Maruti Suzuki: ಕನ್ನಡದ ಮಣ್ಣಿನಲ್ಲಿ ತಯಾರಾಗುವ 'ಮಾರುತಿ ಸುಜುಕಿ ಇನ್ವಿಕ್ಟೊ' ಬುಕ್ಕಿಂಗ್‌ ಶುರು, ಪ್ರತಿಸ್ಪರ್ಧಿಗಳಿಗೆ ಭೀತಿ!

ಭಾರತದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಖ್ಯಾತಿಗಳಿಸಿದೆ. ಅದರ ಕಾರುಗಳ ವಿನ್ಯಾಸ, ವೈಶಿಷ್ಟ್ಯ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತದೆ. ಶೀಘ್ರದಲ್ಲೇ ಕಂಪನಿ, ಟೊಯೊಟಾ ಇನ್ನೋವಾ ಹೈಕ್ರಾಸ್‌ ಆಧಾರಿತ ಹೊಚ್ಚ ಹೊಸ 'ಇನ್ವಿಕ್ಟೊ' ಎಂಪಿವಿಯನ್ನು ಅನಾವರಣ ಮಾಡಲಿದೆ. ಇದೀಗ, ಬುಕ್ಕಿಂಗ್‌ ಪ್ರಾರಂಭಿಸಿದೆ.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನೂತನ ಇನ್ವಿಕ್ಟೊ ಎಂಪಿವಿ ಬುಕ್ಕಿಂಗ್‌ ಅನ್ನು ತೆರೆದಿದ್ದು, ಆಸಕ್ತ ಗ್ರಾಹಕರು, ರೂ.25,000 ಪಾವತಿಸುವ ಮೂಲಕ ಕಂಪನಿಯ ಅಧಿಕೃತ ವೆಬ್ಸೈಟ್ ಅಥವಾ ನೆಕ್ಸಾ ಡೀಲರ್ ಶಿಪ್ ಗೆ ಭೇಟಿ ನೀಡಿ, ಆರ್ಡರ್ ಮಾಡಬಹುದು. ಈ ಇನ್ವಿಕ್ಟೊ ಎಂಪಿವಿಯನ್ನು ಜುಲೈ 5ರಂದು ದೇಶೀಯ ಮಾರುಕಟ್ಟೆಯಲ್ಲಿ ಅನಾವರಣ ಮಾಡಲು ಕಂಪನಿ ತೀರ್ಮಾನಿಸಿದೆ.

Maruti Suzuki: ಕನ್ನಡದ ಮಣ್ಣಿನಲ್ಲಿ ತಯಾರಾಗುವ ಇನ್ನೋವಾ ಆಧಾರಿತ ಮಾರುತಿ ಸುಜುಕಿ ಇನ್ವಿಕ್ಟೊ ಬುಕ್ಕಿಂಗ್‌ ಶುರು

ಟೊಯೊಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳು ಭಾರತದಲ್ಲಿ ಸಹಭಾಗಿತ್ವ ಹೊಂದಿವೆ. ಈ ಹಿನ್ನೆಲೆ, ಇನ್ವಿಕ್ಟೊ ಎಂವಿವಿಯನ್ನು ಟೊಯೊಟಾ ಕಂಪನಿ ಬಿಡದಿಯಲ್ಲಿರುವ ತನ್ನ ತಯಾರಿಕ ಘಟಕದಲ್ಲಿ ಉತ್ಪಾದಿಸಿ, ಮಾರುತಿ ಸುಜುಕಿಗೆ ಮಾರಾಟಕ್ಕೆ ನೀಡಲಿದೆ. ಇದು, ಇನ್ನೋವಾ ಹೈಕ್ರಾಸ್‌ ಆಧಾರಿತವಾಗಿರಲಿದೆ. ಆದರೆ, ಅದಕ್ಕಿಂತ ವಿಭಿನ್ನವಾದ ಡಿಸೈನ್ ಹಾಗೂ ಫೀಚರ್ಸ್ ಹೊಂದಿರುವ ಸಾಧ್ಯತೆಯಿದೆ.

ಪ್ರಮುಖವಾಗಿ, ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ನಲ್ಲಿ ಹಲವು ಬದಲಾವಣೆಗಳನ್ನು ಪಡೆದಿರಲಿದೆ. ಬಂಪರ್‌ ಹಾಗೂ ಗ್ರಿಲ್‌ ಕೂಡ ಅತ್ಯಾಕರ್ಷಕವಾಗಿರಲಿದ್ದು, ಒಳಭಾಗವು ಟೊಯೊಟಾ ಇನ್ನೋವಾ ಹೈಕ್ರಾಸ್‌ ಎಂವಿಪಿಗೆ ಹೋಲಿಸಿದರೆ, ಬೇರೆಯಾಗಿಯೇ ಇರಲಿದೆ. ಆದರೆ, ಈ ಬಗ್ಗೆ ಮಾರುತಿ ಸುಜುಕಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಎಲ್ಲವೂ ಇನ್ವಿಕ್ಟೊ ಭಾರತದಲ್ಲಿ ಅನಾವರಣಗೊಂಡ ದಿನವೇ ತಿಳಿಯಲಿದೆ.

ನೂತನ ಮಾರುತಿ ಸುಜುಕಿ ಇನ್ವಿಕ್ಟೊ ಎಂಪಿವಿ 7 ರಿಂದ 8 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, , ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಕನೆಕ್ಟ್ದ್ ಕಾರ್ ಟೆಕ್, ಆಕರ್ಷಕ ಸನ್ ರೂಫ್ ಸೇರಿದಂತೆ ಹೆಚ್ಚಿನ ಯುವ ಖರೀದಿದಾರರನ್ನು ಸೆಳೆಯುವ ಫೀಚರ್ಸ್ ಪಡೆದಿರಬಹುದು.

ಈ ಇನ್ವಿಕ್ಟೊ ಎಂಪಿವಿ 2.0-ಲೀಟರ್ ಪೆಟ್ರೋಲ್ ಹೈಬ್ರಿಡ್ ಹಾಗೂ ನಾನ್ ಹೈಬ್ರಿಡ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯುವ ಸಾಧ್ಯತೆಯಿದೆ. 2.0-ಲೀಟರ್ ನಾನ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 171 bhp ಪವರ್ ಹಾಗೂ 205 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, CVT ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿರುವ ನೀರಿಕ್ಷೆಯಿದೆ.

ಮತ್ತೊಂದು, 2.0-ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ 183 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, eCVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆಯಿದೆ. ಈ ಎಂಪಿವಿ ಬೆಲೆ ಬಗ್ಗೆ ಮಾರುತಿ ಸುಜುಕಿ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ವಿವರ ಸಿಕ್ಕಿಲ್ಲ. ಆದರೂ ರೂ.20 ಲಕ್ಷ ಬೆಲೆಯ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಇನ್ನು, ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, ಐದು ರೂಪಾಂತರಗಳ ಆಯ್ಕೆಯಲ್ಲಿ ರೂ.18.55 ಲಕ್ಷದಿಂದ ರೂ.29.99 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದು, 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 2.0 ಲೀಟರ್, 4 ಸಿಲಿಂಡರ್ ಹೈಬ್ರಿಡ್ ಎಂಜಿನ್ ಪಡೆದಿದ್ದು, 21 kmpl ಮೈಲೇಜ್ ನೀಡುತ್ತದೆ.

Article Published On: Monday, June 19, 2023, 15:53 [IST]
English summary
Maruti suzuki invicto mpv bookings open details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+