Maruti Suzuki FRONX: ಗರಿಷ್ಠ ಮೈಲೇಜ್‌ನ ಮಾರುತಿ ಫ್ರಾಂಕ್ಸ್ ಎಸ್‌ಯುವಿ ಇಷ್ಟವೇ.. ಮುಖ್ಯ ಮಾಹಿತಿ
ಮಾರುತಿ ಸುಜುಕಿ ಕಂಪನಿ, ಇತ್ತೀಚೆಗೆ ಬಹುನಿರೀಕ್ಷಿತ ಫ್ರಾಂಕ್ಸ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಬಲೆನೊ ಆಧಾರಿತ ಈ ಎಸ್‌ಯುವಿ ತನ್ನ ಗರಿಷ್ಠ ಮೈಲೇಜ್ ಹಾಗೂ ಕೈಗೆಟುಕುವ ಬೆಲೆಯಿಂದ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದೆ. ನೀವು ಖರೀದಿಸಲು ಯೋಚಿಸುತ್ತಿದ್ದರೇ ಆನ್-ರೋಡ್ ಬೆಲೆ, ಡೌನ್ ಪೇಮೆಂಟ್ ಮತ್ತು ಇಎಂಐ ಆಯ್ಕೆ ಬಗ್ಗೆ ತಿಳಿಸಿಕೊಟ್ಟಿದ್ದೇವೆ.
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ರೂಪಾಂತರಗಳಿಗೆ ಅನುಗುಣವಾಗಿ ಬೇರೆ, ಬೇರೆ ಬೆಲೆಯನ್ನು ಹೊಂದಿದ್ದು, ನಾವು ಇಲ್ಲಿ ಕೆಲವೊಂದರ ಬಗ್ಗೆ ಮಾತ್ರ ವಿವರಿಸಿದ್ದೇವೆ. ಮೊದಲಿಗೆ ಎಂಟ್ರಿ ಲೆವೆಲ್ 1.2 ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 'ಸಿಗ್ಮಾ' ವೇರಿಯೆಂಟ್ ರೂ.8.39 ಲಕ್ಷ (ಆನ್-ರೋಡ್, ದೆಹಲಿ) ಬೆಲೆಯನ್ನು ಹೊಂದಿದೆ. ರೂ.80,000 ಡೌನ್ ಪೇಮೆಂಟ್ ಮಾಡಿ ಖರೀದಿಸಿದರೆ, ಐದು ವರ್ಷದ ಅವಧಿಗೆ ಶೇಕಡ 10% ಬಡ್ಡಿ ದರದಲ್ಲಿ ತಿಂಗಳಿಗೆ ರೂ.16,126 ಇಎಂಐ ಪಾವತಿಸಬೇಕು.

ಟಾಪ್ ಎಂಡ್ ಮಾದರಿ, 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 'ಆಲ್ಫಾ' AT ಡ್ಯುಯಲ್ ಟೋನ್ ವೇರಿಯೆಂಟ್ ರೂ.15.12 ಲಕ್ಷ ಆನ್-ರೋಡ್ ದರವನ್ನು ಹೊಂದಿದೆ. ರೂ.1.51 ಲಕ್ಷ ಡೌನ್ ಪೇಮೆಂಟ್ ಪಾವತಿಸಿ, ಐದು ವರ್ಷದ ಅವಧಿಗೆ ಶೇಕಡ 10% ಬಡ್ಡಿ ದರದಲ್ಲಿ ಮಾಸಿಕ ರೂ.28,916 ಇಎಂಐ ಕಟ್ಟಬೇಕು. ಇನ್ನುಳಿದಂತೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಮೀಪ ನೆಕ್ಸಾ ಡೀಲರ್ ಶಿಪ್ ಸಂಪರ್ಕಿಸಿ.
ಈ ಕಾರಿನ ಪವರ್ ಟ್ರೇನ್ ಬಗ್ಗೆ ಮಾತನಾಡುವುದಾದರೆ, ಇದು ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. 1.2 ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 90 PS ಪವರ್ ಹಾಗೂ 113 Nm ಪೀಕ್ ಟಾರ್ಕ್, 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಪೆಟ್ರೋಲ್ ಎಂಜಿನ್ 100 PS ಪವರ್, 147.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇವೆರೆಡು, ಮ್ಯಾನುವಲ್, ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿವೆ.
ರೂಪಾಂತರಗಳಿಗೆ ಅನುಗುಣವಾಗಿ, 20.01 kml ನಿಂದ 22.89 kml ಮೈಲೇಜ್ ನೀಡಲಿದ್ದು, ವಿನ್ಯಾಸ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಯುವುದಾದರೆ, ಮುಂಭಾಗ ಅತ್ಯಾಧುನಿಕ ಗ್ರೀಲ್, ಸ್ಪ್ಲಿಟ್ ಹೆಡ್‌ಲ್ಯಾಂಪ್ಸ್, ಎಲ್ಇಡಿ DRL ಪಡೆದಿದೆ. ಜೊತೆಗೆ 16 ಇಂಚಿನ ಅಲಾಯ್ ವೀಲ್ಸ್ ಹೊಂದಿದ್ದು, ಹಿಂಭಾಗದ ಲುಕ್ ಕೂಡ ಆಕರ್ಷಕವಾಗಿದೆ. ಅಲ್ಲದೆ, 2520 ಎಂಎಂ ಅಳತೆಯ ವೀಲ್ ಬೇಸ್ ಒಳಗೊಂಡಿದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ, 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಅರ್ಕಾಮಿಸ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋ ಕ್ಲೈಮೇಟ್ ಕಂಟ್ರೋಲ್, ಟೈಪ್ ಸಿ ಚಾರ್ಜರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), 3 ಪಾಯಿಂಟ್ ELR ಸೀಟ್‌ಬೆಲ್ಟ್ಸ್, ಅನ್ನು ಪಡೆದಿದೆ.
ಫ್ರಾಂಕ್ಸ್ ಎಸ್‌ಯುವಿ 10 ಆಕರ್ಷಕ ಬಣ್ಣಗಳ ಆಯ್ಕೆಯನ್ನು ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇದರ ಜನಪ್ರಿಯತೆ ಎಷ್ಟಿದೆ ಅಂದ್ರೆ, ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸಜುಕಿ ಈ ಎಸ್‌ಯುವಿಯನ್ನು ಪ್ರದರ್ಶಿಸಿ, ಅಂದಿನಿಂದಲೇ ಬುಕಿಂಗ್ ಆರಂಭಿಸಿತ್ತು. ಇತ್ತೀಚಿನ ವರದಿ ಪ್ರಕಾರ, ಬರೋಬ್ಬರಿ, 39000 ಗ್ರಾಹಕರು ಆರ್ಡರ್ ಮಾಡಿದ್ದಾರೆ.
ಇನ್ನು, ಕಂಪನಿಯು ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ಪರಿಚಯಿಸಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ಗರಿಷ್ಠ ಮೈಲೇಜ್ ನೊಂದಿಗೆ ಲಭ್ಯವಿದೆ. ದರಕ್ಕೆ ತಕ್ಕಂತೆ ಆಕರ್ಷಕ ವೈಶಿಷ್ಟ್ಯವನ್ನು ಹೊಂದಿದೆ. ಡೌನ್ ಪೇಮೆಂಟ್ ಕೈಗೆಟುಕುವಂತ್ತಿದ್ದು, ಇಎಂಐ ಆಯ್ಕೆಯು ಇರುವುದರಿಂದ ಕಾರು ಖರೀದಿಸುವ ಆಸೆಯನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದು. ಫ್ರಾಂಕ್ಸ್ ಎಸ್‌ಯುವಿಯನ್ನು ಮುಂಬರುವ ದಿನಗಳಲ್ಲಿ ಮಾರುತಿ ಸುಜುಕಿ ಎಲೆಕ್ಟ್ರಿಕ್ ಆವೃತ್ತಿಯಾಗಿಯು ಪರಿಚಯಿಸಬಹುದು.


Click it and Unblock the Notifications