ಭಾರೀ ಬೇಡಿಕೆ: ಈ ಮಾರುತಿ ಸುಜುಕಿ ಎಸ್‍ಯುವಿಗಾಗಿ 12 ವಾರಗಳವರೆಗೆ ಕಾಯಬೇಕು

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು 2022ರ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಎಸ್‍ಯುವಿಯನ್ನು ಟೊಯೊಟಾ ಕಂಪನಿಯೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಮಾರುತಿ ಸುಜುಕಿ ಕಂಪನಿಯು ಈ ಎಸ್‌ಯುವಿಯನ್ನು ಹಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಫ್ತು ಮಾಡಲು ಪ್ರಾರಂಭಿಸಿದ್ದಾರೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಗಳೊಂದಿಗೆ ಪೈಪೋಟಿ ನೀಡುತ್ತದೆ, ಈ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಗ್ರ್ಯಾಂಡ್ ವಿಟಾರಾ ಮಾದರಿಯ 9,183 ಯುನಿಟ್ ಗಳನು ಮಾರಾಟ ಮಾಡಿದ್ದಾರೆ.

ಈ ಮಾರುತಿ ಸುಜುಕಿ ಎಸ್‍ಯುವಿಗಾಗಿ 12 ವಾರಗಳವರೆಗೆ ಕಾಯಬೇಕು

ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಗೆ ಬೇಡಿಕೆ ಹೆಚ್ಚಿರುವುದರಿಂದ, ಎಸ್‌ಯುವಿಗಾಗಿ ಕಾಯುವ ಅವಧಿಯು 12 ವಾರಗಳವರೆಗೆ ಹೆಚ್ಚಾಗಿದೆ. ಗ್ರ್ಯಾಂಡ್ ವಿಟಾರಾ ಎಸ್‍ಯುವಿಗೆ ಲೋ ಟ್ರಿಮ್ ಮಾದರಿಗಳಿಗೆ ಕಾಯುವ ಅವಧಿಯು ಹೆಚ್ಚಾಗಿದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಸಿಎನ್‌ಜಿ ರೂಪಾಂತರಕ್ಕಾಗಿ ಕಾಯುವ ಅವಧಿಯು ಸುಮಾರು 2 ರಿಂದ 4 ವಾರಗಳವರೆಗೆ ಇದೆ.

ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಸ್ಟ್ರಾಂಗ್ ಹೈಬ್ರಿಡ್ ರೂಪಾಂತರಕ್ಕಾಗಿ ಕಾಯುವ ಅವಧಿಯು ಸಾಮಾನ್ಯವಾಗಿ ಬುಕಿಂಗ್ ದಿನಾಂಕದಿಂದ ಸುಮಾರು 3 ರಿಂದ 4 ವಾರಗಳವರೆಗೆ ಇರುತ್ತದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ ಕಾಯುವ ಅವಧಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರದ ಮಾರುತಿ ಸುಜುಕಿ ನೆಕ್ಸಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಬಹುದು.

ಈ ಮಾರುತಿ ಸುಜುಕಿ ಎಸ್‍ಯುವಿಗಾಗಿ 12 ವಾರಗಳವರೆಗೆ ಕಾಯಬೇಕು

ಈ ಹೊಸ ಎಸ್‍ಯುವಿಯು 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಇದು ಹೈರೈಡರ್‌ನೊಂದಿಗೆ ಕೆಲವು ಬಾಹ್ಯ ವಿಶೇಷಣಗಳನ್ನು ಹಂಚಿಕೊಂಡದೆ. ಹೈರೈಡರ್‌ನಿಂದ ಗ್ರಾಂಡ್ ವಿಟಾರಾ ದೊಡ್ಡ ವ್ಯತ್ಯಾಸವೆಂದರೆ ಅದರ ಮುಂಭಾಗದ ವಿನ್ಯಾಸ. ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸುಜುಕಿ ಎಸ್-ಕ್ರಾಸ್‌ ಮಾದರಿಗೆ ಹೋಲುತ್ತಿದೆ.

ಈ ಗ್ರ್ಯಾಂಡ್ ವಿಟಾರಾ ವಿಟಾರಾಸ ಎಸ್‍ಯುವಿಯನ್ನು ಹೊಸ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮೊದಲಿನಿಂದ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿಯು 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು 1.5-ಲೀಟರ್ TNGA ಪೆಟ್ರೋಲ್ ಮೋಟರ್ ಸ್ಟ್ರಾಂಗ್-ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿದೆ.

ಈ ಮಾರುತಿ ಸುಜುಕಿ ಎಸ್‍ಯುವಿಗಾಗಿ 12 ವಾರಗಳವರೆಗೆ ಕಾಯಬೇಕು

ಇದರಲ್ಲಿ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ 102 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಯುನಿಟ್ ಅನ್ನು ನೀಡಿದೆ. ಇನ್ನು ಈ ಎಸ್‍ಯುವಿಯ ಎಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ರೂಪಾಂತರಗಳೊಂದಿಗೆ ಮಾತ್ರ ನೀಡಲಾಗುತ್ತದೆ.

ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಮ್ ಎಂದೂ ಕರೆಯಲ್ಪಡುವ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಐಸಿಇ ಯುನಿಟ್ ಮೂಲಕ ಸಂಯೋಜಿತವಾಗಿ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದನ್ನು ಇ-ಸಿವಿಟಿ ಯೊಂದಿಗೆ ಮಾತ್ರ ಜೋಡಿಸಲಾಗಿದೆ. ಈ ಪವರ್‌ಟ್ರೇನ್‌ಗಾಗಿ 27.97 ಕಿ.ಮೀ ಮೈಲೇಜ್ ಅನ್ನು ಒದಗಿಸುತ್ತದೆ. ಈ ಗ್ರ್ಯಾಂಡ್ ವಿಟಾರಾ 5-ಸೀಟರ್ ಎಸ್‍ಯುವಿಯು 45-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ.

Article Published On: Tuesday, March 14, 2023, 8:30 [IST]
English summary
Maruti suzuki grand vitara in high demand waiting period details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+