ಟಾಟಾ ನೆಕ್ಸಾನ್ ಎದುರಾಳಿ ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಮಾರುತಿ ಬ್ರೆಝಾ : ಕೈಬಿಟ್ಟ ಸುರಕ್ಷತಾ ಫೀಚರ್ಸ್

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಬ್ರೆಝಾ ಜನಪ್ರಿಯ ಮಾದರಿ ಮತ್ತು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸಬ್-4m ಎಸ್‍ಯುವಿಗಳಲ್ಲಿ ಒಂದಾಗಿದೆ. ಇಂಡೋ-ಜಪಾನೀಸ್ ವಾಹನ ತಯಾರಕರು ದೇಶದಲ್ಲಿ 10,000ಕ್ಕೂ ಹೆಚ್ಚು ಮಾರುತಿ ಬ್ರೆಝಾ ಎಸ್‌ಯುವಿಗಳನ್ನು ಮಾರಾಟ ಮಾಡಲು ಯಶಸ್ವಿಯಾದರು.

ಮಾರಾಟದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು, ಮಾರುತಿ ಸುಜುಕಿ ಕಂಪನಿಯು ಹೊಸ ನವೀಕರಣಗಳೊಂದಿಗೆ ಬಿಡುಗಡೆ ಮಾಡುತ್ತಿದೆ. ಈಗ, ಭಾರತದಲ್ಲಿ ಹಬ್ಬದ ಸೀಸನ್ ಮುಂಚಿತವಾಗಿ, ಇಂಡಿಯೊ-ಜಪಾನೀಸ್ ವಾಹನ ತಯಾರಕರು ಮತ್ತೊಮ್ಮೆ ಬ್ರೆಝಾ ಎಸ್‍ಯುವಿ ನವೀಕರಿಸಿ ಬಿಡುಗಡೆಗೊಳಿಸಲಿದೆ. ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಎಸ್‍ಯುವಿಯ ಹೊಸ ಕೆಲವು ಹೊಸ ಫೀಚರ್ಸ್ ಗಳ ಸೇರ್ಪಡೆಯನ್ನು ಮಾತ್ರ ಒಳಗೊಂಡಿರುತ್ತದೆ.

Maruti Suzuki Brezza

ಮಾರುತಿ ಸುಜುಕಿ ಹೊಸ ಬ್ರೆಝಾ ಎಸ್‍ಯುವಿಯಲ್ಲಿ ಹೊಸ ಫೀಚರ್ಸ್ ಗಳ ಸೇರ್ಪಡೆ ಮಾಡುವುದರ ಜೊತೆಗೆ ಕೆಲವು ಫೀಚರ್ಸ್ ಗಳನ್ನು ತೆಗೆದುಹಾಕಿದ್ದಾರೆ. ಬೆಲೆಗಳನ್ನು ಸ್ಪರ್ಧಾತ್ಮಕವಾಗಿಡಲು ಫೀಚರ್ಸ್ ಗಳನ್ನು ತೆಗೆದುಹಾಕಿರುವ ಸಾಧ್ಯತೆಯಿದೆ. ಇತ್ತೀಚಿನ ಬ್ರೋಷರ್ ಪ್ರಕಾರ, ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯಲ್ಲಿ CNG ರೂಪಾಂತರಗಳು ಇನ್ನು ಮುಂದೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ನಂತಹ ಸುರಕ್ಷತಾ ಫೀಚರ್ಸ್ ಹೊಂದಿರುವುದಿಲ್ಲ.

ಇದರೊಂದಿಗೆ ಎಲ್ಲಾ ಸೀಟ್‌ಗಳ ಸೀಟ್‌ಬೆಲ್ಟ್ ರಿಮೈಂಡರ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ. ಆಟೋಮ್ಯಾಟಿಕ್ ಮ್ಯಾನುವಲ್ ರೂಪಾಂತರಗಳಿಂದ ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ತೆಗೆದುಹಾಕುವುದು ದೊಡ್ಡ ಬದಲಾವಣೆಯಾಗಿದೆ.ಪರಿಣಾಮವಾಗಿ, ಈ ಇಂಧನ-ಉಳಿತಾಯ ಫೀಚರ್ ಈಗ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದ ರೂಪಾಂತರಗಳಿಗೆ ಪ್ರತ್ಯೇಕವಾಗಿದೆ.

ನವೀಕರಿಸಿದ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯಲ್ಲಿ 1.5-ಲೀಟರ್, 4-ಸಿಲಿಂಡರ್, ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 99.2 bhp ಮತ್ತು 136 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಮರ್ಥ್ಯವನ್ನು ಹೊಂದಿದೆ. ಮತ್ತೊಂದೆಡೆ, CNG ರೂಪಾಂತರವು 86.63 bhp ಮತ್ತು 121.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಗೇರ್‌ಬಾಕ್ಸ್ ಆಯ್ಕೆಗಳ ವಿಷಯದಲ್ಲಿ, ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಮಾರುತಿ ಸುಜುಕಿ ಬ್ರೆಝಾ ಆಯ್ಕೆಗಳನ್ನು ನೀಡಲಾಗುತ್ತಿದೆ. ಆದರೆ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯ ಸಿಎನ್‌ಜಿ ರೂಪಾಂತರಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತವೆ.

ಕಾರು ತಯಾರಕ ತನ್ನ ಎಸ್-ಸಿಎನ್ ಜಿ ವಾಹನಗಳನ್ನು ಅತ್ಯುತ್ತಮ ಕಾರ್ಯಕ್ಷಮತೆ, ಸುರಕ್ಷತೆ, ಎಂಜಿನ್ ಬಾಳಿಕೆ, ಅನುಕೂಲತೆ ಮತ್ತು ಮೈಲೇಜ್ ನೀಡಲು ವಿನ್ಯಾಸಗೊಳಿಸಲಾಗಿದೆ. ಈ ಮಾರುತಿ ಬ್ರೆಝಾ ಎಸ್‌ಯುವಿ ಮುಂಭಾಗದಲ್ಲಿ ನವೀಕೃತ ಫ್ಲಾಟ್-ಲುಕಿಂಗ್ ಕ್ಲಾಮ್‌ಶೆಲ್ ಬಾನೆಟ್ ನೀಡಲಾಗಿದ್ದು, ಸ್ಕ್ವಾರಿಶ್ ಡ್ಯುಯಲ್-ಎಲ್‌ಇಡಿ ಹೆಡ್‌ಲ್ಯಾಂಪ್ ವಿನ್ಯಾಸವು ಇದೀಗ ಗನ್‌ಮೆಟಲ್ ಶೆಡ್ ಹೊಂದಿರುವ ಗ್ರಿಲ್‌ನೊಂದಿಗೆ ಅಂದವಾಗಿ ವಿಲೀನಗೊಳಿಸಲಾಗಿದೆ. ಹಾಗೆಯೇ ಕಾಂಟ್ರಾಸ್ಟ್ ಬ್ಲ್ಯಾಕ್ ಕ್ಲಾಡಿಂಗ್‌ ಉತ್ತಮವಾಗಿದೆ.

ಟೈಲ್ ಲ್ಯಾಂಪ್ ಉತ್ತಮ ಹೊರನೋಟ ಹೊಂದಿದ್ದು, ಲೈಸೆನ್ಸ್ ಪ್ಲೇಟ್‌ನ ಮೇಲ್ಭಾಗದ ಮಧ್ಯದಲ್ಲಿ ಬ್ರೆಜ್ಜಾ ಬ್ಯಾಡ್ಜಿಂಗ್ ನೀಡಲಾಗಿದೆ. ಇದರೊಂದಿಗೆ ಹೊಸ ಕಾರಿನ ಬೆಸ್ ವೆರಿಯೆಂಟ್‌ಗಳಲ್ಲಿ ಫ್ಲೋಟಿಂಗ್ ರೂಫ್ ಎಫೆಕ್ಟ್‌ನೊಂದಿಗೆ ಡ್ಯುಯಲ್-ಟೋನ್ ಎಕ್ಸ್‌ಟೀರಿಯರ್ ಶೇಡ್‌ಗಳನ್ನು ಪಡೆಯಲಿದ್ದು, ಇವು ಕಾರಿನ ಉದ್ದಳತೆ ಹೆಚ್ಚು ಕಾಣುವಂತೆ ಮಾಡುತ್ತವೆ. ಹೊಸ ಎಸ್‍ಯುವಿಯ ಇಂಟಿರಿಯರ್ ಕೂಡಾ ಇದೀಗ ಸಾಕಷ್ಟು ಹೊಸ ತಾಂತ್ರಿಕ ಅಂಶಗಳಿಂದ ಕೂಡಿದೆ.

Article Published On: Thursday, July 20, 2023, 13:55 [IST]
English summary
Maruti suzuki brezza suv important safety feature removed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+