Maruti Suzuki: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದಲ್ಲಿ ಜೀವರಕ್ಷಕ ವೈಶಿಷ್ಟ್ಯ ಬಂತು, ವಿಶೇಷತೆಗಳೇನು?

ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಖ್ಯಾತಿಗಳಿಸಿದೆ. ಅದರ ಗ್ರ್ಯಾಂಡ್ ವಿಟಾರಾ (Grand Vitara) ಎಸ್‌ಯುವಿಗೆ ಭಾರೀ ಬೇಡಿಕೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ, ಕಂಪನಿಯು ಈ ಕಾರಿನಲ್ಲಿ ಜೀವರಕ್ಷಕ ವೈಶಿಷ್ಟ್ಯವನ್ನು ಪರಿಚಯಿಸಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್ ಹೈಬ್ರಿಡ್ ಮಾದರಿಗಳಲ್ಲಿ AVAS (ಅಕೌಸ್ಟಿಕ್ ವೆಹಿಕಲ್ ಅಲರ್ಟಿಂಗ್ ಸಿಸ್ಟಮ್) ಫೀಚರ್ ನೀಡಿದೆ. ಈ ವೈಶಿಷ್ಟ್ಯವನ್ನು ಬಹುತೇಕ ಎಲೆಕ್ಟ್ರಿಕ್ ಕಾರುಗಳಲ್ಲಿ ನೀಡಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯುತ್ತಮ ವೈಶಿಷ್ಟ್ಯವಾಗಿದೆ. ಸರಳವಾಗಿ ಹೇಳಬೇಕಾದರೆ, ಪ್ರಾಣ ಉಳಿಸುವ ಫೀಚರ್ ಆಗಿದೆ. ಎವಿಎಎಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

Maruti Suzuki: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದಲ್ಲಿ ಜೀವರಕ್ಷಕ ವೈಶಿಷ್ಟ್ಯ ಬಂತು, ವಿಶೇಷತೆಗಳೇನು?

ಎವಿಎಎಸ್ ತಂತ್ರಜ್ಞಾನವು ಕಾರಿನ ಚಾಲಕ ಹಾಗೂ ಪಾದಚಾರಿಗಳ 'ಜೀವರಕ್ಷಕ'ದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವಾಹನದಿಂದ 5 ಅಡಿ ಅಂತರದವರೆಗೂ ಪಾದಚಾರಿಗಳಿಗೆ ಶಬ್ದ ಮಾಡಿ, ಎಚ್ಚರಿಸುತ್ತದೆ. ಅದೇ ತರಹ ಕಾರಿನ ಚಾಲಕರಿಗೂ ಸಮೀಪದಲ್ಲಿ ಜನರಿರುವವರೂ ಎಂದು ಅಲರ್ಟ್ ಮಾಡುತ್ತದೆ. ಈ ಮೂಲಕ ಎವಿಎಎಸ್ ಟೆಕ್ನಲಾಜಿ ರಸ್ತೆಯಲ್ಲಿ ಅಪಘಾತವಾಗದಂತೆ ತಡೆದು ಜನರ ಪ್ರಾಣ ಉಳಿಸುತ್ತದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್ ಹೈಬ್ರಿಡ್ ಮಾದರಿಗಳಲ್ಲಿ ಎವಿಎಎಸ್ ವೈಶಿಷ್ಟ್ಯವನ್ನು ಪರಿಚಯಿಸಿರುವುದರಿಂದ ಬೆಲೆಯು ಕೊಂಚ ಮಟ್ಟಿಗೆ (ರೂ.4,000) ಏರಿಕೆಯಾಗಿದೆ. ಆದರೆ, ಗ್ರ್ಯಾಂಡ್ ವಿಟಾರಾಕ್ಕೆ ಭರ್ಜರಿ ಬೇಡಿಕೆಯಿರುವುದರಿಂದ ಈ ದರ ಏರಿಕೆಗಳು ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಬೆಲೆ ಹೆಚ್ಚಳ ನಂತರ, ಈ ರೂಪಾಂತರಗಳು ರೂ.19.79 ಲಕ್ಷವರೆಗೆ ಎಕ್ಸ್ ಶೋರೂಂ ದರವನ್ನು ಹೊಂದಿವೆ.

ಗ್ರ್ಯಾಂಡ್ ವಿಟಾರಾದ ಟಾಪ್ ಎಂಡ್ ವೇರಿಯೆಂಟ್ಸ್ 1.5 ಲೀಟರ್ ಪೆಟ್ರೋಲ್ ಸ್ಟ್ಯಾಂಗ್ ಹೈಬ್ರಿಡ್ ಎಂಜಿನ್ ಹೊಂದಿದ್ದು, 114 hp ಗರಿಷ್ಠ ಪವರ್ ಹಾಗೂ 141 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿವೆ. e-CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿವೆ. 27.97 kmpl ವರೆಗೆ ಮೈಲೇಜ್ ನೀಡುತ್ತವೆ.

ನೆಕ್ಸಾ ಬ್ಲೂ, ಒಪ್ಯುಲೆಂಟ್ ರೆಡ್, ಗ್ರ್ಯಾಂಡ್ಯೂರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುವ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ, 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿದೆ.

ಸುರಕ್ಷತೆಯ ದೃಷ್ಟಿಯಿಂದಲ್ಲೂ ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 ಡಿಗ್ರಿ ಕ್ಯಾಮೆರಾವನ್ನು ಪಡೆಯುವ ಮೂಲಕ ಅತ್ಯಾಧುನಿಕವಾಗಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾಕ್ಕೆ ದೊಡ್ಡಸಂಖ್ಯೆಯಲ್ಲಿ ಪ್ರತಿಸ್ಪರ್ಧಿಗಳಿದ್ದು, ಹ್ಯುಂಡೈ ಕ್ರೆಟಾ, ಹೋಂಡಾ ಎಲಿವೇಟ್, ಕಿಯಾ ಸೆಲ್ಟೋಸ್, ಪೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಟೊಯೊಟಾ ಹೈರೈಡರ್ ಪ್ರಬಲವಾಗಿ ಪೈಪೋಟಿ ನೀಡುತ್ತಿವೆ. ಇನ್ನು, ಗ್ರ್ಯಾಂಡ್ ವಿಟಾರಾದಲ್ಲಿ ಜೀವರಕ್ಷಕ ವೈಶಿಷ್ಟ್ಯವಾದ ಎವಿಎಎಸ್ ಪರಿಚಯಿಸಿರುವುದರಿಂದ ಮುಂಬರುವ ದಿನದಲ್ಲಿ ಈ ಕಾರಿಗೆ ಹೆಚ್ಚಿನ ಬೇಡಿಕೆಬರಹುದು.

Article Published On: Wednesday, July 19, 2023, 12:31 [IST]
English summary
Maruti suzuki grand vitara gets avas technology details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+