ಭಾರೀ ವೇಗದಲ್ಲಿ ಮುನ್ನಗುತ್ತಿದೆ ಮಾರುತಿ ಸುಜುಕಿ Eeco ವ್ಯಾನ್: ದೊಡ್ಡ ದಾಖಲೆ
ಭಾರತದ ಮಧ್ಯಮ ವರ್ಗದ ಜನರ ಫೆವರೇಟ್ ಓಮ್ನಿ (omni) ಜಾಗಕ್ಕೆ ಬಂದ ಮಾರುತಿ ಸುಜುಕಿಯ Eeco ಎಂಪಿವಿಯನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಂಪನಿಯು ಇದರ ಮಾರಾಟದಲ್ಲಿ ದೊಡ್ಡ ದಾಖಲೆಯನ್ನು ಮಾಡಿದ್ದು, 2010ರಿಂದ ಖರೀದಿಗೆ ಲಭ್ಯವಾದ ಈ Eeco ವ್ಯಾನ್ ಈವರೆಗೆ ಬರೋಬ್ಬರಿ 10 ಲಕ್ಷ ಯುನಿಟ್ ಸೇಲ್ ಆಗಿದೆ.
ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಎಂಪಿವಿಯಾಗಿರುವ Eeco, ಹೆಚ್ಚಿನ ಖರೀದಿದಾರರ ಆಯ್ಕೆಯಾಗಿದೆ ಎಂದು ಹೇಳಬಹುದು. ಇದು 1.2-ಲೀಟರ್ ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ. ಕಾಲಕಾಲಕ್ಕೆ ದೇಶದಲ್ಲಿ ಜಾರಿಯಾಗುವ ಕಡ್ಡಾಯ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಇದರ ಎಂಜಿನ್ ಅನ್ನು ಕಂಪನಿ ನವೀಕರಿಸುತ್ತಲೇ ಬಂದಿದೆ ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ.

ಮಾರುತಿ ಸುಜುಕಿಯ Eeco ವ್ಯಾನ್ ಇಂಧನ ದಕ್ಷತೆ ಅತ್ಯತ್ತಮವಾಗಿರುವುದರಿಂದ ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ನವೀಕರಣಗೊಂಡಿರುವ ಈ ಎಂಪಿವಿಯ ಎಂಜಿನ್ ಪೆಟ್ರೋಲ್ ಮೋಡ್ ನಲ್ಲಿ 19.71 kpl ಮೈಲೇಜ್ ನೀಡುತ್ತದೆ. ಹಳೇಯ ಎಂಜಿನ್ 16.11kpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿತ್ತು. ಆದರೆ, CNG ರೂಪಾಂತರಗಳು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದು, 20.88kg/km ರಿಂದ 26.78kg/km ಮೈಲೇಜ್ ನೀಡುತ್ತದೆ. ಇದು Eeco ವ್ಯಾನ್ ಖರೀದಿಸುವಂತೆ ಹೆಚ್ಚಿನ ಯುವ ಖರೀದಿದಾರರನ್ನು ಪ್ರೇರೇಪಿಸುತ್ತದೆ.
ಇತ್ತೀಚೆಗೆ ಮಾರುತಿ ಸುಜುಕಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಇದರ ಎಂಜಿನ್ ಅನ್ನು ನವೀಕರಿಸಿದೆ. ನೂತನ Eeco ವ್ಯಾನ್, K ಸೀರಿಯಸ್ 1.2 - ಲೀಟರ್ ಯುನಿಟ್ ಎಂಜಿನ್ ಹಾಗೂ ಡುಯಲ್ VVT ಆಯ್ಕೆಯನ್ನು ಪಡೆದುಕೊಂಡಿತು. ಜೊತೆಗೆ ಕಂಪನಿಯ ಆಲ್ಟೊ ಕೆ10, ಎಸ್-ಪ್ರೆಸ್ಸೊ ಹಾಗೂ ಸೆಲೆರಿಯೊ ಕಾರುಗಳು ಹೊಂದಿರುವ ರೀತಿಯಲ್ಲಿಯೇ ಈ Eeco ವ್ಯಾನ್ ಕೂಡ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್ ಹಾಗೂ ಸ್ಟೇರಿಂಗ್ ವೀಲ್ಸ್ ಹೊಂದಿದೆ. ಜೊತೆಗೆ ವಿನ್ಯಾಸದ ದೃಷ್ಟಿಯಿಂದಲ್ಲೂ ಆಕರ್ಷಕ ಲುಕ್ ಹೊಂದಿದೆ.
