Maruti Suzuki Eeco: ಮಾರುತಿ ಸುಜುಕಿ ಇಕೋ ವ್ಯಾನ್‌ಗೆ ಸಖತ್ ಡಿಮ್ಯಾಂಡ್, ವಿತರಣೆಗೆ ಇಷ್ಟುದಿನ ಬೇಕೇಬೇಕು!
ಭಾರತದ ಮಧ್ಯಮ ವರ್ಗದ ಜನರ ಫೆವರೇಟ್ ಓಮ್ನಿ (omni) ಜಾಗಕ್ಕೆ ಬಂದ ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್‌ಗೆ ದೊಡ್ಡಮಟ್ಟದ ಅಭಿಮಾನಿ ಬಳಗವಿದೆ. ಈ ವ್ಯಾನ್‌ಗೆ ಭಾರೀ ಬೇಡಿಕೆಯಿದ್ದು, ಗ್ರಾಹಕರು, ವಿತರಣೆ ಪಡೆಯಲು ವಾರಗಟ್ಟಲೇ ಕಾಯಬೇಕಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಯಲ್ಲಿ ನವೀಕರಿಸಿದ ಇಕೋ ವ್ಯಾನ್‌ನ್ನು 2022ರ ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಿತು. ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಜನಸಾಮಾನ್ಯರ ಮೆಚ್ಚಿನ ವಾಹನವಾಗಿದ್ದು, ಅದಕ್ಕೆ ತಕ್ಕಂತೆ ಕಾಯುವಿಕೆ ಅವಧಿಯನ್ನು ಹೊಂದಿದೆ. ನೀವು ಇವತ್ತು ಇಕೋ ವ್ಯಾನ್ ಬುಕ್ಕಿಂಗ್ ಮಾಡಿದರೂ ದೆಹಲಿಯಲ್ಲಿ ವಿತರಣೆಯಾಗಲು 6 - 8 ವಾರ ತೆಗೆದುಕೊಳ್ಳುತ್ತದೆ. ಬಣ್ಣ, ರೂಪಾಂತರ ಆಧರಿಸಿ, ರಾಜ್ಯದಿಂದ ರಾಜ್ಯಕ್ಕೆ ಕಾಯುವಿಕೆ ಅವಧಿ ಬೇರೆಯಾಗಿರುತ್ತದೆ.

ಸದ್ಯ, ಭಾರತದಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಇಕೋ ವ್ಯಾನ್ ರೂ.5.27 ಲಕ್ಷದಿಂದ ರೂ.6.53 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 5 - 7 ಆಸನ ವ್ಯವಸ್ಥೆಯಲ್ಲಿ ಸಿಗುವ ಈ ವ್ಯಾನ್, ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಮಿಡ್ನೈಟ್ ಬ್ಲಾಕ್, ಮೆಟಾಲಿಕ್ ಬ್ರಿಸ್ಕ್ ಬ್ಲೂ, ಮೆಟಾಲಿಕ್ ಸಿಲ್ಕಿ ಸಿಲ್ವರ್ ಮತ್ತು ಸಾಲಿಡ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ.
ಮಾರುತಿ ಸುಜುಕಿ ಇಕೋ ವ್ಯಾನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಹೊಂದಿದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 81 PS ಗರಿಷ್ಠ ಪವರ್ ಹಾಗೂ 104.4 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಸಿಎನ್‌ಜಿ ಕಿಟ್ ಪಡೆದಿರುವ ಇಕೋ ವ್ಯಾನ್, 72 PS ಪವರ್ ಮತ್ತು 95 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 20.88 kg/km ರಿಂದ 26.78 kg/km ಮೈಲೇಜ್ ನೀಡುತ್ತದೆ. ಪೆಟ್ರೋಲ್ ಮೋಡ್ ನಲ್ಲಿ 19.71 kpl ಮೈಲೇಜ್ ಕೊಡುತ್ತದೆ. ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿರುವ ಕಾರು, ಆಲ್ಟೊ ಕೆ10 ಹಾಗೂ ಸೆಲೆರಿಯೊ ಕಾರುಗಳು ಹೊಂದಿರುವ ರೀತಿಯಲ್ಲಿಯೇ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್, ಸ್ಟೇರಿಂಗ್ ವೀಲ್ಸ್ ಹೊಂದಿದೆ.
ಇದರೊಟ್ಟಿಗೆ, ಡಿಜಿಟೈಸ್ಡ್ ಸ್ಪೀಡೋಮೀಟರ್, ಎಸಿಗಾಗಿ ರೋಟರಿ ಡಯಲ್ಸ್ ಹಾಗೂ 12V ಚಾರ್ಜಿಂಗ್ ಸಾಕೆಟ್ ಅನ್ನು ಪಡೆದಿದೆ. ಸುರಕ್ಷತೆಯಿಂದ ಕೂಡ ಮಾರುತಿ ಸುಜುಕಿ ಇಕೋ ವ್ಯಾನ್ ಅತ್ಯಾಧುನಿಕವಾಗಿದ್ದು, ಡುಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಡಿಸ್ಟ್ರಿಬ್ಯೂಷನ್) ಸೀಟ್ ಬೆಲ್ಟ್ ರೆಮಿಂಡರ್, ಸ್ವೀಡ್ ಅಲರ್ಟ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ದೇಶೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿದ್ದ ಓಮ್ನಿ ಜಾಗಕ್ಕೆ ಇಕೋ ವ್ಯಾನ್‌ನ್ನು ಮಾರುತಿ ಸುಜುಕಿ ಕಂಪನಿಯು 2010 ರಲ್ಲಿ ಪರಿಚಯಿಸಿತು. ಅಂದಿನಿಂದ ಸಾಕಷ್ಟು ಬೇಡಿಕೆ ಹೊಂದಿತ್ತು. ಗ್ರಾಹಕರು, ಇಷ್ಟಪಟ್ಟು ಈ ವ್ಯಾನ್ ಕೊಂಡುಕೊಂಡ ಫಲವಾಗಿ ಈ ವರ್ಷದ ಫೆಬ್ರವರಿಯಲ್ಲಿ ಕಂಪನಿಯು 10 ಲಕ್ಷ ಯುನಿಟ್ ಮಾರಾಟ ಮೈಲಿಗಲ್ಲನ್ನು ದಾಟುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿತು.
ಸದ್ಯ, ಭಾರತದಲ್ಲಿ ಮಾರುತಿ ಸುಜುಕಿ ಇಕೋ ವ್ಯಾನ್‌ಗೆ ಯಾವುದೇ ನೇರ ಪ್ರತಿಸ್ಪರ್ಧಿಯಿಲ್ಲ. ಸ್ವಲ್ಪ ಮಟ್ಟಿಗೆ ರೆನಾಲ್ಟ್ ಟ್ರೈಬರ್ ಫೈಟ್ ನೀಡುತ್ತಿದೆ. ಇದರ ಕಾಯುವಿಕೆ ಅವಧಿಯನ್ನು ಗಮನಿಸಿದಾಗ ಈ ವ್ಯಾನ್‌ಗೆ ಎಷ್ಟರಮಟ್ಟಿಗೆ ಬೇಡಿಕೆಯಿದೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಮುಂಬರುವ ದಿನಗಳಲ್ಲಿ ಇಕೋ ವ್ಯಾನ್‌ಗೆ ಮತ್ತಷ್ಟು ಬೇಡಿಕೆ ಬಂದರೂ ಆಶ್ಚರ್ಯಪಡುವ ಅಗತ್ಯವಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications