Just In
- 59 min ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 1 hr ago
ಎಲೆಕ್ಟ್ರಿಕ್ ಬಳಿಕ ಸಿಎನ್‌ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 1 hr ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 2 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Movies
ಕಿಚ್ಚ ಒಪ್ಪಿಲ್ಲ.. ಓಂ ಪ್ರಕಾಶ್ ರಾವ್ ಕೇಳಿಲ್ಲ? 'ಬಾಜಿಗರ್' ರಿಮೇಕ್ ಮಿಸ್ ಆಗಿದ್ದೆಲ್ಲಿ?
- News
ರಾಯಚೂರು: ಶಿವರಾಜ್ ಪಾಟೀಲ್ ಪ್ರಾಬಲ್ಯ ಕೊನೆಗೊಳಿಸಲು ವಿಪಕ್ಷಗಳ ತಂತ್ರ
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಹರಾಜಿನಲ್ಲಿರುವ ಈ ಹಳೆಯ ಐಫೋನ್ ಬೆಲೆ ಅರ್ಧಕೋಟಿ ದಾಟಿದ್ರೂ ಅಚ್ಚರಿಯಿಲ್ಲ!
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೆಚ್ಚು ಮೈಲೇಜ್, ಆಕರ್ಷಕ ಬೆಲೆಯ ಮಾರುತಿ ಗ್ರ್ಯಾಂಡ್ ವಿಟಾರಾ S-CNG ಎಸ್‍ಯುವಿ ಬಿಡುಗಡೆ
ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತದಲ್ಲಿ ಬ್ಯಾಕ್-ಟು-ಬ್ಯಾಕ್ ಕಾರು ಬಿಡುಗಡೆಗಳೊಂದಿಗೆ ತನ್ನ ಉತ್ಪನ್ನ ಪೋರ್ಟ್ಫೋಲಿಯೊವನ್ನು ವೇಗವಾಗಿ ವಿಸ್ತರಿಸುತ್ತಿದೆ. ಇದರಂರೆ ಮಾರುತಿ ಸುಜುಕಿ ತನ್ನ ಬಹುನಿರೀಕ್ಷಿತ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ S-CNG ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಈ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ S-CNG ಎಸ್‍ಯುವಿಯು ಡೆಲ್ಟಾ ಎಂಟಿ ಮತ್ತು ಝೀಟಾ ಎಂಟಿ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.ಮಾರುತಿ ಗ್ರ್ಯಾಂಡ್ ವಿಟಾರಾ S-CNG ಎಸ್‍ಯುವಿಯ ಡೆಲ್ಟಾ ಎಂಟಿ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.12.85 ಲಕ್ಷವಾದರೆ, ಝೀಟಾ ಎಂಟಿ ರೂಪಾಂತರದ ಬೆಲೆಯು ರೂ.14.84 ಲಕ್ಷವಾಗಿದೆ. ಇನ್ನು ಟೊಯೊಟಾ ಕಂಪನಿ ಕೂಡ ಹೈರೈಡರ್‌ನ ಸಿಎನ್‌ಜಿ ಆವೃತ್ತಿಯನ್ನು ಸಹ ಪರಿಚಯಿಸುತ್ತದೆ ಇದರ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದೆ.
ಮಾರುತಿ ಗ್ರ್ಯಾಂಡ್ ವಿಟಾರಾ S-CNG ಆವೃತ್ತಿಯು 1.5-ಲೀಟರ್, ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್‌ನೊಂದಿಗೆ ಫ್ಯಾಕ್ಟರಿ ಫಿಟಡ್ ಸಿಎನ್‌ಜಿ ಕಿಟ್ ಅನ್ನು ಹೊಂದಿದೆ. CNG ಮೋಡ್‌ನಲ್ಲಿ, ಎಂಜಿನ್ ಗ್ರ್ಯಾಂಡ್ ವಿಟಾರಾ ಎಸ್-ಸಿಎನ್‌ಜಿ K15C ಎಂಜಿನ್ 500rpm ನಲ್ಲಿ 86.63 ಬಿಹೆಚ್‍ಪಿ ಪವರ್ ಮತ್ತು 121.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್-ಸಿಎನ್‌ಜಿ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದ.
