ಇನೋವಾ ಕಾರನ್ನು ಆಧರಿಸಿ ಅದರಂತೆ ಕ್ರಾಂತಿ ಮಾಡಲು ರೆಡಿಯಾದ ಹೊಸ ಮಾರುತಿ ಕಾರು

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ಪಾರುಪತ್ಯ ಸಾಧಿಸುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರು ಕಂಪನಿಗಳ ಪ್ರವೇಶದಿದ ಸ್ಪರ್ಧೆ ಹೆಚ್ಚಾಗಿದೆ. ಇದರಿಂದ ಮಾರುತಿ ತನ್ನ ಪಾರುಪತ್ಯಯವನ್ನು ಮುಂದುವರೆಸಲು ಹೊಸ ಕಾರುಗಳನ್ನು ಪರಿಚಯಿಸುವುದನ್ನು ನಿರಂತರವಾಗಿ ಮುಂದುವರೆಸಿದ್ದಾರೆ.

ಮಾರುತಿ ಸುಜುಕಿ ಕಂಪನಿಯು ಹೊಸ ಮಾರುತಿ ಸುಜುಕಿಇನ್ವಿಕ್ಟೋ (Maruti Suzuki Invicto) ಎಂಪಿವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಮಾರುತಿ ಸುಜುಕಿ ಮತ್ತೊಮ್ಮೆ ಈ ಇನ್ವಿಕ್ಟೊ ಎಂಪಿವಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಇಂಡೋ-ಜಪಾನೀಸ್ ವಾಹನ ತಯಾರಕರಿಂದ ಮುಂಬರುವ ಈ ಪ್ರೀಮಿಯಂ ಎಂಪಿವಿಯ ದೊಡ್ಡ ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ ಎಂದು ಈ ಹೊಸ ಟೀಸರ್ ಖಚಿತಪಡಿಸುತ್ತದೆ. ಮುಂಬರುವ ಇನ್ವಿಕ್ಟೋ ಎಂಪಿವಿಯು ಜುಲೈ 5 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

Maruti Suzuki Invicto

ಕೆಲವು ದಿನಗಳ ಹಿಂದೆ ಮಾರುತಿ ಸುಜುಕಿ ಕಂಪನಿಯು ತನ್ನ ಈ ಹೊಸ ಇನ್ವಿಕ್ಟೋ ಎಂಪಿವಿಯ 20 ಸೆಕೆಂಡ್‌ಗಳ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿತ್ತು. ಇದು ವೆಂಟಿಲೇಟೆಡ್ ಲೆದರ್ ಸೀಟ್‌ಗಳ ಕ್ಲೋಸ್‌ಅಪ್ ಪಾಸಿಂಗ್ ಶಾಟ್‌ನೊಂದಿಗೆ ಪ್ರಾರಂಭವಾಗುತ್ತದೆ. ಈ ಕಾರಿನ ಮುಂಭಾಗದ ಗ್ರಿಲ್ ಅನ್ನು ಭಾಗಶಃ ಬಹಿರಂಗಪಡಿಸುತ್ತದೆ ಮತ್ತು ಕಾರಿನ ಹಿಂಭಾಗದಲ್ಲಿ 'ಇನ್ವಿಕ್ಟೋ' ಬ್ಯಾಡ್ಜಿಂಗ್ ಜೊತೆಗೆ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಹೊಂದಿದೆ.

ಹೊಸ ಮಾರುತಿ ಸುಜುಕಿ ಎಂಪಿವಿಯು ಇನೋವಾ ಹೈಕ್ರಾಸ್ ಅನ್ನು ಆಧರಿಸಿದೆ. ಈ ಹೊಸ ಮಾರುತಿ ಎಂಪಿವಿಯನ್ನು ಕರ್ನಾಟಕದ ಬಿಡದಿ ಸ್ಥಾವರದಲ್ಲಿ ತಯಾರಿಸಲ್ಪಡುತ್ತದೆ. ಈ ಹೊಸ ಎಂಪಿವಿಯ ಖರೀದಿಗಾಗಿ ಜೂನ್ 19 ರಂದು ಅಧಿಕೃತವಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗುತ್ತದೆ. ಈ ಮಾರುತಿ ಇನ್ವಿಕ್ಟೊ ಎಂಪಿವಿಯು ಪ್ಲಾಟ್‌ಫಾರ್ಮ್, ಆಯಾಮಗಳು, ವೈಶಿಷ್ಟ್ಯಗಳು ಮತ್ತು ಪವರ್‌ಟ್ರೇನ್‌ಗಳು ಟೊಯೊಟಾ ಇನೋವಾ ಹೈಕ್ರಾಸ್‌ಗೆ ನಿಖರವಾಗಿ ಹೋಲುತ್ತವೆ.

