Maruti Suzuki: ಗ್ರಾಹಕರೇ ಗಮನಿಸಿ.. ಮಾರುತಿ ಸುಜುಕಿಯಿಂದ ಸಿಹಿಸುದ್ದಿ ಘೋಷಣೆ, ಈಗ ಬಿಟ್ರೆ ಮತ್ತೆ ಸಿಗಲ್ಲ

ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ಅದರ ಕಾರುಗಳ ವೈಶಿಷ್ಟ್ಯ, ವಿನ್ಯಾಸ ಹಾಗೂ ಕಾರ್ಯಕ್ಷಮತೆ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತದೆ. ಇದೀಗ, ಕಂಪನಿ ಜೂನ್ ತಿಂಗಳಲ್ಲಿ ತನ್ನ ಕೆಲವೊಂದು ಮಾದರಿಗಳ ಮೇಲೆ ಭರ್ಜರಿ ರಿಯಾಯತಿ ಘೋಷಿಸಿದೆ.

ಪ್ರಮುಖವಾಗಿ ಮಾರುತಿ ಸುಜುಕಿ ನೆಕ್ಸಾ ಡೀಲರ್ ಶಿಪ್ ಮೂಲಕ ಮಾರಾಟ ಮಾಡುವ ಬಲೆನೊ, ಇಗ್ನಿಸ್ ಹಾಗೂ ಸಿಯಾಜ್ ಕಾರುಗಳ ಮೇಲೆ ಭರ್ಜರಿ ರಿಯಾಯತಿಯನ್ನು ನೀಡುತ್ತಿದೆ. ಅದರಲ್ಲೂ ಇಗ್ನಿಸ್ ಈ ಬಾರಿ ಗರಿಷ್ಠ ರಿಯಾಯತಿ ಪ್ರಯೋಜನವನ್ನು ಹೊಂದಿದ್ದು, ಒಟ್ಟು ರೂ.60,000 ದವರೆಗೆ ಡಿಸ್ಕೌಂಟ್ ದೊರೆಯುತ್ತದೆ. ಬಲೆನೊ ರೂ.30,000 ಹಾಗೂ ಸಿಯಾಜ್ ರೂ.28,000 ರಿಯಾಯತಿ ಪ್ರಯೋಜನ ಪಡೆದಿದೆ.

Maruti Suzuki: ಗ್ರಾಹಕರೇ ಗಮನಿಸಿ.. ಮಾರುತಿ ಸುಜುಕಿಯಿಂದ ಸಿಹಿಸುದ್ದಿ ಘೋಷಣೆ, ಈಗ ಬಿಟ್ರೆ ಮತ್ತೆ ಸಿಗಲ್ಲ

ಮೊದಲಿಗೆ ಇಗ್ನಿಸ್ MT ಹಾಗೂ AGS ರೂಪಾಂತರಗಳು ರೂ.35,000 ನಗದು ರಿಯಾಯಿತಿ, ರೂ.4,000 ಕಾರ್ಪೊರೇಟ್ ಡಿಸ್ಕೌಂಟ್, ರೂ.15,000 ಫ್ಲಾಟ್ ಬೋನಸ್ ಹಾಗೂ ರೂ.10,000 ಎಕ್ಸ್ಚೇಂಜ್ ಬೋನಸ್ ಅನ್ನು ಪಡೆದಿವೆ. ಇಗ್ನಿಸ್ ಲಿಮಿಟೆಡ್ ಎಡಿಷನ್ ಸಿಗ್ಮಾ ರೂ.5,000 ಕ್ಯಾಶ್ ಡಿಸ್ಕೌಂಟ್ ರೂ. 4,000 ಕಾರ್ಪೊರೇಟ್ ರಿಯಾಯಿತಿ, ರೂ.15,000 ಫ್ಲಾಟ್ ಬೋನಸ್ ಹಾಗೂ ರೂ.10,000 ಎಕ್ಸ್ಚೇಂಜ್ ಬೋನಸ್ ಹೊಂದಿದೆ.

