ಮಾರುತಿ ಸುಜುಕಿ ಮೊದಲ ಎಲೆಕ್ಟ್ರಿಕ್ ಕಾರು ದರ್ಶನ: ಬೆಂಗಳೂರಲ್ಲಿ ಚಾರ್ಜ್ ಆದ್ರೆ ಹುಬ್ಬಳ್ಳಿಯಲ್ಲೇ ನಿಲ್ಲೋದು!

ಭಾರತವು ಸೇರಿದಂತೆ ವಿಶ್ವಾದ್ಯಂತ ಹಲವು ರಾಷ್ಟ್ರಗಳು ಶುದ್ಧ ಪರಿಸರ ನಿರ್ಮಾಣಕ್ಕಾಗಿ ಎಲೆಕ್ಟ್ರಿಕ್ ವಾಹನ (ಇವಿ) ಬಳಕೆಯನ್ನು ಉತ್ತೇಜಿಸುತ್ತಿವೆ. ಬೆಂಬಲವಾಗಿ ಪ್ರಮುಖ ವಾಹನ ತಯಾಕರ ಕಂಪನಿಗಳು ನಿಂತಿದ್ದು, ಆಕರ್ಷಕ ವೈಶಿಷ್ಟ್ಯ ಹಾಗೂ ನವೀನ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿವೆ. ಅದಕ್ಕೆ ಮಾರುತಿ ಸುಜುಕಿ ಕಂಪನಿಯು ಹೊರತಾಗಿಲ್ಲ.

ಕಳೆದ ಜನವರಿ ತಿಂಗಳಲ್ಲಿ (2023) ನವದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ (Maruti Suzuki), ತಮ್ಮ ಮೊದಲ ಎಲೆಕ್ಟ್ರಿಕ್ ಕಾರು eVX (ಕಾನ್ಸೆಪ್ಟ್) ಪ್ರದರ್ಶನ ಮಾಡಿತ್ತು. ಬಳಿಕ, ಇದೇ ಮೊದಲ ಬಾರಿಗೆ ಈ ಎಲೆಕ್ಟ್ರಿಕ್ ಎಸ್‌ಯುವಿ ರಸ್ತೆಯಲ್ಲಿ ಕಂಡುಬಂದಿದೆ. ಲಭ್ಯವಿರುವ ಮಾಹಿತಿ ಪ್ರಕಾರ, ಕಂಪನಿಯು ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು 2025ರಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

Maruti Suzuki: ಮಾರುತಿ ಸುಜುಕಿ 1st ಎಲೆಕ್ಟ್ರಿಕ್ ಕಾರು ಮೊದಲ ಬಾರಿಗೆ ಕಾಣಿಕೊಂಡ್ತು, ವಿಶೇಷತೆಗಳೇನು?

ಮಾರುತಿ ಸುಜುಕಿಯ ಬಹುನಿರೀಕ್ಷಿತ ಎಲೆಕ್ಟ್ರಿಕ್ ಎಸ್‌ಯುವಿಯಾಗಿರುವ 'ಇವಿಎಕ್ಸ್' ಇತ್ತೀಚೆಗೆ ಪೋಲೆಂಡ್‌ ದೇಶದ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿತ್ತು. ಆ ಸ್ಪೈ ಫೋಟೋಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದ್ದವು. ನವದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಇವಿಎಕ್ಸ್ ಎಸ್‌ಯುವಿ, ಪೋಲೆಂಡ್‌ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿರುವ ಕಾರಿನಲ್ಲಿ ಅಷ್ಟಾಗಿ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ.

ಬಹುತೇಕ ಈ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಹೋಗಲು ಸಿದ್ಧವಿರುವಂತೆ ಕಾಣುತ್ತಿದ್ದು, ಹೆಚ್ಚುವರಿಯಾಗಿ ಹೊಸದಾದ ಅಲಾಯ್ ವೀಲ್ಸ್ ಹೊಂದಿದೆ. ಪ್ರಮುಖವಾಗಿ, ಇವಿಎಕ್ಸ್ ಎಲೆಕ್ಟ್ರಿಕ್ ಕಾರು ಹೆಚ್ಚು - ಕಮ್ಮಿ ಮಾರುತಿ ಸುಜುಕಿಯ ಬ್ರೆಝಾ ಗಾತ್ರಕ್ಕೆ ಹೋಲಿಕೆಯಾಗುತ್ತದೆ. ಇವಿಎಕ್ಸ್, 4,300 ಎಂಎಂ ಉದ್ದ, 1,800 ಎಂಎಂ ಅಗಲ ಮತ್ತು 1,600 ಎಂಎಂ ಎತ್ತರವಿದೆ.

Maruti Suzuki: ಮಾರುತಿ ಸುಜುಕಿ 1st ಎಲೆಕ್ಟ್ರಿಕ್ ಕಾರು ಮೊದಲ ಬಾರಿಗೆ ಕಾಣಿಕೊಂಡ್ತು, ವಿಶೇಷತೆಗಳೇನು?

ಮಾರುತಿ ಸುಜುಕಿ ಕಂಪನಿಯು 'ಇವಿಎಕ್ಸ್' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಹೆಚ್ಚು ನಗರ ಪ್ರದೇಶದಲ್ಲಿ ಬಳಕೆ ಮಾಡಲು ಯೋಗ್ಯವಾಗಿರುವಂತೆ ವಿನ್ಯಾಸಗೊಳಿಸಿರುವಂತೆ ತೋರುತ್ತಿದೆ. ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಈ ಎಲೆಕ್ಟ್ರಿಕ್ ಕಾರು, ಏರೋಡೈನಾಮಿಕ್ ಸಿಲೂಯೆಟ್, ಲಾಂಗ್ ವೀಲ್‌ಬೇಸ್, ಶಾಟರ್ ಓವರ್‌ಹ್ಯಾಂಗ್‌ ಮತ್ತು ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್‌ ಪಡೆದಿದ್ದು, ಪೋಲೆಂಡ್‌ ದೇಶದ ರಸ್ತೆಯಲ್ಲಿ ಕಂಡುಬಂದ ಕಾರು ಹಾಗೆಯೇ ಇದ್ದು, ಡಿಸೈನ್ ನಲ್ಲಿ ಅಷ್ಟಾಗಿ ಬದಲಾವಣೆ ಮಾಡಿಲ್ಲ.

ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ 60 kWh ಸಾಮರ್ಥ್ಯದ ಪವರ್ ಫುಲ್ ಬ್ಯಾಟರಿಯನ್ನು ಪಡೆದಿರಲಿದೆ ಎಂದು ಈ ಹಿಂದೆ ಮಾರುತಿ ಸುಜುಕಿ ಕಂಪನಿಯ ಹಿರಿಯ ಅಧಿಕಾರಗಳೇ ದೃಢಪಡಿಸಿದ್ದರು. ಈ ಎಲೆಕ್ಟ್ರಿಕ್ ಎಸ್‌ಯುವಿ ಸಂಪೂರ್ಣ ಚಾರ್ಜಿನಲ್ಲಿ ಗರಿಷ್ಠ 550 km ರೇಂಜ್ ನೀಡಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಬೆಲೆ ವಿಚಾರವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸರಿ ಸುಮಾರು 25 ಲಕ್ಷದ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು, ಶುದ್ದ ಪರಿಸರ ನಿರ್ಮಾಣಕ್ಕೆ ಮಾರುತಿ ಸುಜುಕಿ ಕಂಪನಿ ಸಹ ಮುಂದಾಗಿದ್ದು, ಅದರ ಭಾಗವಾಗಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಎಲ್ಲ ರೀತಿಯ ಸಿದ್ದತೆಯನ್ನು ನಡೆಸುತ್ತಿದೆ. ಈ ಕಾರು, ಭಾರತದಲ್ಲಿ ಬಿಡುಗಡೆಯಾದ ಮೇಲೆ ಭಾರೀ ಕ್ರೇಜ್ ಹುಟ್ಟುಹಾಕುವುದು ಗ್ಯಾರಂಟಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Autogaleria

Article Published On: Friday, June 23, 2023, 14:44 [IST]
English summary
Maruti suzuki evx electric suv spotted testing details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+