ಹೊಸ ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿಯಲ್ಲಿ 2.0 ಲೀಟರ್, 4-ಸಿಲಿಂಡರ್ ಅಟ್ಕಿನ್ಸನ್ ಸೈಕಲ್ ಸ್ಟ್ರಾಂಗ್ ಹೈಬ್ರಿಡ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಮಾರುತಿ ಎಂಪಿವಿಯ ಮೈಲೇಜ್ ಅಂಕಿಅಂಶಗಳು ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನು ಹೋಲುವ ಸಾಧ್ಯತೆಯಿದೆ. ಎರಡನೆಯದು ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ 23.24 ಕಿ.ಮೀ ಮತ್ತು ಪೆಟ್ರೋಲ್ ಯುನಿಟ್ 16.13 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಟೊಯೊಟಾ ಇನೋವಾ ಹೈಕ್ರಾಸ್ ನಿಂದ ಪ್ರತ್ಯೇಕಿಸಲು ಮಾರುತಿಯ ಹೊಸ ಎಂಪಿವಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗುತ್ತದೆ. ಮುಂಭಾಗದಲ್ಲಿ ಹೆಚ್ಚಾಗಿ ಬದಲಾವಣೆಗಳನ್ನು ಮಾಡಲಾಗುವುದು. ಹೊಸ ಮಾರುತಿ ಇನ್ವಿಕ್ಟೊ ಗ್ರ್ಯಾಂಡ್ ವಿಟಾರಾವನ್ನು ಹೋಲುವ ಮುಂಭಾಗದ ಗ್ರಿಲ್ ಅನ್ನು ಅದರ ಮಧ್ಯದಲ್ಲಿ ಸುಜುಕಿಯ ಬ್ಯಾಡ್ಜ್ ಅನ್ನು ಹೊಂದಿದೆ. ಕಾರಿನ ಬಂಪರ್ ಸಹ ಟೊಯೊಟಾದಿಂದ ವಿಭಿನ್ನವಾಗಿ ಕಾಣುತ್ತದೆ. ಇನ್ನು ಅಲಾಯ್ ವ್ಹೀಲ್ ಗಳು ಮತ್ತು ಟೈಲ್‌ಗೇಟ್‌ಗಳು ಸುಜುಕಿಯ ಲೋಗೋವನ್ನು ಹೊಂದಿರುತ್ತದೆ.

ಇನ್ವಿಕ್ಟೊವನ್ನು ಟೊಯೊಟಾದ TNGA-C ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗುವುದು ಮತ್ತು ಮೊನೊಕಾಕ್ ಚಾಸಿಸ್ ಅನ್ನು ಹೊಂದಿರುತ್ತದೆ. ಇನೋವಾ ಹೈಕ್ರಾಸ್‌ನಿಂದ ಆಂತರಿಕ ವಿನ್ಯಾಸವನ್ನು ಸಹ ಕೈಗೊಳ್ಳಲಾಗುತ್ತದೆ. ಇನ್ವಿಕ್ಟೊ ಎಂಪಿವಿ 7 ಮತ್ತು 8-ಆಸನಗಳ ಕಾನ್ಫಿಗರೇಶನ್‌ಗಳೊಂದಿಗೆ ಮಧ್ಯದ ಸಾಲಿಗೆ ಎರಡು ಕ್ಯಾಪ್ಟನ್ ಸೀಟುಗಳನ್ನು ಮತ್ತು ಕ್ರಮವಾಗಿ ಎರಡನೇ ಮತ್ತು ಮೂರನೇ ಸಾಲುಗಳಿಗೆ ಬೆಂಚ್ ಸೀಟ್‌ಗಳನ್ನು ಒಳಗೊಂಡಿರುತ್ತದೆ.

ಹೊಸ ಮಾರುತಿ ಸುಜುಕಿ ಇನ್ವಿಕ್ಟೋ ಕಾರಿನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಹೊಂದಿರುತ್ತದೆ.

Article Published On: Monday, July 3, 2023, 12:09 [IST]
English summary
Maruti suzuki invicto teased confirms panoramic sunroof launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+