ಇಗ್ನಿಸ್ ಲಿಮಿಟೆಡ್ ಎಡಿಷನ್ ಡೆಲ್ಟಾ ರೂ.15,500 ನಗದು ರಿಯಾಯಿತಿ, ರೂ.4,000 ಕಾರ್ಪೊರೇಟ್ ಡಿಸ್ಕೌಂಟ್, ರೂ.15,000 ಫ್ಲಾಟ್ ಬೋನಸ್ ಹಾಗೂ ರೂ.10,000 ಎಕ್ಸ್ಚೇಂಜ್ ಬೋನಸ್ ಹೊಂದಿದೆ. ನೂತನ ಮಾರುತಿ ಸುಜುಕಿ ಇಗ್ನಿಸ್ ರೂ.5.84 ರಿಂದ ರೂ.8.16 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, 20.89 kmpl ಮೈಲೇಜ್ ನೀಡಲಿದೆ.

Maruti Suzuki: ಗ್ರಾಹಕರೇ ಗಮನಿಸಿ.. ಮಾರುತಿ ಸುಜುಕಿಯಿಂದ ಸಿಹಿಸುದ್ದಿ ಘೋಷಣೆ, ಈಗ ಬಿಟ್ರೆ ಮತ್ತೆ ಸಿಗಲ್ಲ

ಬಹುಬೇಡಿಕೆಯ ಬಲೆನೊ ಕಾರು ಕೂಡ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಬಲೆನೊ ಸಿಗ್ಮಾ, ಝೀಟಾ, ಆಲ್ಪಾ (MT + AT) CNG ರೂಪಾಂತರಗಳು ರೂ.10,000 ನಗದು ರಿಯಾಯತಿ ಹಾಗೂ ರೂ.10,000 ಫ್ಲಾಟ್ ಬೋನಸ್ ಅನ್ನು ಪಡೆದಿವೆ. ಬಲೆನೊ MT ಹಾಗೂ AT ವೇರಿಯೆಂಟ್ ರೂ.20,000 ಕ್ಯಾಶ್ ಡಿಸ್ಕೌಂಟ್ ಮತ್ತು ರೂ.10,000 ಫ್ಲಾಟ್ ಬೋನಸ್ ಹೊಂದಿದೆ.

ಬಲೆನೊ ಕಾರು, ರೂ.6.61 ಲಕ್ಷದಿಂದ ರೂ.9.88 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 90 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಅಥವಾ 5 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. CNG ಕಿಟ್ ಪಡೆದಿರುವ ಕಾರು, 77.49 PS ಹಾಗೂ 98.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Variants Cash Discount + Corporate Discount Flat Bonus + Additional Exchange Bonus
Ignis MT (All Variant) ₹35,000 + ₹4,000 ₹15,000 + ₹10,000
Ignis AGS (All Variant) ₹35,000 + ₹4,000 ₹15,000 + ₹10,000
Ignis Limited Edition Sigma ₹5,000 + ₹4,000 ₹15,000 + ₹10,000
Ignis Limited Edition Delta ₹15,500 + ₹4,000 ₹15,000 + ₹10,000
Baleno Sigma ₹10,000 ₹10,000
Baleno Delta MT ₹20,000 ₹10,000
Baleno Delta AT ₹20,000 ₹10,000
Baleno Zeta And Alpha (MT + AT) ₹10,000 ₹10,000
Baleno CNG All variants ₹10,000 ₹10,000
Ciaz All Variant ₹3,000 (Corporate discount) ₹25,000

ಈ ಕಾರು, 22.35 - 22.94 kmpl ಮೈಲೇಜ್ ನೀಡಲಿದ್ದು, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಹೆಡ್ ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆಟೋ ಎಸಿ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆ ದೃಷ್ಟಿಯಿಂದ 6 ಏರ್ ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.

ಸಿಯಾಜ್ ಎಲ್ಲ ರೂಪಾಂತರಗಳು ರೂ.3,000 ಕಾಪೋರೇಟ್ ಡಿಸ್ಕೌಂಟ್ ಹಾಗೂ ರೂ.25,000 ಫ್ಲಾಟ್ ಬೋನಸ್ ಹೊಂದಿದೆ. ರೂ.9.30 ಲಕ್ಷದಿಂದ ರೂ.12.29 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 1.5 ಲೀಟರ್ ಪೆಟ್ರೋಲ್ ಎಂಜಿನ್ 105 PS ಗರಿಷ್ಠ ಪವರ್ ಹಾಗೂ138 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 20.04 - 20.65 kmpl ಮೈಲೇಜ್ ನೀಡುತ್ತದೆ.

Article Published On: Saturday, June 3, 2023, 18:10 [IST]
English summary
Maruti suzuki discounts june baleno lgnis ciaz
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+