ಭರ್ಜರಿ ಮೈಲೇಜ್, ಆಕರ್ಷಕ ಬೆಲೆಯ ಮಾರುತಿ ಕಾರಿಗೆ ಭಾರೀ ಡಿಮ್ಯಾಂಡ್: ಈ ಕಾರಿಗೆ ಮತ್ತಷ್ಟು ಕಾಯಬೇಕು
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಬಹು ನಿರೀಕ್ಷಿತ ಫ್ರಾಂಕ್ಸ್ ಕಾಂಪ್ಯಾಕ್ಟ್ ಕ್ರಾಸ್ಒವರ್ ಅನ್ನು ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಗೊಳಿಸಿತು. ಈ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.46 ಲಕ್ಷವಾಗಿದೆ.
ಬಲೆನೊ ಆಧಾರಿತ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಒಂಬತ್ತು ಬಣ್ಣಗಳಲ್ಲಿ ಲಭ್ಯವಿದೆ. ಇವುಗಳು ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಅರ್ಥನ್ ಬ್ರೌನ್, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಒಪ್ಯುಲೆಂಟ್ ರೆಡ್ ಆಗಿದೆ. ಇನ್ನು ಡ್ಯುಯಲ್-ಟೋನ್ ಆಯ್ಕೆಗಳಲ್ಲಿ ಅರ್ಥನ್ ಬ್ರೌನ್, ಒಪ್ಯುಲೆಂಟ್ ರೆಡ್ ಮತ್ತು ಸ್ಪ್ಲೆಂಡಿಡ್ ಸಿಲ್ವರ್ ಸೇರಿವೆ. ಇವೆಲ್ಲವೂ ನೀಲಿ ಕಪ್ಪು ರೂಫ್ ಹೊಂದಿದೆ.

ವರದಿಗಳ ಪ್ರಕಾರ, ಮಾರುತಿ ಸುಜುಕಿ ಫ್ರಾಂಕ್ಸ್ ಪ್ರಸ್ತುತ ದೆಹಲಿಯಲ್ಲಿ 14 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಈ ಕಾಯುವ ಅವಧಿಯು ಸಂಪೂರ್ಣ ರೂಪಾಂತರಗಳ ಮೇಲೆ ಅವಲಂಭಿಸಿದೆ. ಈ ಕಾರು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ರೂಪಾಂರಗಳಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯಲ್ಲಿ 1.0 ಲೀಟರ್ ಟರ್ಬೊ ಮತ್ತು 1.2 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ.
ಇದರಲ್ಲಿ 1.2 K12C ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ 6,000rpm ನಲ್ಲಿ 88.5bhp ಮತ್ತು 4,400rpm ನಲ್ಲಿ 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗಿದೆ. ಬಲೆನೊ ಆರ್‌ಎಸ್‌ನೊಂದಿಗೆ ಕೊನೆಯದಾಗಿ ಕಂಡ ಟರ್ಬೋಚಾರ್ಜ್ಡ್ 1.0-ಲೀಟರ್ ಬೂಸ್ಟರ್‌ಜೆಟ್ ಎಂಜಿನ್ ಹೆಚ್ಚು ಶಕ್ತಿಶಾಲಿ ಎಂಜಿನ್ ಆಗಿದೆ.
ಫ್ರಾಂಕ್ಸ್ ಕಾರಿನಲ್ಲಿ ಈ ಎಂಜಿನ್ 5,500rpm ನಲ್ಲಿ 98.7bhp ಮತ್ತು 2,000 ರಿಂದ 4,500rpm ವರೆಗೆ 147.6Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೂಸ್ಟರ್‌ಜೆಟ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಆಗಿ ನೀಡಲಾಗಿದೆ.
ಇನ್ನು ಈ ಮಾರುತಿ ಫ್ರಾಂಕ್ಸ್ 1.2 ಲೀಟರ್ Dualjet-AMT ಗೇರ್‌ಬಾಕ್ಸ್ ಸಂಯೋಜನೆಯೊಂದಿಗೆ 22.89 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಇದರ 1.2 ಲೀಟರ್ ಪೆಟ್ರೋಲ್ ಜೊತೆಗೆ ಮ್ಯಾನ್ಯುವಲ್ ಆವೃತ್ತಿಯು 21.7 ಎಂಜಿನ್ ಆವೃತ್ತಿಯು 21.79 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು 1.0 ಲೀಟರ್ ಬೂಸ್ಟರ್‌ಜೆಟ್ ರೂಪಾಂತರಗಳು ಮ್ಯಾನುವಲ್‌ನೊಂದಿಗೆ 21.50 ಕಿ.,ಮೀ ಮೈಲೇಜ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 20.01 ಕಿ.ಮೀ ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯು ಸಿಗ್ಮಾ ರೂಪಾಂತರವು ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ವೀಲ್ ಕವರ್‌ಗಳೊಂದಿಗೆ ಸ್ಟೀಲ್ ವೀಲ್‌ಗಳು, ಕೀಲೆಸ್ ಎಂಟ್ರಿ ಮತ್ತು ಗೋ, ಡ್ಯುಯಲ್-ಟೋನ್ ಇಂಟೀರಿಯರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಫ್ಯಾಬ್ರಿಕ್ ಸೀಟ್ ಅಪ್ಹೋಲ್‌ಸ್ಟರಿ, ಸ್ಟೀರಿಂಗ್‌ಗಾಗಿ ಟಿಲ್ಟ್ ಹೊಂದಾಣಿಕೆ ಮತ್ತು 60:40 ಹಿಂಭಾಗದ ಫೀಚರ್ಸ್ ಗಳೊಂದಿಗೆ ಪ್ಯಾಕ್ ಮಾಡಲಾಗಿದೆ.
ಇದರೊಂದಿಗೆ ಇನ್ನು ಸೀಟ್ ಸ್ಪ್ಲಿಟ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿಯರ್ ಡಿಫಾಗರ್ ಅನ್ನು ಹೊಂದಿದೆ. ಮಾರುತಿ ಫ್ರಾಂಕ್ಸ್ ಆಲ್ಫಾ ಟ್ರಿಮ್ 16-ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳ್ಯ್, ಡ್ಯುಯಲ್-ಟೋನ್ ಬಾಹ್ಯ ಬಣ್ಣಗಳು, 360 ಡಿಗ್ರಿ ಕ್ಯಾಮೆರಾ, HUD ಯುನಿಟ್, ಕ್ರೂಸ್ ಕಂಟ್ರೋಲ್ ಮತ್ತು ಲೆದರ್ ಸುತ್ತುವ ಸ್ಟೀರಿಂಗ್ ವೀಲ್ ಸೇರಿದಂತೆ ಕೆಲವು ವಿಶೇಷ ಫೀಚರ್ಸ್ ಗಳೊಂದಿಗೆ ಬರುತ್ತದೆ.


Click it and Unblock the Notifications