Maruti Suzuki: ಸ್ಕಾರ್ಪಿಯೋ ಹಿಂದಿಕ್ಕಿದ ಮಾರುತಿ ಸುಜುಕಿಯ ಈ ಕಾರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ ಖ್ಯಾತಿಗಳಿಸಿದೆ. ಕೈಗೆಟುಕುವ ಬೆಲೆಯಲ್ಲಿ ಅದರ ಕಾರುಗಳು ಖರೀದಿಗೆ ದೊರೆಯುವುದರಿಂದ ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ, ಕಂಪನಿಯ ಮಿಡ್ ಸೈಜ್ ಎಸ್‌ಯುವಿ ಗ್ರ್ಯಾಂಡ್ ವಿಟಾರಾಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಬಂದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮಾರುತಿ ಸುಜುಕಿ, ದೇಶೀಯ ಮಾರುಕಟ್ಟೆಯಲ್ಲಿ 2022ರಲ್ಲಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಅದೇ ವರ್ಷದ ಜುಲೈ ತಿಂಗಳಲ್ಲಿ ಬುಕಿಂಗ್ ಕೂಡ ಆರಂಭಿಸಿತು. ಫೆಬ್ರವರಿ 2023ರ ಮಾಹಿತಿ ಅನ್ವಯ ಈ ಕಾರಿಗಾಗಿ ಬರೊಬ್ಬರಿ 1.20 ಲಕ್ಷ ಗ್ರಾಹಕರು ಆರ್ಡರ್ ಮಾಡಿದ್ದಾರೆ. ಕಳೆದ ಜನವರಿವರೆಗೆ ಕಂಪನಿಯು 32,000 ಯುನಿಟ್ ಮಾರಾಟ ಮಾಡಿತ್ತು. ಅದರಲ್ಲೂ ಮಾರ್ಚ್ (2023) ತಿಂಗಳಲ್ಲಿಯೇ 10,045 ಯುನಿಟ್ ಸೇಲ್ ಮಾಡಿದೆ.

Maruti Grand Vitara: ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಈ ಮೂಲಕ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ತನ್ನ ಮಾರಾಟದಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಹಾಗೂ ಕಿಯಾ ಸೆಲ್ಟೋಸ್ ಅನ್ನು ಹಿಂದಿಕ್ಕಿದೆ. ಹ್ಯುಂಡೈ ಕ್ರೆಟಾ ನಂತರ, ಭಾರತದಲ್ಲಿ ಮತ್ತೆ ಅತಿಹೆಚ್ಚು ಮಾರಾಟವಾಗುವ ಎರಡನೇ ಮಿಡ್ ಸೈಜ್ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಟೊಯೊಟಾ ಇನೋವಾ, ಮಹೀಂದ್ರಾ ಸ್ಕಾರ್ಪಿಯೋದಂತೆ ಗರಿಷ್ಠ ಕಾಯುವಿಕೆಯನ್ನು ಹೊಂದಿದೆ. ಇವತ್ತು ಬುಕ್ ಮಾಡಿದರೂ ವಿತರಣೆ ಪಡೆಯಲು ಕನಿಷ್ಠ ಆರು ತಿಂಗಳು ಗ್ರಾಹಕರು ಕಾಯಬೇಕು.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ರೂ.10.70 ಲಕ್ಷದಿಂದ ರೂ.19.95 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 5 ಆಸನಗಳ ಆಯ್ಕೆಯೊಂದಿರುವ ಈ ಕಾರು, ಡೆಲ್ಟಾ, ಝೀಟಾ, ಝೀಟಾ ಪ್ಲಸ್, ಆಲ್ಫಾ ಎಂಬ ಐದು ರೂಪಾಂತರಗಳು, ಆರು ಮೊನೊಟೋನ್ಸ್ ಹಾಗೂ ಮೂರು ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ.

ಗ್ರ್ಯಾಂಡ್ ವಿಟಾರಾ ಪೆಟ್ರೋಲ್, CNG ಎಂಜಿನ್ ಆಯ್ಕೆ ಹೊಂದಿದೆ. ಪ್ರಮುಖವಾಗಿ 1.5 ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಎಂಜಿನ್ 103 PS ಪವರ್, 1.5 ಲೀಟರ್ ಪಟ್ರೋಲ್ ಸ್ಟ್ರಾಂಗ್ ಹೈಬ್ರಿಡ್ 116 PS ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. CNG ಚಾಲಿತ ಎಂಜಿನ್ 87.83 PS ಪವರ್ ಹಾಗೂ 121.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಅಥವಾ e-CVT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

2WD (ಟೂ ವೀಲ್ ಡ್ರೈವ್) AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿರುವ ಗ್ರ್ಯಾಂಡ್ ವಿಟಾರಾ 19.38 - 27.97 kmpl ಮೈಲೇಜ್ ನೀಡಲಿದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಕರ್ಷಕ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತು ಹೆಡ್ಸ್ ಅಪ್ ಡಿಸ್ಪ್ಲೇಯನ್ನು ಹೊಂದಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಯಾವೆಲ್ಲ ಸುರಕ್ಷಿತ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುವುದನ್ನು ನೋಡುವುದಾದರೆ, 6 ಏರ್‌ಬ್ಯಾಗ್ಸ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 ಡಿಗ್ರಿ ಕ್ಯಾಮೆರಾ, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ISOFIX ಚೈಲ್ಡ್-ಸೀಟ್ ಆಂಕರ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಪೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್ ಟೊಯೊಟಾ ಹೈರೈಡರ್, ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ. ಸದ್ಯ, ಇದರ ಕಾಯುವಿಕೆ ಅವಧಿಯನ್ನು ನೋಡಿದಾಗ ಬೇಡಿಕೆ ಎಷ್ಟಿದೆ ಎಂಬುದು ಸುಲಭವಾಗಿ ತಿಳಿಯುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಭಾರತದ ಗ್ರಾಹಕರನ್ನು ಆಕರ್ಷಿಸಬಹುದು.

Article Published On: Tuesday, April 25, 2023, 10:46 [IST]
English summary
Maruti suzuki grand vitara waiting period 6 months details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+