಂತರಗಳಲ್ಲಿ ಖರೀದಿಗೆ ಸಿಗಲಿದ್ದು, ಅವುಗಳೆಂದರೆ, VXI ಮತ್ತು ZXI. ಇದರ ಲುಕ್ ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ಹೇಳಬಹುದು.

ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಎಸ್‌ಯುವಿಯ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಪ್ರೊ ಪ್ಲಸ್, ಒಟಿಎ ಅಪ್‌ಡೇಟ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಪ್ರತಿಯೊಬ್ಬ ಕಾರು ಖರೀದಿದಾರರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅದರ ದೃಷ್ಟಿಯಿಂದಲೂ ಸ್ಟಾರ್ಟ್/ಸ್ಟಾಪ್ ಬಟನ್, ಆರು ಏರ್‌ಬ್ಯಾಗ್‌ ಮತ್ತು ರೇರ್ ವ್ಯೂ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಮಾರುತಿ ಸುಜುಕಿ ಕಂಪನಿ, ಬ್ರೆಝಾ ಸಿಎನ್‌ಜಿ ಆವೃತ್ತಿ ಪರಿಚಯದೊಂದಿಗೆ ತನ್ನ ಸಿಎನ್‌ಜಿ ಪೋರ್ಟ್‌ಫೋಲಿಯೊವನ್ನು ಬಲಪಡಿಸುತ್ತಿದೆ. ಅಲ್ಲದೆ, 'ಬ್ರೆಝಾ' ಸಬ್-4 ಮೀಟರ್ ಎಸ್‌ಯುವಿಯಾಗಿದೆ. ಈ ವಿಭಾಗದಲ್ಲಿ ಬೇರೆ ಕಂಪನಿಯ ಯಾವುದೇ ಎಸ್‌ಯುವಿಗಳು ಸಿಎನ್‌ಜಿ ಆಯ್ಕೆಯನ್ನು ಪಡೆದುಕೊಂಡಿಲ್ಲ. ಇದು ಬ್ರೆಝಾ ಸಿಎನ್‌ಜಿ ಆವೃತ್ತಿಗಳು ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ನೆರವಾಗುತ್ತದೆ. ಆದರೂ ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್ ಹಾಗೂ ಟಾಟಾ ನೆಕ್ಸನ್ ಪ್ರತಿಸ್ಪರ್ಧಿಗಳಾಗಿವೆ.

ಒಟ್ಟಾರೆ, ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡು ಕೇವಲ ಎರಡೇ ತಿಂಗಳಲ್ಲಿ ಬ್ರೆಝಾ ಸಿಎನ್‌ಜಿ ಎಸ್‌ಯುವಿಯ ಬುಕಿಂಗ್ ಆರಂಭವಾಗಿರುವುದು ಗ್ರಾಹಕರಿಗೆ ಖುಷಿ ತಂದಿದೆ ಎಂದು ಹೇಳಬಹುದು. ಈ ಕಾರು, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಆಕರ್ಷಕ ವೈಶಿಷ್ಟ್ಯದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗುತ್ತಿದ್ದು, ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು. ಬಿಡುಗಡೆಯಾದ ಮೇಲೆ ಗ್ರಾಹಕರಿಂದ ಯಾವ ರೀತಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Article Published On: Friday, March 17, 2023, 10:20 [IST]
English summary
Maruti suzuki brezza cng bookings open details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+