Maruti Suzuki: ಹೊಸ ಕಾರು ಖರೀದಿಸಬೇಕೇ.. ಮಾರುತಿ ಸುಜುಕಿಯಿಂದ ಸಿಹಿಸುದ್ದಿ

ಪ್ರತಿಯೊಬ್ಬರ ಜೀವನದಲ್ಲಿ ಹೊಸ ಕಾರು ಖರೀದಿಸಬೇಕೆಂಬ ಆಸೆಯಿರುತ್ತದೆ. ಆದರೆ, ಹಣಕಾಸಿನ ಕೊರತೆಯಿಂದ ಅದು ಸಾಧ್ಯವಾಗುವುದಿಲ್ಲ. ಆದರೆ, ಅಂತಹವರ ಕನಸನ್ನು ನನಸು ಮಾಡಲು ಮಾರುತಿ ಸುಜುಕಿ (Maruti Suzuki), ತನ್ನ ಸ್ಮಾರ್ಟ್ ಫೈನಾನ್ಸ್ ಪ್ಲಾಟ್‌ಫಾರ್ಮ್‌ಗೆ ಎಚ್‌ಡಿಎಫ್‌ಸಿ ಬ್ಯಾಂಕ್ 'ಎಕ್ಸ್‌ಪ್ರೆಸ್ ಕಾರ್ ಲೋನ್ಸ್' ಫೀಚರ್ಸ್ ಪರಿಚಯಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ 'ಎಕ್ಸ್‌ಪ್ರೆಸ್ ಕಾರ್ ಲೋನ್ಸ್' ಫೀಚರ್ಸ್ ಬಗ್ಗೆ ಮಾತನಾಡುವ ಮೊದಲು, ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ ಪ್ಲಾಟ್‌ಫಾರ್ಮ್‌ ಕುರಿತು ಒಂದಷ್ಟು ಮಾಹಿತಿಯನ್ನು ತಿಳಿಯೋಣ. ಮಧ್ಯಮ ವರ್ಗದ ದೇಶೀಯ ಗ್ರಾಹಕರಿಗೆ ಅನುಕೂಲವಾಗಲು ಕಂಪನಿಯು 2020ರಲ್ಲಿ ಈ ಪ್ಲಾಟ್‌ಫಾರ್ಮ್‌ನ್ನು ಪ್ರಾರಂಭಿಸಿತ್ತು. ಇದು, ಕಾರು ಕೊಂಡುಕೊಳ್ಳುವ ಖರೀದಿದಾರರಿಗೆ ಹಣಕಾಸು ನೆರವು, ಪಾಲುದಾರಿಕೆ ಹೊಂದಿರುವ ಸಾಲದಾತರು ನೀಡುವ ಲೋನ್ ಆಫರ್‌ ಪರಿಶೀಲಿಸಲು ಸಹಾಯಕವಾಗಿದೆ.

Maruti Suzuki: ಹೊಸ ಕಾರು ಖರೀದಿಸಬೇಕೇ.. ಮಾರುತಿ ಸುಜುಕಿಯಿಂದ ಸಿಹಿಸುದ್ದಿ

ಸ್ಮಾರ್ಟ್ ಫೈನಾನ್ಸ್ ಪ್ಲಾಟ್‌ಫಾರ್ಮ್‌ಗೆ ಪರಿಚಯಿಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್ 'ಎಕ್ಸ್‌ಪ್ರೆಸ್ ಕಾರ್ ಲೋನ್ಸ್' ಫೀಚರ್ಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಹೇಳುವುದಾದರೆ, ಇದು, ಸಂಪೂರ್ಣ ಡಿಜಿಟಲ್ ರೂಪದಲ್ಲಿದ್ದು, ಹೊಸ ಕಾರು ಖರೀದಿಸಬೇಕು ಎಂದುಕೊಳ್ಳುವ ಗ್ರಾಹಕರಿಗೆ ಹಣಕಾಸಿನ ಆಯ್ಕೆಯ (ಇಎಂಐ, ಸಾಲದ ಅವಧಿ) ಬಗ್ಗೆ ವಿವರವನ್ನು ಒದಗಿಸುತ್ತದೆ. ಇಲ್ಲಿ ಕೇವಲ 30 ನಿಮಿಷಗಳಲ್ಲಿ ಲೋನ್ ನೀಡಲಾಗುತ್ತದೆ.

ಸಾಲ ನೀಡಲು ಎಲ್ಲ ಅಗತ್ಯ ದಾಖಲೆ ಪರಿಶೀಲನೆಗಳು (ಇ - ಕೆವೈಸಿ, ವಿಡಿಯೋ ಕೆವೈಸಿ ಮತ್ತು ವಿಳಾಸ) ಆನ್‌ಲೈನ್ ನಲ್ಲಿಯೇ ನಡೆಯುತ್ತವೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ವಿಭಾಗದ ಸೀನಿಯರ್ ಆಫೀಸರ್, ಶಶಾಂಕ್ ಶ್ರೀವಾಸ್ತವ, ಎಚ್‌ಡಿಎಫ್‌ಸಿ ಬ್ಯಾಂಕ್ ರಿಟೇಲ್ ಅಸೆಟ್‌ನ ಕಂಟ್ರಿ ಹೆಡ್ ಅರವಿಂದ್ ಕಪಿಲ್ ಅವರ ಉಪಸ್ಥಿತಿಯಲ್ಲಿ 'ಎಕ್ಸ್‌ಪ್ರೆಸ್ ಕಾರ್ ಲೋನ್ಸ್' ಫೀಚರ್ಸ್ ಲೋಕಾರ್ಪಣೆ ಮಾಡಲಾಯಿತು.

Maruti Suzuki: ಹೊಸ ಕಾರು ಖರೀದಿಸಬೇಕೇ.. ಮಾರುತಿ ಸುಜುಕಿಯಿಂದ ಸಿಹಿಸುದ್ದಿ

ಈ ಎಚ್‌ಡಿಎಫ್‌ಸಿ ಬ್ಯಾಂಕ್ 'ಎಕ್ಸ್‌ಪ್ರೆಸ್ ಕಾರ್ ಲೋನ್ಸ್' ಫೀಚರ್ಸ್ ಪರಿಚಯಿಸಿರುವ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿಯ ಸೀನಿಯರ್ ಆಫೀಸರ್ ಶಶಾಂಕ್ ಶ್ರೀವಾಸ್ತವ ಅವರು, 'ನಮ್ಮ ಸ್ಮಾರ್ಟ್ ಫೈನಾನ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕಾರು ಖರೀದಿದಾರರಿಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಎಕ್ಸ್‌ಪ್ರೆಸ್ ಕಾರ್ ಲೋನ್ಸ್ ಫೀಚರ್ಸ್ ಪ್ರಾರಂಭಿಸುತ್ತಿರುವುದು ಖುಷಿಯ ವಿಚಾರವಾಗಿದೆ. ಈಗಾಗಲೇ, ಸ್ಮಾರ್ಟ್ ಫೈನಾನ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಮಿಲಿಯನ್ ಗೂ ಹೆಚ್ಚು ಗ್ರಾಹಕರಿಗೆ ಕಾರು ಕೊಂಡುಕೊಳ್ಳಲು ಸಾಲ ನೀಡಲಾಗಿದೆ' ಎಂದು ಹೇಳಿದ್ದಾರೆ.

'ಖರೀದಿದಾರರ ಅರ್ಹತೆಗೆ ತಕ್ಕಂತೆ ಕೇವಲ 30 ನಿಮಿಷಗಳಲ್ಲಿ ಸಾಲವನ್ನು ಈ ಪ್ಲಾಟ್‌ಫಾರ್ಮ್‌ ಮೂಲಕ ಕೊಡಲಾಗುತ್ತದೆ. ಇದೀಗ, ಎಚ್‌ಡಿಎಫ್‌ಸಿ ಬ್ಯಾಂಕ್ ಜೊತೆಯಲ್ಲಿ ನಮ್ಮ ಸ್ಮಾರ್ಟ್ ಫೈನಾನ್ಸ್ ಪ್ಲಾಟ್‌ಫಾರ್ಮ್‌ ಸಹಭಾಗಿತ್ವ ಹೊಂದಿರುವುದರಿಂದ ಗ್ರಾಹಕರಿಗೆ ಅವರ ಆಯ್ಕೆಯ ಕಾರನ್ನು ತಕ್ಷಣವೇ ಖರೀದಿಸಲು ಸಾಧ್ಯವಾಗುತ್ತದೆ ಎಂಬುದು ದೃಢವಾದ ನಂಬಿಕೆಯಾಗಿದೆ' ಎಂದು ಶ್ರೀವಾಸ್ತವ ಅವರು ತಿಳಿಸಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್ ರಿಟೇಲ್ ಅಸೆಟ್‌ನ ಕಂಟ್ರಿ ಹೆಡ್ ಅರವಿಂದ್ ಕಪಿಲ್ ಅವರು ಮಾತನಾಡಿದ್ದು, 'ದೇಶದ ನಂಬರ್ 1 ಆಟೋಮೊಬೈಲ್ ಕಂಪನಿಯೊಂದಿಗೆ ಪಾಲುದಾರಿಗೆ ಹೊಂದಿದ್ದೇವೆ. ಇದರಿಂದ ಗ್ರಾಹಕರಿಗೆ ದೊಡ್ಡಮಟ್ಟದ ಅನುಕೂಲವಾಗುತ್ತದೆ. 'ಎಕ್ಸ್‌ಪ್ರೆಸ್ ಕಾರ್ ಲೋನ್ಸ್' ಫೀಚರ್ಸ್ ಕಾರು ಖರೀದಿದಾರರಿಗೆ ವೇಗವಾಗಿ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಈಗಾಗಲೇ, 75000 ಹೆಚ್ಚಿನ ಗ್ರಾಹಕರು, ಯಾವುದೇ ರೀತಿಯ ಕಾಗದ ದಾಖಲೆಯನ್ನು ಸಲ್ಲಿಸದೇ ತ್ವರಿತವಾಗಿ ಸಾಲವನ್ನು ಪಡೆದಿದ್ದಾರೆ' ಎಂದು ಹೇಳಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, August 11, 2023, 17:50 [IST]
English summary
Maruti suzuki brings hdfc xpress car loans feature on smart finance platform
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+