Maruti Suzuki: ಬಂಪರ್ ರಿಯಾಯತಿ ಘೋಷಣೆ... ಈ ಅವಕಾಶ ಮತ್ತೆ ಸಿಗಲ್ಲ
ಮಾರುತಿ ಸುಜುಕಿ ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಅದರ ಕಾರುಗಳ ಕೈಗೆಟುಕುವ ಬೆಲೆ, ಆಕರ್ಷಕ ವೈಶಿಷ್ಟ್ಯ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತವೆ. ಇದೀಗ, ಕಂಪನಿ ತನ್ನ ಮಾರಾಟ ಪ್ರಮಾಣವನ್ನು ದ್ವಿಗುಣಗೊಳಿಸಲು ಜನಪ್ರಿಯ ಮಾದರಿಗಳ ಮೇಲೆ ಬಂಪರ್ ರಿಯಾಯಿತಿ ಘೋಷಿಸಿದೆ.
ಒಟ್ಟು ರೂ.47,000ವರೆಗೆ ಡಿಸ್ಕೌಂಟ್ ಆಫರ್ ಲಭ್ಯವಿದ್ದು, ಈ ಮೇ ತಿಂಗಳಲ್ಲಿ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಮಾತ್ರ ಸೀಮಿತವಾಗಿದೆ. ಅದರಲ್ಲೂ ನೆಕ್ಸಾ ಲೈನ್-ಅಪ್ ಮಾದರಿಗಳಾದ ಬಲೆನೊ, ಇಗ್ನಿಸ್, ಸಿಯಾಜ್ ಕಾರುಗಳಿಗೆ ಮಾತ್ರ ರಿಯಾಯತಿ ಪ್ರಯೋಜನ ಲಭ್ಯವಾಗುತ್ತಿದ್ದು, ಗ್ರ್ಯಾಂಡ್ ವಿಟಾರಾ ಹಾಗೂ XL6 ಕಾರುಗಳಿಗೆ ಯಾವುದೇ ಡಿಸ್ಕೌಂಟ್ ಸಿಗುತ್ತಿಲ್ಲ ಎಂಬುದು ಗಮನಿಸ ಬೇಕಾದ ಅಂಶವಾಗಿದೆ.

ಮೊದಲಿಗೆ ಮಾರುತಿ ಸುಜುಕಿಯ ನೆಕ್ಸಾ ಲೈನ್-ಅಪ್ ನ ಎಂಟ್ರಿ ಲೆವೆಲ್ ಕಾರಾಗಿರುವ ಇಗ್ನಿಸ್ ಬಗ್ಗೆ ಮಾತನಾಡೋಣ. ಇದರ ಮ್ಯಾನುವಲ್ ರೂಪಾಂತರ ಒಟ್ಟು ರೂ.47,000 ರಿಯಾಯತಿ ಪ್ರಯೋಜನವನ್ನು ಹೊಂದಿದೆ. ಅದರಲ್ಲಿ 25,000 ನಗದು ರಿಯಾಯಿತಿ, ರೂ.15,000 ಎಕ್ಸ್ಚೇಂಜ್ ಆಫರ್, ರೂ.7,000 ಕಾರ್ಪೊರೇಟ್ ಡಿಸ್ಕೌಂಟ್ ಇದೆ. ಜೊತೆಗೆ ಆಟೋಮೆಟಿಕ್ ರೂಪಾಂತರ ರೂ.42,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ.
ಮಾರುತಿ ಸುಜುಕಿ ಇಗ್ನಿಸ್ ರೂ.5.84 ಲಕ್ಷದಿಂದ 8.16 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 20.89 kmpl ಮೈಲೇಜ್ ನೀಡಲಿದೆ. ಸುರಕ್ಷತೆಯ ದೃಷ್ಟಿಯಿಂದ ಎರಡು ಏರ್ ಬ್ಯಾಗ್ ಇದೆ.

ನೆಕ್ಸಾ ಲೈನ್-ಅಪ್ ನ ಹಳೆಯ ಮಾದರಿಯಾಗಿರುವ ಮಾರುತಿ ಸುಜುಕಿ ಸಿಯಾಜ್ ನ ಮ್ಯಾನುವಲ್ ಹಾಗೂ ಆಟೋಮೆಟಿಕ್ ಆವೃತ್ತಿಗಳು ಒಟ್ಟು ರೂ.35,000 ಡಿಸ್ಕೌಂಟ್ ಆಫರ್ ಪಡೆದಿವೆ. ಇದರಲ್ಲಿ ಗ್ರಾಹಕರಿಗೆ ಯಾವುದೇ ನಗದು ರಿಯಾಯಿತಿ ಸಿಗುತ್ತಿಲ್ಲ. ಆದರೆ, ರೂ.25,000 ಎಕ್ಸ್ಚೇಂಜ್ ಆಫರ್, ರೂ.10,000 ಕಾರ್ಪೊರೇಟ್ ರಿಯಾಯಿತಿ ಹೊಂದಿದೆ. ರೂ.9.30 - 12.29 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.
ಈ ಕಾರು, 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 105 PS ಗರಿಷ್ಠ ಪವರ್ ಹಾಗೂ 138 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಮ್ಯಾನುವಲ್/ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ. 20.04 - 20.65 kmpl ಮೈಲೇಜ್ ನೀಡಲಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿ ತನ್ನ ಬಹುಬೇಡಿಕೆಯ ಬಲೆನೊ ಕಾರಿನ ಮೇಲೆ ರೂ.20,000 ಡಿಸ್ಕೌಂಟ್ ಆಫರ್ ಘೋಷಿಸಿದೆ. ಅದರಲ್ಲಿಯೂ ಡೆಲ್ಟಾ ಹಾಗೂ ಝೀಟಾ ರೂಪಾಂತರಗಳು ರೂ.10,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಆಫರ್ ಹೊಂದಿವೆ. ಉಳಿದೆಲ್ಲ ರೂಪಾಂತರಗಳು ಕೇವಲ ವಿನಿಮಯ ರಿಯಾಯತಿಯನ್ನು ಪಡೆದಿವೆ. ಈ ಕಾರು, 6.61 ಲಕ್ಷದಿಂದ ರೂ.9.88 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಒಟ್ಟಾರೆ, ಮಾರುತಿ ಸುಜುಕಿ ನೆಕ್ಸಾ ಲೈನ್-ಅಪ್ ನ ಒಂದಷ್ಟು ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ್ದು, ಈ ಮೂಲಕ ತನ್ನ ಮಾರಾಟ ಪ್ರಮಾಣವನ್ನು ದ್ವಿಗುಣಗೊಳಿಸಲು ಪ್ರಯತ್ನಿಸುತ್ತಿದೆ. ಈ ರಿಯಾಯಿತಿ ಸೌಲಭ್ಯಗಳು ಈ ತಿಂಗಳು ಮಾತ್ರ ಸಿಗಲಿದ್ದು, ಗ್ರಾಹಕರು ಡಿಸ್ಕೌಂಟ್ ಸಂಬಂಧ ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್ ಶಿಪ್ ಗೆ ಭೇಟಿ ನೀಡಿ, ಪರಿಶೀಲಿಸಬಹುದು.


Click it and Unblock the Notifications