Maruti Cars Price Hike: ಕಾರು ಖರೀದಿದಾರರಿಗೆ ಶಾಕ್: ಏಪ್ರಿಲ್‌ನಿಂದ ಮಾರುತಿ ಕಾರುಗಳ ಬೆಲೆ ಹೆಚ್ಚಳ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸರಣಿಯಲ್ಲಿರುವ ಎಲ್ಲಾ ಕಾರುಗಳ ಬೆಲೆಗಳನ್ನು ಏಪ್ರಿಲ್ ತಿಂಗಳಿನಿಂದ ಏರಿಕೆ ಮಾಡುವುದಾಗಿ ಘೋಷಿಸಿದೆ. ಇದರಿಂದ ಮುಂದಿನ ತಿಂಗಳಿನಿಂದ ಮಾರುತಿ ಸುಜುಕಿ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗಲಿವೆ. ಹೆಚ್ಚಿದ ವೆಚ್ಚದ ಹೊರೆ ಕಡಿಮೆ ಮಾಡಲು ಬೆಲೆ ಏರಿಕೆ ಮಾಡಿ ಕಾರು ಖರೀದಿದಾರರಿಗೆ ಶಾಕ್ ಕೊಟ್ಟಿದ್ದಾರೆ.

ಒಟ್ಟಾರೆ ಹಣದುಬ್ಬರ ಮತ್ತು ನಿಯಂತ್ರಕ ಅಗತ್ಯಗಳಿಂದಾಗಿ ಹೆಚ್ಚಿದ ವೆಚ್ಚದ ಒತ್ತಡ ಕಂಪನಿಯನ್ನು ಒತ್ತಡಕ್ಕೆ ಸಿಲಿಕ್ಕಿಸುತ್ತದೆ. ಕಂಪನಿಯು ವೆಚ್ಚವನ್ನು ಕಡಿಮೆ ಮಾಡಲು ಹಾಗೂ ಭಾಗಶಃ ವೆಚ್ಚ ಹೆಚ್ಚಳವನ್ನು ತಾನೇ ಭರಿಸಲು ಗರಿಷ್ಠ ಪ್ರಯತ್ನ ನಡೆಸಿದೆ. ಆದರೆ ಉತ್ಪಾದನಾ ವೆಚ್ಚದಲ್ಲಿನ ಏರಿಕೆಯನ್ನು ಗ್ರಾಹಕರಿಗೆ ರವಾನಿಸುವುದು ಅನಿವಾರ್ಯವಾಗಿದೆ ಎಂದು ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ದಾಖಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ತಿಳಿಸಿದೆ.

ಏಪ್ರಿಲ್‌ನಿಂದ ಮಾರುತಿ ಕಾರುಗಳ ಬೆಲೆ ಹೆಚ್ಚಳ

ಮಾರುತಿ ಸುಜುಕಿ ಕಂಪನಿಯು ಈ ಬೆಲೆ ಹೆಚ್ಚಳವನ್ನು 2023ರ ಏಪ್ರಿಲ್‌ನಿಂದ ಜಾರಿಯಾಗಲಿದೆ. ದರ ಏರಿಕೆಯು ವಿಭಿನ್ನ ಕಾರಿನ ಮಾದರಿಗಳಿಗೆ ಅನುಗುಣವಾಗಿ ವಿಭಿನ್ನವಾಗಿ ಬೆಲೆ ಏರಿಕೆ ಆಗುತ್ತದೆ. ಇನ್ನು ಉತ್ಪಾದನಾ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಎಲ್ಲಾ ವಾಹನ ತಯಾರಕರು ನಿರಂತರವಾಗಿ ಬೆಲೆ ಏರಿಕೆಯನ್ನು ಮಾಡುತ್ತಿದೆ. ಇನ್ನು ಭಾರತವು ಬಿಎಸ್‌-VI ನಿಯಮಗಳನ್ನು ಜಾರಿಗೆ ತರಲಿದೆ.

ಇದರಿಂದ ಕಂಪನಿಗಳು ಹೊಗೆ ಹೊರಸೂಸುವಿಕೆಯನ್ನು ನವೀಕರಿಸಬೇಕು ಅದು ಹೆಚ್ಚುವರಿ ವೆಚ್ಚಗಳಿಗೆ ಕಾರಣವಾಗಲಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕಳೆದ ತಿಂಗಳ ಮಾರಾಟದಲ್ಲಿಯು ಪಾರುಪತ್ಯ ಮುಂದುವರೆಸಿದೆ. ಮಾರುತಿ ಸುಜುಕಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದೆ.

ಏಪ್ರಿಲ್‌ನಿಂದ ಮಾರುತಿ ಕಾರುಗಳ ಬೆಲೆ ಹೆಚ್ಚಳ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳನ್ನು ಪರಿಚಯಿಸುತ್ತಿದೆ. ಇದು ಈಗಾಗಲೇ ಸ್ಪರ್ಧಿಸುತ್ತಿರುವ ವಿಭಾಗಗಳಲ್ಲಿ ತನ್ನ ಮುನ್ನಡೆಯನ್ನು ಕ್ರೋಢೀಕರಿಸಲು ಮತ್ತು ಹೆಚ್ಚಿನ ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳಲು ಹೊಸ ವಿಭಾಗಗಳಲ್ಲಿ ತೊಡಗಿದೆ. ಇನ್ನು ಮಾರುತಿ ಸುಜುಕಿ ತನ್ನ ಬಲೆನೊ ಆಧಾರಿತ Fronx ಕೂಪೆ ಎಸ್‍ಯುವಿಯನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದರು.

ಇದೀಗ ಮಾರುತಿ ಸುಜುಕಿ ಕಂಪನಿಯು ತನ್ನ ಈ ಹೊಸ Fronx ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಿದ್ಧವಾಗುತ್ತಿದೆ. ಹೊಸ ಮಾರುತಿ ಸುಜುಕಿ Fronx ಕಾರು 2023ರ ಏಪ್ರಿಲ್ ತಿಂಗಳಿನಲ್ಲಿ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹೊಸ Fronx ಕಾರನ್ನು ಬಲೆನೊ ಮತ್ತು ಗ್ರ್ಯಾಂಡ್ ವಿಟಾರಾ ಕಾರುಗಳ ನಡುವೆ ಇರಿಸಲಾಗುತ್ತದ. ಈ ಹೊಸ ಮಾರುತಿ ಸುಜುಕಿ Fronx ಕಾರು NEXA ಪ್ರೀಮಿಯಂ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ.

ಏಪ್ರಿಲ್‌ನಿಂದ ಮಾರುತಿ ಕಾರುಗಳ ಬೆಲೆ ಹೆಚ್ಚಳ

ಆದರೆ ಮಾರುತಿ ಸುಜುಕಿ ಕಂಪನಿಯು Fronx ಕೂಪೆ ಎಸ್‌ಯುವಿಯ ಬಿಡುಗಡೆ ದಿನಾಂಕವನ್ನು ಇನ್ನೂ ಕೂಡ ಬಹಿರಂಗಪಡಿಸಿಲ್ಲ. ಈ ಹೊಸ Fronx ಎಸ್‍ಯುವಿಯ ಟೆಸ್ಟ್ ಡ್ರೈವ್‌ ಕೂಡ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳಿದೆ. ಬಿಡುಗಡೆಗೆ ಸಿದ್ದವಾಗಿರುವ ಹೊಸ ಮಾರುತಿ Fronx ಎಸ್‍ಯುವಿಯು ಮಾರುತಿಯ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ. ಹೊಸ Fronx ಕೊಪೆ ಎಸ್‍ಯುವಿಯು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ.

ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ರೂಪಾಂತರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹೊಸ ಮಾರುತಿ ಸುಜುಕಿ Fronx ಎಸ್‍ಯುವಿಯು ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಆರ್ಟಿನ್ ಬ್ರೌನ್, ಸ್ಲೈಂಡಿಡ್ ಸಿಲ್ವರ್, ಒಪ್ಯೂಲೆಂಟ್ ರೆಡ್, ಬ್ಲೂಶ್ ಬ್ಲ್ಯಾಕ್ ರೂಪ್ ಹೊಂದಿರುವ ಎರ್ಥ್ ಬ್ರೋ, ಬ್ಲೂಯೆಷ್ ಬ್ಲ್ಯಾಕ್ ರೂಫ್ ನೊಂದಿಗೆ ಒಪೆಲೆಂಟ್ ರೆಡ್ ಮತ್ತು ಬ್ಲೂ ಬ್ಲ್ಯಾಕ್ ರೂಫ್ ನೊಂದಿಗೆ ಸ್ಲೈಂಡಿಡ್ ಸಿಲ್ವರ್ ಎಂಬ ಬಣ್ಣಗಳಲ್ಲಿ ಲಭ್ಯವಿದೆ. ಇದರಲ್ಲಿ ಗ್ರಾಹಕರು ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಬಹುದು.

Article Published On: Friday, March 24, 2023, 14:43 [IST]
English summary
Maruti suzuki cars price hike in april 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+