Maruti Suzuki FRONX: ಬಹುದಿನಗಳಿಂದ ಕಾಯುತ್ತಿದ್ದ ಮಾರುತಿ ಸುಜುಕಿ ಫ್ರಾಂಕ್ಸ್ ವಿತರಣೆ ಶುರು.. ಮೈಲೇಜ್ ಎಷ್ಟು?
ಭಾರತದಲ್ಲಿ 'ಮಾರುತಿ ಸುಜುಕಿ' ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಅದರ ಕಾರುಗಳ ಕಾರ್ಯಕ್ಷಮತೆ, ವೈಶಿಷ್ಟ್ಯ ಹಾಗೂ ವಿನ್ಯಾಸ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತವೆ. ಇತ್ತೀಚೆಗೆ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಬಹುನೀರಿಕ್ಷಿತ ಫ್ರಾಂಕ್ಸ್ ಎಸ್‌ಯುವಿಯನ್ನು ಗರಿಷ್ಠ ಮೈಲೇಜ್ ನೊಂದಿಗೆ ಬಿಡುಗಡೆಗೊಳಿಸಿ, ಭಾರೀ ಸುದ್ದಿ ಮಾಡಿತ್ತು.
ಸದ್ಯ, ದೊರೆತ್ತಿರುವ ಮಾಹಿತಿ ಪ್ರಕಾರ, ದೇಶಾದ್ಯಂತ ಹಲವು ನೆಕ್ಸಾ ಡೀಲರ್‌ಶಿಪ್ ಗಳಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki FRONX) ಎಸ್‌ಯುವಿ ವಿತರಣೆ ಶುರುವಾಗಿದ್ದು, ಗ್ರಾಹಕರು ಖುಷಿಯಿಂದಲೇ ಡೆಲಿವರಿ ಪಡೆಯುತ್ತಿದ್ದಾರೆ. ನೂತನ ಫ್ರಾಂಕ್ಸ್ ಎಸ್‌ಯುವಿ ರೂ.7.47 ಲಕ್ಷದಿಂದ ರೂ.13.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಳೆದ ಜನವರಿಯಲ್ಲಿ ಬುಕಿಂಗ್ ಆರಂಭವಾದ ಈ ಎಸ್‌ಯುವಿಗೆ ಈವರೆಗೆ 39,000 ಹೆಚ್ಚು ಗ್ರಾಹಕರು ಆರ್ಡರ್ ಮಾಡಿದ್ದಾರೆ.

ಯಾವುದೇ ಕಾರು ಖರೀದಿಸುವವರಿಗೆ ಮೈಲೇಜ್ ಮುಖ್ಯವಾಗುತ್ತದೆ. ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ, ಇತರೆ ಕಂಪನಿ ಕಾರುಗಳಿಗಿಂತ ಉತ್ತಮ ಇಂಧನ ದಕ್ಷತೆ ಹೊಂದಿದೆ. ಇದರ 1.2 ಲೀಟರ್ ಕೆ ಸೀರಿಯಸ್ ಡುಯೆಲ್ ಜೆಟ್ ಪೆಟ್ರೋಲ್ ಎಂಜಿನ್, 21.79 kmpl - 22.89 kmpl, 1.0 ಲೀಟರ್ ಕೆ ಸೀರಿಯಸ್ ಟರ್ಬೋ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ 20.01 kmpl - 21.50 kmpl ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.2 ಲೀಟರ್ ಕೆ ಸೀರಿಯಸ್ ಡುಯೆಲ್ ಜೆಟ್ ಪೆಟ್ರೋಲ್ ಎಂಜಿನ್ (89.7 PS ಪವರ್, 113 Nm ಪೀಕ್ ಟಾರ್ಕ್), 1.0 ಲೀಟರ್ ಕೆ ಸೀರಿಯಸ್ ಟರ್ಬೋ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ (100 PS ಪವರ್, 147.6 Nm ಪೀಕ್ ಟಾರ್ಕ್) ಹೊಂದಿದೆ. ಮ್ಯಾನುವಲ್/ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಈ ಕಾರು, ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್, ಝೀಟಾ ಮತ್ತು ಆಲ್ಫಾ ಎಂಬ 5 ರೂಪಾಂತರ, ಮೂರು ಡ್ಯುಯಲ್ ಟೋನ್ ಮತ್ತು ಆರು ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಫ್ರಂಟ್ ಆಕರ್ಷಕ ಗ್ರೀಲ್, ಸ್ಪ್ಲಿಟ್ ಹೆಡ್‌ಲ್ಯಾಂಪ್ಸ್, ಎಲ್ಇಡಿ DRL ಹೊಂದಿದೆ. 16 ಇಂಚಿನ ಅಲಾಯ್ ವೀಲ್ಸ್ ಅನ್ನು ಪಡೆದಿದ್ದು, ಹಿಂಭಾಗವು ಆಕರ್ಷಕ ಲುಕ್ ಹೊಂದಿದೆ. ಬಲೆನೊ ಆಧಾರಿತ ಎಸ್‌ಯುವಿಯಾಗಿರುವುದರಿಂದ ಒಳಭಾಗವು ಅತ್ಯಾಧುನಿಕವಾಗಿದೆ.
ಈ ಕಾರು, 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಅರ್ಕಾಮಿಸ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋ ಕ್ಲೈಮೇಟ್ ಕಂಟ್ರೋಲ್, ಟೈಪ್ ಸಿ ಚಾರ್ಜರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಪಡೆದಿದೆ.
ಒಟ್ಟಾರೆ, ದೇಶಾದ್ಯಂತ ಹಲವು ನೆಕ್ಸಾ ಡೀಲರ್‌ಶಿಪ್ ಗಳಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ವಿತರಣೆ ಆರಂಭವಾಗಿದ್ದು, ಗ್ರಾಹಕರಿಗೆ ಖುಷಿ ನೀಡಿದೆ. ಕೆಲವೇ ದಿನಗಳಲ್ಲಿ ಈ ಕಾರು ಭಾರತದ ರಸ್ತೆಗಳಲ್ಲಿ ಅಬ್ಬರಿಸುವುದು ಗ್ಯಾರಂಟಿ. ಜೊತೆಗೆ ಕೈಗೆಟುಕುವ ಡೌನ್ ಪೇಮೆಂಟ್ ಹಾಗೂ ಇಎಂಐ ಕೂಡ ಕಡಿಮೆಯಿದೆ. ಇವೆಲ್ಲ ಅಂಶಗಳು ಫ್ರಾಂಕ್ಸ್ ಎಸ್‌ಯುವಿ ಖರೀದಿಸುವಂತೆ ಗ್ರಾಹಕರನ್ನು ಪ್ರೇರಿಪಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications