Maruti Suzuki: ಡೀಲರ್‌ಶಿಪ್‌ಗಳನ್ನು ತಲುಪುತ್ತಿವೆ ಬಹುನೀರಿಕ್ಷಿತ ಬ್ರೆಝಾ, ಎರ್ಟಿಗಾ ಬ್ಲ್ಯಾಕ್ ಎಡಿಷನ್ ಕಾರುಗಳು

ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರ ಕೈಗೆಟುಕುವ ಕಾರುಗಳನ್ನು ಮಾರಾಟ ಮಾಡುವ 'ಮಾರುತಿ ಸುಜುಕಿ' ಕಂಪನಿ ಜನಪ್ರಿಯತೆ ಗಳಿಸಿದೆ. ಕಳೆದ ಜನವರಿಯಲ್ಲಿ ತನ್ನ 40ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಕಂಪನಿ, ಅರೆನಾ (Area) ಶೋರೂಂಗಳಲ್ಲಿ ಖರೀದಿಗೆ ಸಿಗುವ ಕಾರುಗಳ ಬ್ಲ್ಯಾಕ್ ಎಡಿಷನ್ ಆವೃತ್ತಿಯನ್ನು ಪರಿಚಯಿಸಿತ್ತು. ಇದೀಗ ಬ್ರೆಝಾ, ಎರ್ಟಿಗಾ ಡೀಲರ್‌ಶಿಪ್‌ಗಳನ್ನು ತಲುಪುತ್ತಿವೆ.

ಮಾರುತಿ ಸುಜುಕಿಯ ಆಲ್ಟೊ ಕೆ10, ಸೆಲೆರಿಯೊ, ವ್ಯಾಗನ್ಆರ್, ಸ್ವಿಫ್ಟ್, ಡಿಜೈರ್, ಬ್ರೆಝಾ, ಎರ್ಟಿಗಾ ಕಾರುಗಳು ಬ್ಲ್ಯಾಕ್ ಎಡಿಷನ್ ರೂಪದಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿವೆ. ಸದ್ಯದ ಮಾಹಿತಿ ಪ್ರಕಾರ, ದೇಶಾದ್ಯಂತ ಡೀಲರ್‌ಶಿಪ್‌ ತಲುಪುತ್ತಿರುವ ಬ್ರೆಝಾ, ಎರ್ಟಿಗಾ ZXi ರೂಪಾಂತರಗಳು ಪರ್ಲ್ ಮಿಡ್ನೈಟ್ ಬ್ಲ್ಯಾಕ್ ಕಲರ್ ಸ್ಕೀಮ್ ಹೊಂದಿವೆ. ಇದರೊಟ್ಟಿಗೆ ಬ್ಲ್ಯಾಕ್ ಎಡಿಷನ್ ಪ್ಯಾಕೇಜ್ ನಲ್ಲಿ ಕುಶನ್ಸ್, ಸೀಟ್ ಕವರ್ಸ್ ಹಾಗೂ ವ್ಯಾಕ್ಯೂಮ್ ಕ್ಲೀನರ್‌ಗಳು ಲಭ್ಯವಿದ್ದು, ರೂ.14,990 ರಿಂದ ರೂ.35,990ವರೆಗೆ ಬೆಲೆ ಇದೆ.

Maruti Suzuki: ಡೀಲರ್‌ಶಿಪ್‌ಗಳನ್ನು ತಲುಪುತ್ತಿವೆ ಬಹುನೀರಿಕ್ಷಿತ ಬ್ರೆಝಾ, ಎರ್ಟಿಗಾ ಬ್ಲ್ಯಾಕ್ ಎಡಿಷನ್ ಕಾರುಗಳು

ಇವರೆಡು ಕಾರುಗಳ ಎಂಜಿನ್ ಬಗ್ಗೆ ಹೇಳುವುದಾದರೆ, ಬ್ರೆಝಾ ಬ್ಲ್ಯಾಕ್ ಎಡಿಷನ್ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103 bhp ಪವರ್, 138 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎರ್ಟಿಗಾ ಕಾರುಗಳು ಬ್ಲ್ಯಾಕ್ ಎಡಿಷನ್, 1.5 ಲೀಟರ್ K15C SHVS ಪೆಟ್ರೋಲ್ ಎಂಜಿನ್ ಪಡೆದಿದ್ದು, 102 bhp ಪವರ್, 136.8 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಇವು 5-ಸ್ವೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಹೊಂದಿವೆ.

ಬ್ರೆಝಾ ZXi ರೂಪಾಂತರ ಪಡೆದಿರುವ ರೂಪಾಂತರದ ಬಗ್ಗೆ ಹೇಳುವುದಾದರೆ, ಇದು ಸ್ಮಾರ್ಟ್‌ಪ್ಲೇ ಪ್ರೊ ಪ್ಲಸ್ ಜೊತೆಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅರ್ಕಾಮಿಸ್ ಸರೌಂಡ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, 360 ಡಿಗ್ರಿ ಕ್ಯಾಮೆರಾ, ಹೆಡ್ಅಪ್ ಡಿಸ್ಪ್ಲೇ, ಆಂಬಿಯೆಂಟ್ ಲೈಟಿಂಗ್, ಸುಜುಕಿ ಕನೆಕ್ಟ್ ಕನೆಕ್ಟ್ ಕಾರ್ ಟೆಕ್, ಇಲ್ಯೂಮಿನೇಷನ್ ಗ್ಲೋವ್‌ಬಾಕ್ಸ್, ರೇರ್ ಫಾಸ್ಟ್ ಚಾರ್ಜಿಂಗ್ ಯುಎಸ್‌ಬಿ ಸ್ಲಾಟ್ಸ್, ಆಟೋ ಫೋಲ್ಡಿಂಗ್ ವಿಂಗ್ ಮಿರರ್ಸ್ ಹಾಗೂ 16 ಇಂಚಿನ ಅಲಾಯ್ ವೀಲ್ಸ್ ಹೊಂದಿದೆ.

Maruti Suzuki: ಡೀಲರ್‌ಶಿಪ್‌ಗಳನ್ನು ತಲುಪುತ್ತಿವೆ ಬಹುನೀರಿಕ್ಷಿತ ಬ್ರೆಝಾ, ಎರ್ಟಿಗಾ ಬ್ಲ್ಯಾಕ್ ಎಡಿಷನ್ ಕಾರುಗಳು

ಮಾರುತಿ ಸುಜುಕಿ ಎರ್ಟಿಗಾ ZXi ರೂಪಾಂತರವು 7.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್, ರೇರ್ ಡಿಫಾಗರ್, ಆಟೋಮೆಟಿಕ್ ಎಸಿ ಯುನಿಟ್, ಫ್ರಂಟ್ ಸೆಂಟರ್ ಸ್ಲೈಡಿಂಗ್ ಆರ್ಮ್‌ರೆಸ್ಟ್, ರೇರ್ ವೈಪರ್ & ವಾಷರ್, ಕ್ರೋಮ್ ಟೈಲ್‌ಗೇಟ್ ಗಾರ್ನಿಶ್, ಫ್ರಂಟ್ ಫಾಗ್ ಲ್ಯಾಂಪ್ಸ್, 16-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಸ್ ಅನ್ನು ಪಡೆದುಕೊಂಡಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಬ್ರೆಝಾ, ರೂ.8.19 ಲಕ್ಷದಿಂದ ರೂ.14.04 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ. ಇದು 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103 PS ಗರಿಷ್ಠ ಪವರ್ ಹಾಗೂ 137 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ವೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದ್ದು, 19.8 - 20.15 kmpl ಮೈಲೇಜ್ ನೀಡಲಿದೆ.

ಮಾರುತಿ ಸುಜುಕಿ ಎರ್ಟಿಗಾ ರೂ.8.35 ಲಕ್ಷದಿಂದ ರೂ.12.79 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗಲಿದೆ. ಇದು ನಾಲ್ಕು ರೂಪಾಂತರಗಳನ್ನು ಹೊಂದಿದೆ. ಅವುಗಳೆಂದರೆ, LXi, VXi, ZXi ಹಾಗೂ ZXi+. ಎಂಜಿನ್ ಕಾರ್ಯಕ್ರಮತೆ ಬಗ್ಗೆ ಹೇಳುವುದಾದರೆ, ಈ ಎರ್ಟಿಗಾ, 1.5 ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದೆ. ಜೊತೆಗೆ 20.3kmplವರೆಗೆ ಮೈಲೇಜ್ ನೀಡಲಿದೆ. 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಬ್ರೆಝಾ, ಎರ್ಟಿಗಾ ಬ್ಲ್ಯಾಕ್ ಎಡಿಷನ್ ಕಾರುಗಳು ದೇಶಾದ್ಯಂತ ಡೀಲರ್‌ಶಿಪ್‌ಗಳನ್ನು ತಲುಪಲು ಆರಂಭಿಸಿದ್ದು, ನೋಡಲು ಆಕರ್ಷಕವಾಗಿರುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು. ಬೆಲೆಯು ಹೆಚ್ಛೆನೂ ಇರುವುದಿಲ್ಲ. ಈ ಕಾರುಗಳ ಮೂಲಕ ಮಾರುತಿ ಸುಜುಕಿ ಕಂಪನಿ ತನ್ನ ಮಾರಾಟ ಜಾಲವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲಿದ್ದು, ಭಾರತದ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ.

Article Published On: Monday, March 27, 2023, 17:56 [IST]
English summary
Maruti suzuki brezza ertiga black editions reach dealerships details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+