ಇದು ಮುಂಭಾಗದ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ S-CNG ಎಸ್‍ಯುವಿಯು 26.6km/kg (ARAI) ಮೈಲೇಜ್ ಅನ್ನು ನೀಡುತ್ತದೆ. ಅದರ ಪೆಟ್ರೋಲ್-ಚಾಲಿತ ಒಡಹುಟ್ಟಿದವರಂತೆ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ S-CNG ಎಸ್‍ಯುವಿಯಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಬೆಂಬಲದೊಂದಿಗೆ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ + ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವಾರು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಬಂದಿದೆ.
ಇದರೊಂದಿಗೆ 40+ ಕನೆಕ್ಟಿವಿಟಿ ಸುಜುಕಿ ಕನೆಕ್ಟ್ ಸೂಟ್. ಸ್ಮಾರ್ಟ್ ವಾಚ್ ಸಂಪರ್ಕ, ಅಮೆಜಾನ್ ಅಲೆಕ್ಸಾಗಾಗಿ ಸುಜುಕಿ ಕನೆಕ್ಟ್ ಕೌಶಲ್ಯದೊಂದಿಗೆ ರಿಮೋಟ್ ವಾಯ್ಸ್ ಅಕ್ಸೆಸ್, ವಾಹನ ಟ್ರ್ಯಾಕಿಂಗ್, ರಿಮೋಟ್ ಎಸಿ ಆನ್/ಆಫ್, ಜಿಯೋಫೆನ್ಸಿಂಗ್ ಮತ್ತು ಇತರ ಪೀಚರ್ಸ್ ಗಳನ್ನು ಹೊಂದಿವೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್-ಸಿಎನ್‌ಜಿ ಕೂಡ ಸುರಕ್ಷತಾ ತಂತ್ರಜ್ಞಾನದಿಂದ ಕೂಡಿದೆ. ಮಾರುತಿಯ ಫ್ಲ್ಯಾಗ್‌ಶಿಪ್ ಗ್ರ್ಯಾಂಡ್ ವಿಟಾರಾ CNG ಎಸ್‍ಯುವಿಯ ಟಾಪ್ ಸ್ಪೆಕ್ ಝೀಟಾ ಸ್ಪೆಕ್ ಆವೃತ್ತಿಯು 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ.
ಇನ್ನು ಹಿಂಭಾಗದಲ್ಲಿ ಪಾರ್ಕಿಂಗ್ ಮಾಡಲು ರಿವರ್ಸಿಂಗ್ ಕ್ಯಾಮೆರಾ ಮತ್ತು ಸೆನ್ಸರ್‌ಗಳು, EBD, ESP, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ISOFIX ಚೈಲ್ಡ್ ಸೀಟ್ ಆಂಕರ್ ಪಾಯಿಂಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಇನ್ನು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಮಾತನಾಡಿ, 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದಾಗಿನಿಂದ ಗ್ರಾಂಡ್ ವಿಟಾರಾ ಭಾರತೀಯ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.
CNG ಆಯ್ಕೆಯ ಪರಿಚಯವು ಗ್ರ್ಯಾಂಡ್ ವಿಟಾರಾದ ಆಕರ್ಷಣೆಯನ್ನು ಇನ್ನಷ್ಟು ವಿಸ್ತರಿಸುತ್ತದೆ.ನಮ್ಮ ಹಸಿರು-ಪವರ್‌ಟ್ರೇನ್ ಕೊಡುಗೆಗಳನ್ನು ವಿಸ್ತರಿಸಲು ನಮ್ಮ ಅಗ್ರೇಸಿವ್ ಯೋಜನೆಗೆ ಗ್ರಾಂಡ್ ವಿಟಾರಾ S-CNG ಕೊಡುಗೆ ನೀಡುತ್ತದೆ, ಈ ವಿಭಾಗದಲ್ಲಿ 14 ಮಾದರಿಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ,
ಗ್ರ್ಯಾಂಡ್ ವಿಟಾರಾ ಮಾರುತಿ ಸುಜುಕಿ ಶ್ರೇಣಿಯ ಇತ್ತೀಚಿನ ವಾಹನವಾಗಿದ್ದು, S-CNG ಫ್ಯಾಕ್ಟರಿ-ಅಳವಡಿಕೆಯ CNG ಪಡೆದುಕೊಂಡೆ. ಅಲ್ಲದೇ ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಈ ಎಸ್‍ಯುವಿಯು ಆಕರ್ಷಕ ಬೆಲೆಯಲ್ಲಿ ನೀಡಲಾಗಿದೆ. ಈ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಸುಜುಕಿ ತನ್ನ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದೆ ಮತ್ತು ವಿನ್ಯಾಸಗೊಳಿಸಿದೆ. ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತಿದೆ.