ವಿದೇಶಕ್ಕೆ ರಫ್ತಾದ ಮಾರುತಿಯ ಹೆಮ್ಮೆಯ ಈ ಕಾರು: ಹೊರದೇಶದಲ್ಲಿಯೂ ಭಾರತದ ಕೀರ್ತಿ ಪತಾಕೆ ಹಾರಿಸುತ್ತಾ?
ಭಾರತದಲ್ಲಿ ಮಾರುತಿ ಸುಜುಕಿಗೆ ಮಾರುತಿ ಸುಜುಕಿಯೇ ಸಾಟಿ. ಇದ್ಕೆ ಕಾರಣ ಈ ಕಾರು ತಯಾರಿಕಾ ಕಂಪನಿ ವರ್ಷಗಳಿಂದ ತಯಾರಿಸುತ್ತಾ ಬಂದಿರುವ ಕಾರುಗಳು. ಭಾರತೀಯರ ನಾಡಿ ಮಿಡಿತವನ್ನು ಇಷ್ಟರ ಮಟ್ಟಿಗೆ ಅರಿತಿರುವ ಕಂಪನಿ ಭಾರತದಲ್ಲಿ ಬೇರೊಂದಿಲ್ಲ ಎಂದರೆ ಅದು ಖಂಡಿತಾ ಅತಿಶಯೋಕ್ತಿಯಾಗಲಾರದು ಎಂಬುದು ನಮ್ಮ ಅಭಿಪ್ರಾಯ.
ಇನ್ನು ಇತ್ತೀಚೆಗಷ್ಟೇ ಮಾರುತಿ ಸುಜುಕಿ ಕಂಪನಿಯು ಫ್ರಾಂಕ್ಸ್ ಎನ್ನು ಕ್ರಾಸ್ ಓವರ್ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಗೆ ಲಾಂಚ್ ಮಾಡಿತ್ತು. ಆಟೋ ಎಕ್ಸ್ಪೋದಲ್ಲಿ ಮಾರುತಿ ಸುಜುಕಿಯು ತನ್ನ ಬಹು ನಿರೀಕ್ಷಿತ ಜಿಮ್ನಿಯ ಜೊತೆಗೆ ಫ್ರಾಂಕ್ಸ್ ಕಾರನ್ನು ಬಿಡುಗಡೆ ಮಾಡಿ ಎಲ್ಲರಿಗೂ ಅಚ್ಚರಿ ನೀಡಿತ್ತು.

ಇದೀಗ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಅನ್ನು ಮಾರುತಿಯು ವಿದೇಶಕ್ಕೆ ಎಕ್ಸ್‌ಪೋರ್ಟ್ ಮಾಡುತ್ತಿದೆ. ಈ ಮೂಲಕ ಈ ಫ್ರಾಂಕ್ಸ್ ಕಾರ್‌ನ ಮಾರುಕಟ್ಟೆಯನ್ನು ಇತರ ದೇಶಗಳಿಗೂ ವಿಸ್ತರಿಸಿದ್ದು, ಇದನ್ನು ಹೊರ ದೇಶದಲ್ಲಿಯೂ ಸ್ವಂತ ಮಾಡಿ ಕೊಳ್ಳಬಹುದಾಗಿದೆ. ಮೊದಲ ಬ್ಯಾಚ್‌ನಲ್ಲಿ ಸುಮಾರು 556 ಯೂನಿಟ್‌ಗಳನ್ನು ಕಳಿಸಲಾಗುತ್ತಿದೆ.
ಈ ಮರುತಿ ಸುಜುಕಿ ಫ್ರಾಂಕ್ಸ್ ಅನ್ನು ಕಂಪನಿಯು ಮುಂಬೈನ ಮುಂದ್ರಾ ಬಂದರಿನಿಂದ ಲ್ಯಾಟಿನ್ ಅಮೇರಿಕಾ, ಮಿಡಲ್ ಈಸ್ಟ್ ಮತ್ತು ಆಫ್ರಿಕಾ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇನ್ನು ಈ ಕಾರನ್ನು ಕಂಪನಿಯು ಆಕರ್ಷಕ ಬೆಲೆಯಲ್ಲಿ ಭಾರತದಲ್ಲಿ ಲಾಂಚ್ ಮಾಡಿದ್ದು, ಇದೇ ಈ ಕಾರಿನ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲು ಕಾರಣವಾದ ಅಂಶ.

ಫ್ರಾಂಕ್ಸ್‌ನ ಸಿಗ್ಮ ಟ್ರಿಮ್ ವೆರಿಯೆಂಟ್ ಅನ್ನು ಕಂಪನಿಯು ಸುಮಾರು 7.47 ಲಕ್ಷ ಎಕ್ಸ್ ರೂಮ್ ಬೆಲೆಗೆ ಲಾಂಚ್ ಮಾಡಿತ್ತು. ಇನ್ನು ಇದರ ಟಾಪ್ ವೇರಿಯೆಂಟ್ ಆದ ಆಲ್ಫಾ ಟರ್ಬೋ ಸುಮಾರು 13.14 ಲಕ್ಷ ಎಕ್ಸ್ ಶೋ ರೂಮ್ ಬೆಲೆಗೆ ಕೊಂಡು ಕೊಳ್ಳಬಹುದಾಗಿದೆ.
ಇನ್ನು ಈ ಕಾರಿನ ಎಂಜಿನ್ ನೊಡುವುದಾದರೆ ಇದು, 1.0-ಲೀಟರ್, ಮೂರು-ಸಿಲಿಂಡರ್ ಟರ್ಬೋಚಾರ್ಜ್ಡ್ ಬೂಸ್ಟರ್‌ಜೆಟ್ ಎಂಜಿನ್ ಅಳವಡಿಸಲಾಗಿದೆ. ಬೂಸ್ಟರ್ ಜೆಟ್ ಎಂಜಿನ್ ಬಲೆನೊದ 1.2-ಲೀಟರ್ K12C ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್‌ನೊಂದಿಗೆ ಇರುತ್ತದೆ. ಬೂಸ್ಟರ್‌ಜೆಟ್ ಎಂಜಿನ್ ಎರಡು ಕೊಡುಗೆಗಳಲ್ಲಿ ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ಹೊಸ ಫ್ರಾಂಕ್ಸ್‌ನ ಡೆಲ್ಟಾ+, ಝೀಟಾ ಮತ್ತು ಆಲ್ಫಾ ಟ್ರಿಮ್ ಹಂತಗಳೊಂದಿಗೆ ನೀಡಲಾಗುತ್ತದೆ.
ಇನ್ನು ಈ ಎಂಜಿನ್‌ಗೆ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನ್ವಟರ್ ಗೇರ್ ಬಾಕ್ಸ್ ನೀಡಲಾಗಿದ್ದು, ಎಂಜಿನ್ 89 bhp ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್‌ನ ಆಯ್ಕೆಯೊಂದಿಗೆ ನೀಡಲಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications