ದೇಶವೇ ಕಾಯುತ್ತಿರುವ ಇನೋವಾ ಆಧರಿತ ಮಾರುತಿ ಕಾರು ನಾಳೆ ಬಿಡುಗಡೆ: ಸೂಪರ್ ಮೈಲೇಜ್
ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ಪಾರುಪತ್ಯ ಸಾಧಿಸುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರು ಕಂಪನಿಗಳ ಪ್ರವೇಶದಿದ ಸ್ಪರ್ಧೆ ಹೆಚ್ಚಾಗಿದೆ. ಇದರಿಂದ ಮಾರುತಿ ತನ್ನ ಪಾರುಪತ್ಯಯವನ್ನು ಮುಂದುವರೆಸಲು ಹೊಸ ಕಾರುಗಳನ್ನು ಪರಿಚಯಿಸಿ ತನ್ನ ಪಾರುಪತ್ಯ ಮುಂದುವರೆಸಲಿದೆ.
ಮಾರುತಿ ಸುಜುಕಿ ಕಂಪನಿಯು ಹೊಸ ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಎಂಪಿವಿಯನ್ನು ನಾಳೆ ಬಿಡುಗಡೆಗೊಳಿಸಲಿದೆ. ಇದೀಗ ಮಾರುತಿ ಸುಜುಕಿ ಇನ್ವಿಕ್ಟೊ ಪ್ರೀಮಿಯಂ ಎಂಪಿವಿ ದೊಡ್ಡ ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿರುತ್ತದೆ. ಮುಂಬರುವ ಇನ್ವಿಕ್ಟೋ ಎಂಪಿವಿಯು ಜುಲೈ 5 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಕಾರಿನ ಮುಂಭಾಗದ ಗ್ರಿಲ್ ಅನ್ನು ಭಾಗಶಃ ಬಹಿರಂಗಪಡಿಸುತ್ತದೆ.

ಈ ಎಂಪಿವಿಯ ಹಿಂಭಾಗದಲ್ಲಿ 'ಇನ್ವಿಕ್ಟೋ' ಬ್ಯಾಡ್ಜಿಂಗ್ ಜೊತೆಗೆ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಹೊಂದಿದೆ. ಹೊಸ ಮಾರುತಿ ಸುಜುಕಿ ಎಂಪಿವಿಯು ಇನೋವಾ ಹೈಕ್ರಾಸ್ ಅನ್ನು ಆಧರಿಸಿದೆ. ಈ ಹೊಸ ಮಾರುತಿ ಎಂಪಿವಿಯನ್ನು ಕರ್ನಾಟಕದ ಬಿಡದಿ ಸ್ಥಾವರದಲ್ಲಿ ತಯಾರಿಸಲ್ಪಡುತ್ತದೆ. ಮಾರುತಿ ಇನ್ವಿಕ್ಟೊ ಎಂಪಿವಿಯು ಪ್ಲಾಟ್‌ಫಾರ್ಮ್, ಆಯಾಮಗಳು, ವೈಶಿಷ್ಟ್ಯಗಳು ಮತ್ತು ಪವರ್‌ಟ್ರೇನ್‌ಗಳು ಟೊಯೊಟಾ ಇನೋವಾ ಹೈಕ್ರಾಸ್‌ಗೆ ನಿಖರವಾಗಿ ಹೋಲುತ್ತವೆ.
ಟೊಯೊಟಾ ಇನೋವಾ ಹೈಕ್ರಾಸ್ ನಿಂದ ಪ್ರತ್ಯೇಕಿಸಲು ಮಾರುತಿಯ ಇನ್ವಿಕ್ಟೋ ಎಂಪಿವಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಈ ಕಾರಿನ ಮುಂಭಾಗದಲ್ಲಿ ಹೆಚ್ಚಾಗಿ ಬದಲಾವಣೆಗಳನ್ನು ಮಾಡಲಾಗುವುದು. ಹೊಸ ಮಾರುತಿ ಇನ್ವಿಕ್ಟೊ ಗ್ರ್ಯಾಂಡ್ ವಿಟಾರಾವನ್ನು ಹೋಲುವ ಮುಂಭಾಗದ ಗ್ರಿಲ್ ಅನ್ನು ಅದರ ಮಧ್ಯದಲ್ಲಿ ಸುಜುಕಿಯ ಬ್ಯಾಡ್ಜ್ ಅನ್ನು ಹೊಂದಿದೆ. ಕಾರಿನ ಬಂಪರ್ ಸಹ ಟೊಯೊಟಾದಿಂದ ವಿಭಿನ್ನವಾಗಿ ಕಾಣುತ್ತದೆ. ಇನ್ನು ಅಲಾಯ್ ವ್ಹೀಲ್ ಗಳು ಮತ್ತು ಟೈಲ್‌ಗೇಟ್‌ಗಳು ಸುಜುಕಿಯ ಲೋಗೋವನ್ನು ಹೊಂದಿರುತ್ತದೆ.

ಇನ್ವಿಕ್ಟೊವನ್ನು ಟೊಯೊಟಾದ TNGA-C ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗುವುದು ಮತ್ತು ಮೊನೊಕಾಕ್ ಚಾಸಿಸ್ ಅನ್ನು ಹೊಂದಿರುತ್ತದೆ. ಇನೋವಾ ಹೈಕ್ರಾಸ್‌ನಿಂದ ಆಂತರಿಕ ವಿನ್ಯಾಸವನ್ನು ಸಹ ಕೈಗೊಳ್ಳಲಾಗುತ್ತದೆ. ಇನ್ವಿಕ್ಟೊ ಎಂಪಿವಿ 7 ಮತ್ತು 8-ಆಸನಗಳ ಕಾನ್ಫಿಗರೇಶನ್‌ಗಳೊಂದಿಗೆ ಮಧ್ಯದ ಸಾಲಿಗೆ ಎರಡು ಕ್ಯಾಪ್ಟನ್ ಸೀಟುಗಳನ್ನು ಮತ್ತು ಕ್ರಮವಾಗಿ ಎರಡನೇ ಮತ್ತು ಮೂರನೇ ಸಾಲುಗಳಿಗೆ ಬೆಂಚ್ ಸೀಟ್‌ಗಳನ್ನು ಹೊಂದಿರುತದೆ.
ಈ ಹೊಸ ಮಾರುತಿ ಸುಜುಕಿ ಇನ್ವಿಕ್ಟೋ ಕಾರಿನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಹೊಂದಿರುತ್ತದೆ.
ಈ ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿಯಲ್ಲಿ 2.0 ಲೀಟರ್, 4-ಸಿಲಿಂಡರ್ ಅಟ್ಕಿನ್ಸನ್ ಸೈಕಲ್ ಸ್ಟ್ರಾಂಗ್ ಹೈಬ್ರಿಡ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಮಾರುತಿ ಎಂಪಿವಿಯ ಮೈಲೇಜ್ ಅಂಕಿಅಂಶಗಳು ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನು ಹೋಲುವ ಸಾಧ್ಯತೆಯಿದೆ. ಎರಡನೆಯದು ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ 23.24 ಕಿ.ಮೀ ಮತ್ತು ಪೆಟ್ರೋಲ್ ಯುನಿಟ್ 16.13 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications