Maruti Suzuki Fronx Review: ಜಬರ್ದಸ್ತ್ ಮಾರುತಿ ಸುಜುಕಿ ಫ್ರಾಂಕ್ಸ್‌ ವಿಮರ್ಶೆ..ಹೇಗಿದೆ ಗೊತ್ತಾ?

ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇನೇನು ಕೆಲವೇ ದಿನಗಳಲ್ಲಿ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ತನ್ನದೇ ಹವಾ ಸೃಷ್ಟಿಸಲು ಕೈಗೆಟುಕುವ ಬೆಲೆಯಲ್ಲಿ ಜಬರ್ದಸ್ತ್ 'ಫ್ರಾಂಕ್ಸ್‌' ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ. ಈಗಾಗಲೇ ಇದು ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ.

ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕಂಪನಿ ತನ್ನೆರಡು ಬಹುನೀರಿಕ್ಷಿತ ಎಸ್‌ಯುವಿಗಳನ್ನು ಪ್ರದರ್ಶನ ಮಾಡಿತ್ತು. ಅವುಗಳೆಂದರೆ, 5 ಡೋರ್ ಜಿಮ್ನಿ, ಬಲೆನೊ ಆಧಾರಿತ ಹೊಸ ಕ್ರಾಸ್ಒವರ್ ಫ್ರಾಂಕ್ಸ್‌ ಎಸ್‌ಯುವಿ, ಇವರೆಡು ಅಂದಿನಿಂದಲೇ ಭಾರೀ ಖ್ಯಾತಿಗಳಿವೆ. ಸದ್ಯ, ಬಿಡುಗಡೆಗೆ ಸನಿಹವಾಗಿರುವ ಫ್ರಾಂಕ್ಸ್‌ ಕಾರಿನ ಟೆಸ್ಟ್ ಡ್ರೈವ್ ನಡೆಸಲು ಗೋವಾದಲ್ಲಿ ನಮ್ಮ ತಂಡಕ್ಕೆ ಅವಕಾಶ ಸಿಕ್ಕಿದ್ದು, ಇದರ ಕಾರ್ಯಕ್ಷಮತೆ, ವಿನ್ಯಾಸ ಹಾಗೂ ವೈಶಿಷ್ಟ್ಯದ ಕುರಿತು ವಿಮರ್ಶೆ ಇಲ್ಲಿದೆ.

Maruti Suzuki Fronx Review: ಜಬರ್ದಸ್ತ್ ಮಾರುತಿ ಸುಜುಕಿ ಫ್ರಾಂಕ್ಸ್‌ ವಿಮರ್ಶೆ..ಹೇಗಿದೆ ಗೊತ್ತಾ?

ವಿನ್ಯಾಸ ಹಾಗೂ ವೈಶಿಷ್ಟ್ಯ: ಮಾರುತಿ ಸುಜುಕಿ ಫ್ರಾಂಕ್ಸ್‌ ಮುಂಭಾಗದ ವಿನ್ಯಾಸ ಬಹುತೇಕ ಗ್ರಾಂಡ್ ವಿಟಾರಾ ಎಸ್‌ಯುವಿಗೆ ಹೋಲಿಕೆಯಾಗಲಿದ್ದು, ಅದೇ ರೀತಿಯ ಲುಕ್ ಹೊಂದಿದೆ . ಕ್ರೋಮ್ ಸ್ಟ್ರಿಪ್‌ನ ಗ್ರೀಲ್ ಮೇಲ್ಭಾಗವಿರುವ ಸುಜುಕಿ ಬ್ಯಾಡ್ಜ್‌ಗೆ ಟ್ರಿಪಲ್ ಎಲ್ಇಡಿ DRLs ಕನೆಕ್ಟ್ ಆಗಿದೆ. ಇದಿಷ್ಟೇ ಅಲ್ಲದೆ, ಬಂಪರ್‌ ಬದಿಯಲ್ಲಿ ಆಕರ್ಷಕ ಹೆಡ್‌ಲ್ಯಾಂಪ್‌ನ್ನು ಪಡೆದಿದೆ. ಸೈಡ್ ನಿಂದ ನೋಡಿದಾದ ಫ್ರಾಂಕ್ಸ್‌, ಬಲೆನೊದಂತೆ ಕಾಣಲಿದ್ದು, ಅದೇ ರೀತಿಯ ಸಿ ಪಿಲ್ಲರ್‌ ಆಕಾರವನ್ನು ಹೊಂದಿದೆ.

ಮಾರುತಿ ಸುಜುಕಿಯ ಈ ಫ್ರಾಂಕ್ಸ್‌ ಕಾರಿನ ಹಿಂಭಾಗವು ನೋಡುಗರನ್ನು ಸೆಳೆಯುತ್ತದೆ. ಶಾರ್ಪ್ ಆದ ವಿಂಡ್‌ಸ್ಕ್ರೀನ್ ಮತ್ತು ಕನೆಕ್ಟ್ದ್ ಎಲ್‌ಇಡಿ ಟೈಲ್‌ಲೈಟ್‌ ಹೊಂದಿದೆ. ಜೊತೆಗೆ ಹೊಸದಾದ 16 ಇಂಚಿನ ಅಲಾಯ್ ವೀಲ್ಸ್ ಪಡೆದಿದೆ. ಒಮ್ಮೆ ಕಾರಿನ ಡೋರ್ ತೆಗೆದು ಒಳಭಾಗದ ಕ್ಯಾಬಿನ್ ಹೊಕ್ಕರೆ ಅದು ಬಲೆನೊ ಕಾರನ್ನೇ ನೂರಕ್ಕೆ ನೂರು ಹೋಲಿಕೆಯಾಗಲಿದ್ದು, ಹಲವರಿಗೆ ಇಷ್ಟವಾಗದೇ ಇರಬಹುದು. ಸೀಟುಗಳು ಕುಳಿತುಕೊಳ್ಳಲು ಆರಾಮದಾಯವಾಗಿವೆ. ಆದರೆ, ಡ್ಯಾಶ್ ಬೋರ್ಡ್ ಅಷ್ಟಾಗಿ ಉತ್ತಮವಾಗಿಲ್ಲ.

Maruti Suzuki Fronx Review: ಜಬರ್ದಸ್ತ್ ಮಾರುತಿ ಸುಜುಕಿ ಫ್ರಾಂಕ್ಸ್‌ ವಿಮರ್ಶೆ..ಹೇಗಿದೆ ಗೊತ್ತಾ?

ಫ್ರಾಂಕ್ಸ್‌ ಕೂಡ ಮಾರುಕಟ್ಟೆಗೆ ಬರುವ ಹೊಸ ಕಾರುಗಳಂತೆ ಅತ್ಯಾಕರ್ಷಕ ವೈಶಿಷ್ಟ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಎರಡಕ್ಕೂ ಸಪೋರ್ಟ್ ಮಾಡುವ ದೊಡ್ಡದಾದ 9 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ ಅನ್ನು ಹೊಂದಿದೆ. 40+ ಕನೆಕ್ಟ್ದ್ ಕಾರ್ ಫೀಚರ್ಸ್, 360 ಡಿಗ್ರಿ ಕ್ಯಾಮೆರಾ, ಹೆಡ್ಸ್ ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪಡೆದಿದೆ. ಆಟೋಮೆಟಿಕ್ ರೂಪಾಂತರಗಳಲ್ಲಿ ಪ್ಯಾಡ್ & ಪ್ಯಾಡಲ್ ಶಿಫ್ಟರ್‌ ಅನ್ನು ಹೊಂದಿದೆ.

ಪ್ರತಿಯೊಬ್ಬ ಹೊಸ ಕಾರು ಖರೀದಿದಾರರು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅದಕ್ಕೆ ತಕ್ಕಂತೆ ಫ್ರಾಂಕ್ಸ್‌ ಕೂಡ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಪಾರ್ಕಿಂಗ್ ಸೆನ್ಸರ್ಸ್, ಡೇ, ನೈಟ್ IRVM ಹಾಗೂ ಮಕ್ಕಳ ಸೀಟ್ ಗಳಿಗೆ ISOFIX ಆಂಕರ್ ಪಾಯಿಂಟ್‌ ಅನ್ನು ಹೊಂದಿದೆ.

Maruti Suzuki Fronx Review: ಜಬರ್ದಸ್ತ್ ಮಾರುತಿ ಸುಜುಕಿ ಫ್ರಾಂಕ್ಸ್‌ ವಿಮರ್ಶೆ..ಹೇಗಿದೆ ಗೊತ್ತಾ?

ಈ ಫ್ರಾಂಕ್ಸ್, 6 ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಅರ್ಟೆನ್ ಬ್ರೌನ್, ಒಪ್ಯುಲೆಂಟ್ ರೆಡ್ ಹಾಗೂ ಸ್ಪ್ಲೆಂಡಿಡ್ ಸಿಲ್ವರ್. ಜೊತೆಗೆ 3 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಪ್ರಮುಖವಾಗಿ ಅರ್ಥೇನ್ ಬ್ರೌನ್, ಒಪ್ಯುಲೆಂಟ್ ರೆಡ್, ಸ್ಪ್ಲೆಂಡಿಡ್ ಸಿಲ್ವರ್ ವಿತ್ ಬ್ಲ್ಯೂಯಿಸ್ ಬ್ಲ್ಯಾಕ್ ರೋಫ್.

ಎಂಜಿನ್ ಕಾರ್ಯಕ್ಷಮತೆ ಹಾಗೂ ಸುತ್ತಳತೆ: ಮಾರುತಿ ಸುಜುಕಿಯ ಫ್ರಾಂಕ್ಸ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆದಿದೆ. ಅವುಗಳೆಂದರೆ, 1.2 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಕೆ12ಸಿ ಎಂಜಿನ್ ಹಾಗೂ ನವೀಕರಿಸುವ ಬಲೆನೊ RS ರೂಪಾಂತರ ಪಡೆದಿರುವಂತೆ 998 ಸಿಸಿ ಟರ್ಬೊಚಾರ್ಜ್ಡ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಜೊತೆಗೆ ಇವೆರಡು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುವುದು ವಿಶೇಷವಾಗಿದೆ.

Maruti Suzuki Fronx Review: ಜಬರ್ದಸ್ತ್ ಮಾರುತಿ ಸುಜುಕಿ ಫ್ರಾಂಕ್ಸ್‌ ವಿಮರ್ಶೆ..ಹೇಗಿದೆ ಗೊತ್ತಾ?

ಈ ಕಾರಿನ 1.2 ಲೀಟರ್ ಎಂಜಿನ್, 88.5 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 5 ಸ್ಪೀಡ್ ಮ್ಯಾನುವಲ್/ ಆಟೋಮ್ಯಾಟಿಕ್ (AMT) ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಮತ್ತೊಂದು 998ಸಿಸಿ ಟರ್ಬೊಚಾರ್ಜ್ಡ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್, 98.7 ಪವರ್, 147.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಫ್ರಾಂಕ್ಸ್ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 3,995ಎಂಎಂ ಉದ್ದ, 1,765ಎಂಎಂ ಅಗಲ, 1,550ಎಂಎಂ ಎತ್ತರ ಹಾಗೂ 2,520ಎಂಎಂ ಉದ್ದದ ವೀಲ್ ಬೇಸ್ ಹೊಂದಿದೆ. 190ಎಂಎಂ ಗ್ರೌಂಡ್ ಕ್ಲಿಯರೆನ್ಸ್ , 37 ಲೀಟರ್ ಸಾಮರ್ಥ್ಯದ ಫ್ಯೂಯೆಲ್ ಟ್ಯಾಂಕ್ ಜೊತೆಗೆ 308 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದಿದೆ. 1.2 ಲೀಟರ್ ಎಂಜಿನ್ ಕಾರು, 965 - 975 ಕೆಜಿ, ಟರ್ಬೊಚಾರ್ಜ್ಡ್ ಎಂಜಿನ್ ಕಾರು, 1,015 - 1,060 ಕೆಜಿ ತೂಕವಿದೆ.

Maruti Suzuki Fronx Review: ಜಬರ್ದಸ್ತ್ ಮಾರುತಿ ಸುಜುಕಿ ಫ್ರಾಂಕ್ಸ್‌ ವಿಮರ್ಶೆ..ಹೇಗಿದೆ ಗೊತ್ತಾ?

ಡ್ರೈವಿಂಗ್ ಇಂಪ್ರೆಷನ್ಸ್: ಮಾರುತಿ ಸುಜುಕಿ ಫ್ರಾಂಕ್ಸ್ ಚಾಲಕರಿಗೆ ಒಳ್ಳೆಯ ಡ್ರೈವಿಂಗ್ ಅನುಭವ ನೀಡುತ್ತದೆ. ನಮ್ಮ ತಂಡಕ್ಕೆ ಬೂಸ್ಟರ್ ಜೆಟ್ ಎಂಜಿನ್ ನ 6 ಸ್ವೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿರುವ ಫ್ರಾಂಕ್ಸ್ ಕಾರು ಡ್ರೈವ್ ಮಾಡಲು ಅವಕಾಶ ದೊರೆಯಿತು. ಇದನ್ನು ವಿವರಿಸುವುದು ಕಷ್ಟ. ಆದರೆ, ಚೆನ್ನಾಗಿತ್ತು. ಗೇರ್‌ಬಾಕ್ಸ್ ಅನ್ನು ಆಟೋಮೆಟಿಕ್ ಮೋಡ್‌ನಲ್ಲಿ ಬಿಡುವುದು ಉತ್ತಮ. ನಮಗೆ ಕಾರು ಡ್ರೈವಿಂಗ್ ಮಾಡಿದ ಭಾವನೆ ಬರಬೇಕು ಅಂದುಕೊಂಡರೆ, ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಸುಲಭವಾಗಿ ಗೇರ್‌ ಬದಲಾಯಿಸಬಹುದು.

ಈ ಕಾರಿನ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಮಾತನಾಡುವುದರೆ, ಫ್ರಂಟ್ ಡಿಸ್ಕ್, ರೇರ್ ಡ್ರಮ್‌ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಬ್ರೇಕ್ ಪೆಡಲ್ ಕೂಡ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. ಫ್ರಾಂಕ್ಸ್‌ನ ಸಸ್ಪೆನ್ಷನ್ ಸೆಟಪ್ ಅತುತ್ತಮವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಉಬ್ಬು ಹಾಗೂ ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಸಂಚರಿಸುವಾಗ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಹೆಚ್ಚಿನ ವೇಗದಲ್ಲಿ ಪ್ರಯಾಣಿಸುವಾಗ ಸ್ಟೀರಿಂಗ್ ತುಂಬಾ ಹಗುರವೆಂಬಂತೆ ಭಾಸವಾಗುತ್ತದೆ. ಇದು ಕೊಂಚ ಭಯಬೀಳಿಸುತ್ತದೆ. ಆದರೆ, ಹೆದರುವ ಅಗತ್ಯವಿಲ್ಲ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯಂತೆ ಕಂಡರೂ ಬಲೆನೊ ಹ್ಯಾಚ್ ಬ್ಯಾಕ್ ನ ಹೊಸ ಆವೃತ್ತಿಯೇನೂ ಎಂದು ಅನಿಸುತ್ತದೆ. ಆದರೆ, ಈ ಕಾರಿನಲ್ಲಿ ಸ್ಪೋರ್ಟ್ ಮೋಡ್‌ ಇಲ್ಲದಿರುವುದು ಜೊತೆಗೆ ಹೆಚ್ಚಿನ ವೇಗದಲ್ಲಿ ಚಲಿಸುವಾಗ ಅಲ್ಟ್ರಾ ಲೈಟ್ ಸ್ಟೀರಿಂಗ್ ಸ್ವಲ್ಪಮಟ್ಟಿಗೆ ಬೇಸರ ತರಿಸುತ್ತದೆ. ಈಗಾಗಲೇ ಫ್ರಾಂಕ್ಸ್ ಗರಿಷ್ಠ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಳ್ಳುವ ಮೂಲಕ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಈ ತಿಂಗಳ ಕೊನೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Article Published On: Sunday, April 9, 2023, 13:00 [IST]
English summary
Maruti suzuki fronx review details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+