Maruti Suzuki Invicto: ಚರಿತ್ರೆ ಸೃಷ್ಟಿಸುತ್ತಿರುವ ಮಾರುತಿ ಇನ್ವಿಕ್ಟೋ ಖರೀದಿಸಬೇಕೇ.. ಉಪಯುಕ್ತ ವಿವರ
ದೇಶೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ (Maruti Suzuki) ಇನ್ವಿಕ್ಟೋ (Invicto) ಎಂಪಿವಿಗೆ ಭರ್ಜರಿ ಬೇಡಿಕೆ ಬಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬುಕ್ಕಿಂಗ್ ಮಾಡುತ್ತಿದ್ದಾರೆ. ನೀವು ಈ ಕಾರನ್ನು ಖರೀದಿಸಬೇಕೇ ಡೌನ್ ಪೇಮೆಂಟ್, ಆನ್-ರೋಡ್ ಬೆಲೆ, ಇಎಂಐ ಆಯ್ಕೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಏಳು ಆಸನಗಳ ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿಯ ಝೀಟಾ ಪ್ಲಸ್ ರೂಪಾಂತರ, ರೂ. 28.77 ಲಕ್ಷ ಆನ್-ರೋಡ್ (ದೆಹಲಿ) ಬೆಲೆಯನ್ನು ಹೊಂದಿದೆ. ಆಸಕ್ತ ಗ್ರಾಹಕರು, ರೂ.6 ಲಕ್ಷ ಡೌನ್ ಪೇಮೆಂಟ್ ಪಾವತಿ ಮಾಡಿ ಖರೀದಿಸಿದರೆ, 5 ವರ್ಷದ ಅವಧಿಗೆ 10% ಬಡ್ಡಿ ದರದಲ್ಲಿ ತಿಂಗಳಿಗೆ ರೂ.48,348 ಇಎಂಐ ಪಾವತಿಸಬೇಕು.

ಎಂಟು ಆಸನಗಳ ಆಯ್ಕೆಯೊಂದಿರುವ ಇನ್ವಿಕ್ಟೋ ಎಂಪಿವಿಯ ಝೀಟಾ ಪ್ಲಸ್ ವೇರಿಯೆಂಟ್, ರೂ.28.82 ಲಕ್ಷ ಆನ್ ರೋಡ್ ದರವನ್ನು ಪಡೆದಿದೆ. ನೀವು ರೂ.6 ಲಕ್ಷ ಡೌನ್ ಪೇಮೆಂಟ್ ಪಾವತಿಸಿ, ಈ ಕಾರನ್ನು ಖರೀದಿಸಿದರೆ, 5 ವರ್ಷದ ಅವಧಿಗೆ 10% ಬ್ಯಾಂಕ್ ಬಡ್ಡಿ ದರದಲ್ಲಿ ಮಾಸಿಕ ರೂ.48,470 ಇಎಂಐ ಕಟ್ಟಬೇಕು.
ಏಳು ಆಸನಗಳ ಮಾರುತಿ ಸುಜುಕಿ ಇನ್ವಿಕ್ಟೋದ ಆಲ್ಫಾ ಪ್ಲಸ್ ರೂಪಾಂತರ ರೂ.32.93 ಲಕ್ಷ ಆನ್ ರೋಡ್ ಬೆಲೆಯನ್ನು ಹೊಂದಿದೆ. ಆಸಕ್ತ ಖರೀದಿದಾರರು, ರೂ.6 ಲಕ್ಷ ಡೌನ್ ಪೇಮೆಂಟ್ ಕಟ್ಟಿ, ಈ ಎಂಪಿವಿಯನ್ನು ಕೊಂಡುಕೊಂಡರೆ, 5 ವರ್ಷದ ಅವಧಿಗೆ 10% ಬಡ್ಡಿ ದರದಲ್ಲಿ ತಿಂಗಳಿಗೆ ರೂ.55,974 ಇಎಂಐ ಪಾವತಿಸಬೇಕು.
ಈ ಮಾರುತಿ ಸುಜುಕಿ ಇನ್ವಿಕ್ಟೋ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಇದು 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 186 PS ಪವರ್, 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. e-CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 23.24 kmpl ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಆರು ಏರ್‌ಬ್ಯಾಗ್ಸ್ ಪಡೆದಿದೆ.
ಭಾರತದಲ್ಲಿ ಟೊಯೊಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳು ಪಾಲುದಾರಿಕೆ ಹೊಂದಿವೆ. ಇದರಿಂದ ಹೊಚ್ಚ ಹೊಸ ಇನ್ವಿಕ್ಟೋ ಎಂಪಿವಿ, ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತವಾಗಿದೆ. ಆದರೆ, ವಿನ್ಯಾಸದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಪಡೆದುಕೊಂಡಿದೆ. ಇನ್ವಿಕ್ಟೋ ಬುಕ್ಕಿಂಗ್ ಶುರುವಾಗಿ ಕೆಲವೇ ದಿನಗಳಲ್ಲಿ 7,000ಕ್ಕೂ ಹೆಚ್ಚಿನ ಗ್ರಾಹಕರು ಆರ್ಡರ್ ಮಾಡಿದ್ದಾರೆ.
ಇದರಿಂದ ಇನ್ವಿಕ್ಟೋ ಎಂಪಿವಿ ಕಾಯುವಿಕೆ ಅವಧಿ ಎರಡು ತಿಂಗಳಿಗೆ ತಲುಪಿದೆ. ಈ ಕಾರಿಗಾಗಿ ಬಹುತೇಕ ಗ್ರಾಹಕರು, ಇನ್ನೋವಾ ಹೈಕ್ರಾಸ್ ಬುಕ್ಕಿಂಗ್ ರದ್ದು ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನು, ಈಗಾಗಲೇ ದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು ಹೊಂದಿರುವ ಈ ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿಗೆ ಮುಂಬರುವ ದಿನಗಳಲ್ಲಿ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications