Maruti Suzuki: ಅಗ್ಗದ ಕುಟುಂಬದ ಕಾರು ಮಾರುತಿ ಸುಜುಕಿ ಎರ್ಟಿಗಾ ಖರೀದಿಸಬೇಕೇ.. ಇಲ್ಲಿದೆ ಸಿಹಿಸುದ್ದಿ
ಮಾರುತಿ ಸುಜುಕಿ (Maruti Suzuki) ಕೈಗೆಟುಕುವ ಬೆಲೆಯ ಕಾರುಗಳನ್ನು ಮಾರಾಟ ಮಾಡಿ, ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದೆ. ಕಂಪನಿಯ ಫ್ಯಾಮಿಲಿ ಕಾರಾಗಿರುವ ಎರ್ಟಿಗಾ (Ertiga)ವನ್ನು ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ಕಡೆಗೂ ಈ ಎಂಪಿವಿ ಖರೀದಿದಾರರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ.
ಕಂಪನಿಯು ತನ್ನ ಜನಪ್ರಿಯ ಕಾರುಗಳಾದ ಎರ್ಟಿಗಾ (Ertiga), ಬ್ರೆಜ್ಜಾ (Brezza), ಸ್ವಿಫ್ಟ್ (Swift) ಮತ್ತು ಡಿಜೈರ್ (Dzire) ಕಾಯುವಿಕೆ ಅವಧಿ (waiting period) ಕಡಿಮೆಗೊಳಿಸುವಲ್ಲಿ ಕಾರ್ಯನಿರತವಾಗಿದೆ. ಅದರಲ್ಲೂ 7 ಆಸನ ಆಯ್ಕೆ ವ್ಯವಸ್ಥೆಯೊಂದಿರುವ ಎರ್ಟಿಗಾ ಎಂವಿಪಿ ವಿತರಣೆಗೆ ಹಿಡಿಯುತ್ತಿದ್ದ ಸಮಯ ಬಹಳಷ್ಟು ಇಳಿಕೆಯಾಗಿದೆ ಎಂದು ಮಾರುತಿ ಸುಜುಕಿ ಮಾಹಿತಿ ನೀಡಿದೆ.

ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ ಆವೃತ್ತಿಯು ಇತ್ತೀಚಿನವರೆಗೆ ಒಂದು ವರ್ಷದವರೆಗೆ ಕಾಯುವಿಕೆ ಅವಧಿಯನ್ನು ಹೊಂದಿತ್ತು. ಅದಕ್ಕೂ ಕಾರಣವೂ ಇದ್ದು, ಕಳೆದ ಮೂರು ವರ್ಷಗಳಲ್ಲಿ ಸೆಮಿಕಂಡಕ್ಟರ್ ಹಾಗೂ ಸಿಎನ್‌ಜಿ ಸಂಬಂಧಿಸಿದ ಪರಿಕರಗಳ ಕೊರತೆಯಿಂದ ಎರ್ಟಿಗಾ ಉತ್ಪಾದನೆ ತಡವಾಗಿತ್ತು. ಅದರಿಂದಲೇ ವಿತರಣೆಗೆ ದೀರ್ಘಾವಧಿ ಸಮಯ ತಗುಲುತ್ತಿತ್ತು.
ಈಗ, ಕಚ್ಚಾ ಸಾಮಗ್ರಿಗಳ ಪೂರೈಕೆ ಹೆಚ್ಚಳ ಹಾಗೂ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ತಯಾರಿಕೆಯನ್ನು ದ್ವಿಗುಣಗೊಳಿಸಿರುವುದರಿಂದ ಕಾಯುವಿಕೆ ಅವಧಿಯೂ ಒಂದು ವರ್ಷದಿಂದ 6 - 7 ತಿಂಗಳುಗಳಿಗೆ ಕಡಿಮೆಯಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ, ಎರ್ಟಿಗಾ ಎಂಪಿವಿ ಸುಮಾರು 1 ಲಕ್ಷ ಬುಕಿಂಗ್ ಪಡೆದಿದ್ದು, 93,000 ಯುನಿಟ್‌ಗಳ ಆರ್ಡರ್‌ಗಳನ್ನು ಕಂಪನಿ ಬಾಕಿ ಉಳಿಸಿಕೊಂಡಿದೆ.

ಮಾರುತಿ ಸುಜುಕಿ ಎರ್ಟಿಗಾ ರೂ.8.64 ಲಕ್ಷದಿಂದ ರೂ.13.08 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಎಲ್ಎಕ್ಸ್ಐ, ವಿಎಕ್ಸ್ಐ ಸೇರಿದಂತೆ ನಾಲ್ಕು ರೂಪಾಂತರಗಳ ಆಯ್ಕೆಯಲ್ಲಿ ದೊರೆಯಲಿದೆ. ಜೊತೆಗೆ ಆಬರ್ನ್ ರೆಡ್, ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಆರ್ಕ್ಟಿಕ್ ವೈಟ್, ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೆ ಸಿಗುತ್ತದೆ.
ಈ ಕಾರು, 1.5 ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಜೊತೆಗೆ ರೂಪಾಂತರಗಳಿಗೆ ಅನುಗುಣವಾಗಿ, 5 ಸ್ವೀಡ್ ಮ್ಯಾನುವಲ್/ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ . ಜೊತೆಗೆ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಉತ್ತಮವಾಗಿ ಮೈಲೇಜ್ ನೀಡಲಿದ್ದು, 20.51 kmpl ರಿಂದ 26.11 kmpl ಇಂಧನ ದಕ್ಷತೆ ಹೊಂದಿದೆ.
ಮಾರುತಿ ಸುಜುಕಿ ಎರ್ಟಿಗಾ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಟರ್ನ್ ಬೈ ಟರ್ನ್ ನ್ಯಾವಿಗೇಶನ್ ಅನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 4 ಏರ್‌ಬ್ಯಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ಇನ್ನು, ಈ ಕಾರಿಗೆ ಟೊಯೊಟಾ ಇನ್ನೋವಾ ಕ್ರಿಸ್ಟಾ, ಕಿಯಾ ಕ್ಯಾರೆನ್ಸ್ ಮತ್ತು ಮಹೀಂದ್ರಾ ಮರಾಜೊ ಪ್ರಬಲ ಪ್ರತಿಸ್ಪಧಿಯಾಗಿವೆ. ಸದ್ಯ, ಎರ್ಟಿಗಾ ಉತ್ಪಾದನೆಯನ್ನು ಕಂಪನಿ ಹೆಚ್ಚಿಸಿದ್ದು, ಅದರ ಗ್ರಾಹಕರಿಗೆ ಖುಷಿ ನೀಡಿದೆ. ಮುಂಬರುವ ದಿನಗಳಲ್ಲಿ ಸಾಲು - ಸಾಲು ಹಬ್ಬಗಳು ಆರಂಭವಾಗುವುದರಿಂದ ಇದಕ್ಕೆ ಮತ್ತಷ್ಟು ಡಿಮ್ಯಾಂಡ್ ಬರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications