ಲ್ಯಾಟಿನ್ ಅಮೇರಿಕ ಮಾರುಕಟ್ಟೆಗಳಿಗಾಗಿ ಭಾರತದಿಂದ ಮಾರುತಿ ಗ್ರ್ಯಾಂಡ್ ವಿಟಾರಾ ರಫ್ತು ಪ್ರಾರಂಭ

ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ತಿಂಗಳುಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇದೀಗ ಮಾರುತಿ ಸುಜುಕಿ ಈ ಗ್ರ್ಯಾಂಡ್ ವಿಟಾರಾವನ್ನು ಲ್ಯಾಟಿನ್ ಅಮೇರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡಲು ಪ್ರಾರಂಭಿಸಿದೆ.

ಚೆನ್ನೈ ಬಂದರಿನ ಉತ್ತರಕ್ಕೆ 18 ಕಿಮೀ ದೂರದಲ್ಲಿರುವ ಕೋರಮಂಡಲ್ ಕರಾವಳಿಯಲ್ಲಿರುವ ಕಾಮರಾಜರ್ ಬಂದರಿನಿಂದ ಲ್ಯಾಟಿನ್ ಅಮೇರಿಕಾಕ್ಕೆ ಗ್ರ್ಯಾಂಡ್ ವಿಟಾರಾದ ಮೊದಲ ಹಂತದ ರಫ್ತು ಮಾಡಿದೆ. 2022ರ ಡಿಸೆಂಬರ್ ತಿಂಗಳಿನಲ್ಲಿ ಮಾತ್ರ ಕಂಪನಿಯು ಭಾರತದಿಂದ ಪ್ರಯಾಣಿಕ ವಾಹನಗಳನ್ನು ರಫ್ತು ಮಾಡಲು ಕಾಮರಾಜರ್ ಪೋರ್ಟ್ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಲ್ಯಾಟಿನ್ ಅಮೇರಿಕಾ, ಆಫ್ರಿಕಾ, ಮಧ್ಯಪ್ರಾಚ್ಯ, ಆಸಿಯಾನ್ ಮತ್ತು ನೆರೆಯ ಪ್ರದೇಶಗಳಾದ್ಯಂತ 60 ಕ್ಕೂ ಹೆಚ್ಚು ದೇಶಗಳಿಗೆ ಗ್ರಾಂಡ್ ವಿಟಾರಾವನ್ನು ರಫ್ತು ಮಾಡುವ ಗುರಿಯನ್ನು ಕಂಪನಿ ಹೊಂದಿದೆ.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಹಿಸಾಶಿ ಟಕೆಯುಚಿ ಅವರು ಮಾತನಾಡಿ, ಭಾರತದಿಂದ ರಫ್ತುಗಳನ್ನು ಹೆಚ್ಚಿಸಲು ಭಾರತ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುತ್ತಾ, ಮಾರುತಿ ಸುಜುಕಿ ತನ್ನ ಅಂತರಾಷ್ಟ್ರೀಯ ಉಪಸ್ಥಿತಿಯನ್ನು ಹೆಚ್ಚಿಸಲು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ರಫ್ತಿಗಾಗಿ ಉತ್ಪನ್ನ ಬಂಡವಾಳವನ್ನು ವಿಸ್ತರಿಸುವುದು ಯಶಸ್ಸಿನ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ಗ್ರಾಂಡ್ ವಿಟಾರಾವನ್ನು ಸೇರಿಸುವ ಮೂಲಕ, ನಾವು ಈಗ 17 ವಾಹನಗಳ ಶ್ರೇಣಿಯನ್ನು ರಫ್ತು ಮಾಡುತ್ತೇವೆ

2022ರ ಜುಲೈ ತಿಂಗಳಿನಲ್ಲಿ ಅನಾವರಣಗೊಂಡ ಗ್ರ್ಯಾಂಡ್ ವಿಟಾರಾ ದೇಶೀಯ ಮಾರುಕಟ್ಟೆಯಲ್ಲಿ ಅಗಾಧ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಮತ್ತು ಭಾರತ ತಯಾರಿಸಿದ ಗ್ರ್ಯಾಂಡ್ ವಿಟಾರಾ ಸಾಗರೋತ್ತರ ಮಾರುಕಟ್ಟೆಗಳಲ್ಲಿಯೂ ಇದೇ ರೀತಿಯ ಯಶಸ್ಸನ್ನು ಸಾಧಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. 2022ರ ಕ್ಯಾಲೆಂಡರ್ ವರ್ಷದಲ್ಲಿ, ಮಾರುತಿ ಸುಜುಕಿ ಇಂಡಿಯಾ 2.6 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ರಫ್ತು ಮಾಡಿದೆ. ಕಂಪನಿಯು ನಡೆಯುತ್ತಿರುವ ಹಣಕಾಸು ವರ್ಷದ 2022-23 ರ ವರ್ಷದಿಂದ ಇಲ್ಲಿಯವರೆಗೆ ದೇಶದ ಅತಿದೊಡ್ಡ ಪ್ರಯಾಣಿಕ ವಾಹನ ರಫ್ತುದಾರರಾಗಿ ಹುಂಡೈ ಇಂಡಿಯಾವನ್ನು ಹಿಂದಿಕ್ಕಿದೆ

ಈಗ ಗ್ರಾಂಡ್ ವಿಟಾರಾ ಸೇರ್ಪಡೆಯೊಂದಿಗೆ, ಭಾರತದ ಪ್ರಮುಖ ಪ್ರಯಾಣಿಕ ವಾಹನ ರಫ್ತುದಾರನಾಗಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಬಗ್ಗೆ ಹೇಳುವುದಾದರೆ, ಇದು ಸುಜುಕಿ ತನ್ನ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದೆ ಮತ್ತು ವಿನ್ಯಾಸಗೊಳಿಸಿದೆ. ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತಿದೆ. ಈ ಎಸ್‍ಯುವಿಯನ್ನು ಆರು ವಿಭಿನ್ನ ರೂಪಾಂತರ ಹಂತಗಳಲ್ಲಿ ನೀಡಲಾಗುತ್ತದೆ.

ಈ ಎಸ್‍ಯುವಿ ಸಿಗ್ಮಾ, ಡೆಲ್ಟಾ, ಝೀಟಾ, ಝೀಟಾ+, ಆಲ್ಫಾ ಮತ್ತು ಆಲ್ಫಾ+. ಆಗಿದೆ. ಝೀಟಾ, ಝೀಟಾ+, ಆಲ್ಫಾ ಮತ್ತು ಆಲ್ಫಾ+ ರೂಪಾಂತರಗಳನ್ನು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಸಹ ಲಭ್ಯವಿದೆ. ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿಯು 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು 1.5-ಲೀಟರ್ TNGA ಪೆಟ್ರೋಲ್ ಮೋಟರ್ ಸ್ಟ್ರಾಂಗ್-ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿದೆ.

ಇದರಲ್ಲಿ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ 102 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಯುನಿಟ್ ಅನ್ನು ಜೋಡಿಸಲಾಗಿದೆ. ಇನ್ನು ಎಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ರೂಪಾಂತರಗಳೊಂದಿಗೆ ಮಾತ್ರ ನೀಡಲಾಗುತ್ತದೆ. ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಮ್ ಎಂದೂ ಕರೆಯಲ್ಪಡುವ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಐಸಿಇ ಯುನಿಟ್ ಮೂಲಕ ಸಂಯೋಜಿತವಾಗಿ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಇದನ್ನು ಇ-ಸಿವಿಟಿ ಯೊಂದಿಗೆ ಮಾತ್ರ ಜೋಡಿಸಲಾಗಿದೆ. ಈ ಪವರ್‌ಟ್ರೇನ್‌ಗಾಗಿ 27.97 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಈ 5-ಸೀಟರ್ ಎಸ್‍ಯುವಿಯು 45-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಈ ಎಸ್‍ಯುವಿ ಮಾದರಿಯು ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಹೈರೈಡರ್‌ನೊಂದಿಗೆ ಕೆಲವು ಬಾಹ್ಯ ವಿಶೇಷಣಗಳನ್ನು ಹಂಚಿಕೊಂಡದೆ.

Most Read Articles

Kannada
English summary
Maruti suzuki grand vitara exports starts to latin america markets details in kannada
Story first published: Thursday, January 19, 2023, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X