Maruti Suzuki: ಈ ಮಾರುತಿ ಸುಜುಕಿ ಕಾರುಗಳಿಗೆ 57,000 ರೂಪಾಯಿ ರಿಯಾಯಿತಿ
ದೇಶದಲ್ಲಿ ಮಾರುತಿ ಸುಜುಕಿ (Maruti Suzuki) ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿದೆ. ಈ ಆಗಸ್ಟ್ ತಿಂಗಳಲ್ಲಿ ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟ ಮಾಡುವ ಆಯ್ದ ಕಾರು ಮಾದರಿಗಳ ಮೇಲೆ ರೂ.57,000 ವರೆಗೆ ಭರ್ಜರಿ ರಿಯಾಯಿತಿ ನೀಡಿದೆ. ಅದರಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ಚೇಂಜ್ ಬೋನಸ್ ಹಾಗೂ ಕಾರ್ಪೊರೇಟ್ ರಿಯಾಯಿತಿ ಸೇರಿವೆ.
ಮೊದಲಿಗೆ ಮಾರುತಿ ಸುಜುಕಿಯ ಬಹುಬೇಡಿಕೆಯ ಸ್ವಿಫ್ಟ್ (Swift) ಕಾರು ಪಡೆದುಕೊಂಡಿರುವ ರಿಯಾಯಿತಿ ಬಗ್ಗೆ ತಿಳಿಯೋಣ. ಇದರ ಪೆಟ್ರೋಲ್ ರೂಪಾಂತರಗಳು ರೂ.57,000 ವರೆಗೆ ಡಿಸ್ಕೌಂಟ್ ಹೊಂದಿವೆ. ಆದರೆ, ಪೆಟ್ರೋಲ್ AMT ಹಾಗೂ LXi ಮ್ಯಾನುವಲ್ ವೇರಿಯೆಂಟ್ಸ್ ರೂ.52,000 ರಿಯಾಯಿತಿ ಮಾತ್ರ ಪಡೆದಿವೆ. ಸಿಎನ್‌ಜಿ ಚಾಲಿತ ಸ್ವಿಫ್ಟ್ ರೂ.22,000 ಡಿಸ್ಕೌಂಟ್ ಹೊಂದಲು ಶಕ್ತವಾಗಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಸ್ವಿಫ್ಟ್ ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಇದು, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 22.38 - 22.56 kmpl ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಕಾರು, ಆಲ್ಟೊ ಕೆ10 ಸಹ ಆಗಸ್ಟ್ 31ರವರೆಗೆ ರೂ.57,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಸಿಎನ್‌ಜಿ ಚಾಲಿತ ರೂಪಾಂತರ ರೂ.52,000 ಡಿಸ್ಕೌಂಟ್ ಪಡೆದಿದೆ. ಆಲ್ಟೊ ಕೆ10 AMT ರೂಪಾಂತರ ರೂ.32,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಈ ಕಾರು, ರೂ.4 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ.

ಆಲ್ಟೊ ಕೆ10 ಕೂಡ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಲಭ್ಯವಿದೆ. ರೂಪಾಂತರಗಳಿಗೆ ಅನುಗುಣವಾಗಿ 24.39 - 24.9 kmpl ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಹಲವು ಫೀಚರ್ಸ್ ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, ಸಾಲಿಡ್ ವೈಟ್ ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.
ಈ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಪೆಟ್ರೋಲ್ ಹಾಗೂ ಸಿಎನ್‌ಜಿ ಚಾಲಿತ ರೂಪಾಂತರಗಳು ರೂ.56,000 ವರೆಗೆ ಡಿಸ್ಕೌಂಟ್ ಆಫರ್ ಹೊಂದಿವೆ. ಆದರೆ, ಎಸ್-ಪ್ರೆಸ್ಸೊದ AMT ರೂಪಾಂತರ ಮಾತ್ರ ರೂ.32,000 ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಎಸ್-ಪ್ರೆಸ್ಸೊ ರೂ.4.26 ಲಕ್ಷದಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯಲಿದ್ದು, ರೂಪಾಂತರಗಳಿಗೆ ಅನ್ವಯ 24.12 - 25.3 kmpl ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿಯ ಜನಪ್ರಿಯ ಕಾರು ವ್ಯಾಗನ್ ಆರ್, ಒಟ್ಟು ರೂ.51,000 ವರೆಗೆ ರಿಯಾಯಿತಿ ಪ್ರಯೋಜವನ್ನು ಹೊಂದಿದೆ. ಅದರಲ್ಲಿ ಪೆಟ್ರೋಲ್ ರೂಪಾಂತರಗಳು ರೂ.26,000 ಹಾಗೂ ಸಿಎನ್‌ಜಿ ರೂಪಾಂತರಗಳು ರೂ.51,000 ತನಕ ಡಿಸ್ಕೌಂಟ್ ಪಡೆದಿವೆ. ಭಾರತದ ಮಾರುಕಟ್ಟೆಯಲ್ಲಿ ವ್ಯಾಗನ್ ಆರ್ ರೂ.5.54 ಲಕ್ಷದಿಂದ ರೂ.7.42 ಲಕ್ಷ ಬೆಲೆಯಲ್ಲಿ ಸಿಗಲಿದ್ದು, 23.56 - 25.19 kmpl ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಇಕೋ ವ್ಯಾನ್ ಒಟ್ಟು ರೂ.39,000 ವರೆಗೆ ಡಿಸ್ಕೌಂಟ್ ಆಫರ್ ಪಡೆದಿದೆ. ಅದರಲ್ಲಿ ಪೆಟೋಲ್ ಆವೃತ್ತಿಗಳು ರೂ.39,000, ಹಾಗೂ ಸಿಎನ್‌ಜಿ ರೂಪಾಂತರಗಳು ರೂ.33,100 ರಿಯಾಯಿತಿ ಪ್ರಯೋಜವನ್ನು ಹೊಂದಿವೆ. ಇದು, ರೂ.5.27 ಲಕ್ಷದಿಂದ ರೂ.6.53 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 19.71 kmpl ಮೈಲೇಜ್ ನೀಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್ ಅನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಆಲ್ಟೊ 800 ರೂ.15,000 ಹಾಗೂ ಡಿಸೈರ್ ರೂ.10,000 ಡಿಸ್ಕೌಂಟ್ ಆಫರ್ ಹೊಂದಿದೆ. ಕಂಪನಿಯು ಈ ರಿಯಾಯಿತಿ ಪ್ರಯೋಜನವನ್ನು ನೀಡುವ ಮೂಲಕ ತನ್ನ ಮಾರಾಟವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಿಮಗೆ ಗೊತ್ತಿರಲಿ.. ರಾಜ್ಯದಿಂದ ರಾಜ್ಯಕ್ಕೆ ಈ ಡಿಸ್ಕೌಂಟ್ ಆಫರ್ ಬೇರೆ - ಬೇರೆಯಾಗಿರಲಿದ್ದು ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್ ಶಿಪ್ ಸಂಪರ್ಕಿಸಿರಿ.


Click it and Unblock the Notifications