ಗರಿಷ್ಠ ಮೈಲೇಜ್ ನೀಡುವ ಬಹುನೀರಿಕ್ಷಿತ ಮಾರುತಿ ಸುಜುಕಿ ಬ್ರೆಝಾ CNG ಶೀಘ್ರ ಬಿಡುಗಡೆ
ಭಾರತದಲ್ಲಿ 'ಮಾರುತಿ ಸುಜುಕಿ' ಸಿಎನ್‌ಜಿ ಇಂಧನ ಚಾಲಿತ ಕಾರುಗಳನ್ನು ಮಾರಾಟ ಮಾಡುವ ಅತಿದೊಡ್ಡ ಕಂಪನಿಯಾಗಿದೆ. 12 ಮಾದರಿಗಳು ಖರೀದಿಗೆ ಲಭ್ಯವಿವೆ. ಇತ್ತೀಚೆಗೆ ಕಂಪನಿಯು ಗ್ರಾಂಡ್ ವಿಟಾರಾ ಸಿಎನ್‌ಜಿ ಎಸ್‌ಯುವಿಯನ್ನು ರೂ.12.85 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಬ್ರೆಝಾ ಸಿಎನ್‌ಜಿಯನ್ನು ಶೀಘ್ರದಲ್ಲೇ ಲಾಂಚ್ ಮಾಡಲಿದೆ.
ಮಾರುತಿ ಸುಜುಕಿ ಬಹುನೀರಿಕ್ಷಿತ ಬ್ರೆಝಾ ಸಿಎನ್‌ಜಿ ಆವೃತ್ತಿಯನ್ನು ಕಳೆದ ತಿಂಗಳು ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಜಿಮ್ನಿ 5 ಡೋರ್ ಹಾಗೂ ಫ್ರಾಂಕ್ಸ್ ಎಸ್‌ಯುವಿಯೊಂದಿಗೆ ಅನಾವರಣ ಮಾಡಿತ್ತು. ಆ ಕಾರು ಬ್ಲೂ ಕಲರ್ ನಲ್ಲಿ ತುಂಬಾ ಆಕರ್ಷಕವಾಗಿ ಕಾಣುತ್ತಿತ್ತು. ಹೊರ ಹಾಗೂ ಒಳಭಾಗದ ವಿನ್ಯಾಸದಲ್ಲಿ ಯಾವುದೇ ರೀತಿಯಲ್ಲಿ ಬದಲಾಗಿಲ್ಲ. ಅದು ಪೆಟ್ರೋಲ್ ಆವೃತ್ತಿಯನ್ನೇ ಹೋಲುತ್ತಿತ್ತು. ಇದರಿಂದ ಈ ಎಸ್‌ಯುವಿ ಮೇಲೆ ಗ್ರಾಹಕರಿಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ ಎಂದು ಹೇಳಬಹುದು.

ನೂತನ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಆವೃತ್ತಿಯ ಒಂದಷ್ಟು ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಹೊರ ಭಾಗದಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ಸ್ ಜೊತೆಗೆ DRL ಹಾಗೂ 16 - ಇಂಚಿನ ಅಲಾಯ್ ವೀಲ್ಸ್ ಗಳನ್ನು ಪಡೆದುಕೊಂಡಿದೆ. ಜೊತೆಗೆ ಒಳಭಾಗ ಹಾಗೂ ಇತರೆ ವೈಶಿಷ್ಟ್ಯಗಳನ್ನು ಗಮನಿಸಿದಾಗ ಇದು ಏಳು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಎಂಜಿನ್ ಪುಶ್ ಸ್ಟಾರ್ಟ್/ ಸ್ಟಾಪ್ ಬಟನ್, ESP (ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೋಗ್ರಾಮ್), ಹಿಲ್ ಹೋಲ್ಡ್ ಅಸಿಸ್ಟ್ ಸೆನ್ಸರ್ಸ್ ಜೊತೆಗೆ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.
ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಆವೃತ್ತಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.5 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 100 bhp ಗರಿಷ್ಠ ಪವರ್ ಹಾಗೂ 136 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಕಿಟ್ ಹೊಂದಿರುವ ಕಾರು, 87 bhp ಗರಿಷ್ಠ ಪವರ್ ಹಾಗೂ122 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 5-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ದೊರೆಯಲಿದ್ದು, 30 km/kg ಇಂಧನ ದಕ್ಷತೆಯನ್ನು ಹೊಂದಿರಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಬ್ರೆಝಾ ಪೆಟ್ರೋಲ್ ಆವೃತ್ತಿ ರೂ.7.99 ಲಕ್ಷದಿಂದ ರೂ.13.80 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯಲಿದೆ. ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಹೆಚ್ಚಿನ ಇಂಧನ ದಕ್ಷತೆಯನ್ನು ಹೊಂದಿರುವುದರಿಂದ ಸಿಎನ್‌ಜಿ ಆವೃತ್ತಿ ಬೆಲೆ ಕೊಂಚ ಹೆಚ್ಚಿರಲಿದೆ. ಸುಮಾರು ರೂ.70,000 ದಿಂದ ರೂ.80,000 ಅಧಿಕವಾಗಿರಬಹುದು. ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಮಾರುಕಟ್ಟೆಗೆ ಬಂದ ಮೇಲೆ ಹುಂಡೈ ವೆನ್ಯೂ, ಟಾಟಾ ನೆಕ್ಸನ್, ಕಿಯಾ ಸೋನೆಟ್ ಹಾಗೂ ಮಹೀಂದ್ರಾ XUV 300 ಕಾರುಗಳಿಗೆ
ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸಿಎನ್‌ಜಿ ಕಾರು ರೂ.12.85 ಲಕ್ಷ ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 1462 ಸಿಸಿ ಎಂಜಿನ್ ಹೊಂದಿದ್ದು, 5500 rpmನಲ್ಲಿ 86.63 bhp ಗರಿಷ್ಠ ಪವರ್ ಹಾಗೂ 4200 rpmನಲ್ಲಿ 121.5 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಮ್ಯಾನುವಲ್ ಟ್ರಾಸ್ಮಿಷನ್ ಆಯ್ಕೆಯನ್ನು ಪಡೆದಿದ್ದು, 26.6 km/kg ಇಂಧನ ದಕ್ಷತೆಯನ್ನು ಹೊಂದಿದೆ. 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದುಕೊಂಡಿದೆ.
ಈ ಗ್ರಾಂಡ್ ವಿಟಾರಾ ಸಿಎನ್‌ಜಿ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಮಿಡ್ ನೈಟ್ ಬ್ಲ್ಯಾಕ್, ನೆಕ್ಸಾ ಬ್ಲೂ, ಸ್ಪ್ಲೆಂಡಿಡ್ ಸಿಲ್ವರ್ ಹಾಗೂ ಚೆಸ್ಟ್ನಟ್ ಬ್ರೌನ್. ಈ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಐದು ಆಸನಗಳನ್ನು ಒಳಗೊಂಡಿದ್ದು, ಮಲ್ಟಿ ಫುನ್ಕ್ಷನ್ ಸ್ಟೇರಿಂಗ್ ವೀಲ್ಸ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್, ಸ್ಟಾಪ್ ಬಟನ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಅಲಾಯ್ ವೀಲ್ಸ್, ಫ್ರಂಟ್, ರೇರ್ ಪವರ್ ವಿಂಡೋವನ್ನು ಪಡೆದುಕೊಂಡಿದೆ.
ಕಳೆದ ತಿಂಗಳು ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಅತ್ಯುತ್ತಮ ಇಂಧನ ದಕ್ಷತೆಯನ್ನು ಹೊಂದಿದ್ದು, ನಿರ್ವಹಣಾ ವೆಚ್ಚವು ಕಡಿಮೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು. ಜೊತೆಗೆ ಈ ಕಾರು ಕೈಗೆಟುಕುವ ಬೆಲೆಯಲ್ಲಿಯೇ ಸಿಗಲಿದೆ ಎಂದು ಅಂದಾಜಿಸಲಾಗಿದ್ದು, ಸಾಕಷ್ಟು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ. ಅಲ್ಲದೆ, ಲಾಂಚ್ ಆದ ಮೇಲೆ ಖರೀದಿದಾರರು ಈ ಕಾರಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications