ದೇಶವೇ ಕಾಯುತ್ತಿದ್ದ Maruti Suzuki Invicto ಕಾರು ಬಿಡುಗಡೆ: ಸೂಪರ್ ಮೈಲೇಜ್

ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಎಂಪಿವಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಮಾರುತಿ ಸುಜುಕಿ ಇನ್ವಿಕ್ಟೋ ಕಾರಿನ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.24.79 ಲಕ್ಷವಾಗಿದೆ.

ಮಾರುತಿ ಸುಜುಕಿ ಇನ್ವಿಕ್ಟೋ ಕಾರು ಮೂರು ರೂಪಾಂತರಗಳ ಹಂತಗಳಲ್ಲಿ ನೀಡಲಾಗುತ್ತದೆ. ಈ ಕಾರಿನ ಮೂಲ ರೂಪಾಂತರ ಝೀಟಾ+ (7-ಸೀಟರ್) ಬೆಲೆಯು ರೂ.24.79 ಲಕ್ಷವಾದರೆ, ಝೀಟಾ + (8-ಸೀಟರ್) ರೂಪಾಂತರದ ಬೆಲೆಯು ರೂ.24.84 ಲಕ್ಷವಾಗಿದೆ. ಇನ್ನು ಮಾರುತಿ ಸುಜುಕಿ ಇನ್ವಿಕ್ಟೋ ಟಾಪ್-ಸ್ಪೆಕ್ ಬೆಲೆಯು ರೂ.28.42 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

Maruti Suzuki Invicto

ಟೊಯೊಟಾ ಇನೋವಾ ಹೈಕ್ರಾಸ್ ಆಧಾರಿತ ಮಾರುತಿ ಸುಜುಕಿ ಇನ್ವಿಕ್ಟೋ ವನ್ನು ಟೊಯೊಟಾದ ಬಿಡದಿ ಸ್ಥಾವರದಲ್ಲಿ ತಯಾರಿಸಲಾಗುತ್ತದೆ. ಇನ್ವಿಕ್ಟೋ ಮಾರುತಿ ಸುಜುಕಿಯ ನೆಕ್ಸಾ ಡೀಲರ್‌ಶಿಪ್‌ನಲ್ಲಿ ಎಂಟನೇ ಕಾರು ಮಾದರಿಯಾಗಿದೆ. ಮಾರುತಿ ಸುಜುಕಿ ಇನ್ವಿಕ್ಟೋ ಕಾರು ನೆಕ್ಸಾ ಬ್ಲೂ, ಮಿಸ್ಟಿಕ್ ವೈಟ್, ಮೆಜೆಸ್ಟಿಕ್ ಸಿಲ್ವರ್ ಮತ್ತು ಸ್ಟಿಲರ್ ಬ್ರೌನ್ಸ್ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಇನ್ವಿಕ್ಟೋ ಭಾರತದಲ್ಲಿ ಟೊಯೊಟಾ ಮತ್ತು ಮಾರುತಿ ಸುಜುಕಿ ನಡುವೆ ಪ್ರಸ್ತುತ ಇರುವ ಬ್ಯಾಡ್ಜ್-ಸ್ವಾಪಿಂಗ್ ಒಪ್ಪಂದದ ಇತ್ತೀಚಿನ ಪುನರಾವರ್ತನೆಯಾಗಿದೆ. ಆದ್ದರಿಂದ, ಮೂಲಭೂತವಾಗಿ, ಮಾರುತಿ ಸುಜುಕಿಯ ಹೊಸ ಇನ್ವಿಕ್ಟೊ ರಿಬ್ಯಾಡ್ಜ್ ಮಾಡಲಾದ ಟೊಯೊಟಾ ಇನೋವಾ ಹೈಕ್ರಾಸ್ ಆಗಿದೆ. ಇನೋವಾ ಹೈಕ್ರಾಸ್‌ಗಿಂತ ಭಿನ್ನವಾಗಿ, ಹೊಸ ಮಾರುತಿ ಸುಜುಕಿ ಇನ್‌ವಿಕ್ಟೊವನ್ನು ಕೇವಲ ಒಂದು ಪವರ್‌ಟ್ರೇನ್ ಆಯ್ಕೆಯೊಂದಿಗೆ, ಸ್ಟ್ರಾಂಗ್ ಹೈಬ್ರಿಡ್‌ನೊಂದಿಗೆ ನೀಡಲಾಗಿದೆ.

Maruti Suzuki Invicto

ಮಾರುತಿ ಸುಜುಕಿಯ ಹೈಬ್ರಿಡ್ ಸೆಟಪ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಉತ್ಪಾದಿಸುತ್ತದೆ ಮತ್ತು e-CVT ಗೇರ್‌ಬಾಕ್ಸ್‌ಗೆ ಜೋಡಿಸಲಾದ NIMH ಬ್ಯಾಟರಿ ಪ್ಯಾಕ್‌ನೊಂದಿಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿದೆ. ಸಂಯೋಜಿತ ಹೈಬ್ರಿಡ್ ಸಿಸ್ಟಂ 184 bhp ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಕಾರು 9.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದು 23.24 ಕಿ.ಮೀ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಇನ್ವಿಕ್ಟೋ ಸಂಸ್ಥೆಯ ನೆಕ್ಸಾ ಸರಣಿಯ ವಿಶಿಷ್ಟ ನೋಟವನ್ನು ಹೊಂದಿದೆ ಎಂದು ಖಚಿತಪಡಿಸಿದೆ. ಇನೋವಾಗೆ ಹೋಲಿಸಿದರೆ ಇನ್ವಿಕ್ಟೋ ಕಾರಿನಲ್ಲಿ ಹೊಚ್ಚಹೊಸ ಗ್ರಿಲ್ ಅನ್ನು ಹೊಂದಿದೆ, ಇದು ಸುಜುಕಿ ಬ್ಯಾಡ್ಜ್‌ಗೆ LED ಹೆಡ್‌ಲೈಟ್‌ಗಳನ್ನು ಸಂಪರ್ಕಿಸುವ ಕ್ರೋಮ್ ಸ್ಲ್ಯಾಟ್‌ಗಳನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಂತೆ ಹೆಡ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್‌ಗಳನ್ನು ಸಹ ಮರು ನವೀಕರಿಸಲಾಗಿದೆ.

Maruti Suzuki Invicto

ಹೊಸ ಇನ್ವಿಕ್ಟೋ 18-ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ 22/50 R18 ಟೈರ್‌ಗಳನ್ನು ಹೊಂದಿವೆ. ಹೊಸ ಮಾರುತಿ ಎಂಪಿವಿಯು ತನ್ನ ಬ್ಯಾಡ್ಜ್-ಸ್ವಾಪ್ಡ್ ಟೊಯೊಟಾ ಮಾದರಿಗೆ ಹೋಲಿಸಿದರೆ ಟ್ವೀಕ್ ಮಾಡಿದ ಟೈಲ್‌ಲೈಟ್‌ಗಳನ್ನು ಸಹ ಹೊಂದಿದೆ. ಮಾರುತಿ ಸುಜುಕಿ ಇನ್ವಿಕ್ಟೊದ ಒಳಭಾಗಲ್ಲಿ ಹಲವಾರು ಐಷಾರಾಮಿ ಅಂಶಗಳನ್ನು ಹೊಂದಿದ್ದು, ಪ್ಲಶ್ ಅಪ್ಹೋಲ್ಸ್ಟರಿಯನ್ನು ಹೊಂದಿದೆ.

ಇದರೊಂದಿಗೆ ಡ್ಯಾಶ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಬೆಂಬಲದೊಂದಿಗೆ 10.1-ಇಂಚಿನ ಇನ್ಫೋಟೈನ್‌ಮೆಂಟ್ ಯುನಿಟ್ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಡ್ರೈವರ್ ಸೀಟ್ 8-ವೇ ಎಲೆಕ್ಟ್ರಿಕಲ್ ಹೊಂದಾಣಿಕೆಯನ್ನು ಹೊಂದಿದೆ. ಎರಡನೇ ಸಾಲು ಒಟ್ಟೋಮನ್ ಕಾರ್ಯನಿರ್ವಹಣೆಯೊಂದಿಗೆ ಕ್ಯಾಪ್ಟನ್ ಸೀಟ್‌ಗಳನ್ನು ಹೊಂದಿದೆ. ಇನ್ನು ದೊಡ್ಡ ಪನೋರಮಿಕ್ ಸನ್‌ರೂಫ್, ಪ್ರೀಮಿಯಂ ಆಡಿಯೊ ಸಿಸ್ಟಮ್, ಸ್ವ360-ಡಿಗ್ರಿ ಕ್ಯಾಮೆರಾ ಮತ್ತು ಸುಜುಕಿ ಕನೆಕ್ಟ್ ಸೂಟ್‌ನೊಂದಿಗೆ ಗ್ಲೋವ್‌ಬಾಕ್ಸ್‌ನ ಮೇಲಿರುವ ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಫಿಚರ್ಸ್ ಗಳಿವೆ.

Article Published On: Wednesday, July 5, 2023, 13:39 [IST]
English summary
Maruti suzuki invicto launched specs features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+