ಇದು 13 ರೂಪಾಂತರಗಳಲ್ಲಿ 5 ಅಥವಾ 7 ಆಸನದ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಇದರ 1.2- ಪೆಟೋಲ್ ಎಂಜಿನ್ 81 PS ಗರಿಷ್ಠ ಪವರ್ ಹಾಗೂ 104.4 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. CNG ಆವೃತ್ತಿಯು 72 PS ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಮಿಡ್ ನೈಟ್ ಬ್ಲ್ಯಾಕ್, ಮೆಟಾಲಿಕ್ ಬ್ರಿಸ್ಕ್ ಬ್ಲೂ, ಮೆಟಾಲಿಕ್ ಸಿಲ್ಕಿ ಸಿಲ್ವರ್ ಹಾಗೂ ಸಾಲಿಡ್ ವೈಟ್ ಬಣ್ಣಗಳನ್ನು ಪಡೆದುಕೊಂಡಿದೆ.
ಸುರಕ್ಷತೆ ದೃಷ್ಟಿಯಿಂದಲೂ ಮಾರುತಿ ಸುಜುಕಿ Eeco ವ್ಯಾನ್ ಅತ್ಯುತ್ತಮವಾಗಿದೆ. ಇದು ಡುಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಸೀಟ್ ಬೆಲ್ಟ್ ರೆಮಿಂಡರ್, ಸ್ವೀಡ್ ಅಲರ್ಟ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ಯ, ಈ ಎಪಿವಿಗೆ ಭಾರತದ ಮಾರುಕಟ್ಟೆಯಲ್ಲಿ ಯಾವುದೇ ನೇರವಾದ ಪ್ರತಿಸ್ಪರ್ಧಿ ಇಲ್ಲದಿರುವುದರಿಂದ ಉತ್ತಮ ಮಾರಾಟ ಪ್ರಗತಿಯನ್ನು ದಾಖಲು ಮಾಡಿದೆ ಎಂದು ಹೇಳಬಹುದು.
ಭಾರತದ ಮಾರುಕಟ್ಟೆಯಲ್ಲಿ Eeco ವ್ಯಾನ್ ರೂ. 5.22 ಲಕ್ಷದಿಂದ ರೂ.6.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಈ ಎಂಪಿವಿ ಯಾವುದೇ ರೂಪಾಂತರಗಳು ಪವರ್ ಸ್ವೀರಿಂಗ್ ಆಯ್ಕೆಯನ್ನು ಹೊಂದಿಲ್ಲ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ದೇಶದಲ್ಲಿ ಈ ವ್ಯಾನ್ ಗೆ ಪೈಪೋಟಿ ನೀಡಲು ಬೇರೆ ಕಂಪನಿಯು ಇಷ್ಟು ಕಡಿಮೆ ಬೆಲೆಗೆ ಎಂಪಿವಿಯನ್ನು ಬಿಡುಗಡೆ ಮಾಡಿಲ್ಲ. ಆದರೆ, ರೆನಾಲ್ಟ್ ಟ್ರೈಬರ್ ಕೊಂಚ ಮಟ್ಟಿಗೆ ಈ Eeco ವ್ಯಾನ್ ಸಮೀಪ ಬರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications