40ನೇ ವರ್ಷಕ್ಕೆ ಕಾಲಿಡುತ್ತಿದೆ ಮಾರುತಿ ಸುಜುಕಿ: ಭಾರತದಲ್ಲಿ ಕ್ರಾಂತಿ ಸೃಷ್ಟಿಸಿದ ಕಾರುಗಳಿವು..

ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷ 40ನೇ ವಸಂತಕ್ಕೆ ಕಾಲಿಡುತ್ತಿದ್ದು, ಆಟೋಮೊಬೈಲ್ ಉದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಹೇಳಬಹುದು. ಮಾರುತಿ ಸುಜುಕಿ 1983ರಲ್ಲಿ ದೇಶದ ಮಾರುಕಟ್ಟೆಯನ್ನು ಪ್ರವೇಶಿಸಿತು. ವೇಗವಾಗಿಯೇ ಭಾರತದಲ್ಲಿ ಮನೆಮಾತಾಯಿತು. ಪ್ರತಿಯೊಬ್ಬರು ಈ ಕಾರುಗಳನ್ನು ಇಷ್ಟಪಡುವುದನ್ನು ಆರಂಭಿಸಿದರು.

ಮಾರುತಿ ಸುಜುಕಿ ತನ್ನ ವಾಹನಗಳ ಮಾರಾಟದಲ್ಲಿ ದೊಡ್ಡ ದಾಖಲೆಯನ್ನು ಮಾಡಿದೆ. ತನ್ನ 40 ವರ್ಷದ ಈ ಸುಸಂದರ್ಭದಲ್ಲಿ ಕಂಪನಿಯು ತನ್ನ ನೆಕ್ಸಾ ಬ್ಲ್ಯಾಕ್ ಎಡಿಷನ್ ಶ್ರೇಣಿಯ ಕಾರುಗಳನ್ನು ಪರಿಚಯಿಸಿದೆ. ಇದು ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಬಣ್ಣದ ಆಯ್ಕೆಯ ಜೊತೆಗೆ ವಿಶೇಷವಾದ ಸೀಮಿತ ಆವೃತ್ತಿಯ ಪ್ಯಾಕೇಜ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಮಾರುತಿ ಸುಜುಕಿ, ಭಾರತೀಯ ಮಾರುಕಟ್ಟೆಯಲ್ಲಿ ತನ್ನ 40 ವರ್ಷಗಳ ಸಂಭ್ರಮದಲ್ಲಿದ್ದು, ವಿವಿಧ ವರ್ಷಗಳಲ್ಲಿ ಬಿಡುಗಡೆ ಮಾಡಿದ ಕಂಪನಿಯು ಪ್ರಮುಖ ಕಾರುಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

40ನೇ ವರ್ಷಕ್ಕೆ ಕಾಲಿಡುತ್ತಿದೆ ಮಾರುತಿ ಸುಜುಕಿ: ಭಾರತದಲ್ಲಿ ಕ್ರಾಂತಿ ಸೃಷ್ಟಿಸಿದ ಕಾರುಗಳಿವು..

ಮಾರುತಿ ಸುಜುಕಿ ಡಿಸೆಂಬರ್ 1983ರಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದ ಸಣ್ಣ ಕಾರು 'ಮಾರುತಿ 800' ಅನ್ನು ಪರಿಚಯಿಸುವುದರೊಂದಿಗೆ ಭಾರತೀಯ ಮಾರುಕಟ್ಟೆಗೆ ಎಂಟ್ರಿಕೊಟ್ಟಿತು. ಮಾರುತಿ 800 ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಅಸ್ತಿತ್ವವನ್ನು ನಿರ್ಮಾಣ ಮಾಡಿಕೊಂಡಿತು. ಭಾರತದಲ್ಲಿ ಜನರ ಕೈಗೆಟುಕುವ ಕಾರು ಇದಾಗಿತ್ತು. ಆದರೆ, 2014ರಲ್ಲಿ ಈ ಕಾರಿನ ಉತ್ಪಾದನೆಯನ್ನು ನಿಲ್ಲಿಸಲಾಯಿತು. ಕಂಪನಿಯು 1984ರಲ್ಲಿ ಮಾರುತಿ ವ್ಯಾನ್ ಅನ್ನು ಪರಿಚಯಿಸುವುದರೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಯಾಣವನ್ನು ಮುಂದುವರೆಸಿತು.

1985ರಲ್ಲಿ ಮಾರುತಿ ಸುಜುಕಿ ಜಿಪ್ಸಿಯನ್ನು ಬಿಡುಗಡೆ ಮಾಡಿತು. ಇದು 2018ರವರೆಗೆ ಉತ್ಪಾದನೆಯಲ್ಲಿತ್ತು. ಇದು ಇನ್ನೂ ಭಾರತೀಯ ಸಶಸ್ತ್ರ ಪಡೆಗಳಿಗಾಗಿ ಉತ್ಪಾದಿಸಲಾಗುತ್ತಿದೆ. ಜಿಪ್ಸಿ ಭಾರತೀಯ ಮಾರುಕಟ್ಟೆಯ ಇತಿಹಾಸದಲ್ಲಿ ಸುದೀರ್ಘ ನಿರಂತರ ಉತ್ಪಾದನೆಯಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1989ರಲ್ಲಿ ಮಾರುತಿ ಕಂಪನಿ, 'ಮಾರುತಿ 1000 ಅನ್ನು ಪರಿಚಯಿಸಿತು. 1993ರಲ್ಲಿ ಮಾರುತಿ ಝೆನ್ ಅನ್ನು ಬಿಡುಗಡೆ ಮಾಡಲಾಯಿತು. 1994ರಲ್ಲಿ ಮಾರುತಿ ಎಸ್ಟೀಮ್ ಅನ್ನು ಪರಿಚಯಿಸಲಾಯಿತು. 1999ರಲ್ಲಿ ಮಾರುತಿ ಬಲೆನೊ ಸೆಡಾನ್ ಮತ್ತು ವ್ಯಾಗನ್ಆರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು.

2000ರಲ್ಲಿ ಮಾರುತಿ ಆಲ್ಟೊ ಮತ್ತು ಬಲೆನೊ ಅಲ್ಟುರಾ ವ್ಯಾಗನ್ ಅನ್ನು ಪರಿಚಯಿಸಿತು. 2001ರಲ್ಲಿ ಮಾರುತಿ ವರ್ಸಾವನ್ನು ಲಾಂಚ್ ಮಾಡಲಾಯಿತು. 2003ರಲ್ಲಿ ಮಾರುತಿ ಗ್ರ್ಯಾಂಡ್ ವಿಟಾರಾ ಪರಿಚಯಿಸಿತು. 2005ರಲ್ಲಿ ಮಾರುತಿ ಸ್ವಿಫ್ಟ್ ಅನ್ನು ದೇಶೀಯ ಗ್ರಾಹಕರಿಗೆ ನೀಡಲಾಯಿತು. 2006ರಲ್ಲಿ ಮೌತಿ ಝೆನ್ ಎಸ್ಟಿಲೊವನ್ನು ಬಿಡುಗಡೆ ಮಾಡಲಾಯಿತು. 2007ರಲ್ಲಿ ಮಾರುತಿ SX4 ಅನ್ನು ಖರೀದಿದಾರರಿಗೆ ಪರಿಚಯಿಸಿತು. 2008ರಲ್ಲಿ ಮಾರುತಿ ಎ-ಸ್ಟಾರ್ ಮತ್ತು ಸ್ವಿಫ್ಟ್ ಡಿಜೈರ್ ಅನ್ನು ಬಿಡುಗಡೆ ಮಾಡಲಾಯಿತು. ನಂತರ, ಅದನ್ನು ಡಿಜೈರ್ ಎಂದು ಮರುನಾಮಕರಣ ಮಾಡಲಾಯಿತು.

2009ರಲ್ಲಿ ಮಾರುತಿ ರಿಟ್ಜ್ ಅನ್ನು ಬಿಡುಗಡೆ ಮಾಡಿತು. 2010ರಲ್ಲಿ ಮಾರುತಿ ಇಕೋ ಲಾಂಚ್ ಮಾಡಲಾಯಿತು. 2011ರಲ್ಲಿ ಮಾರುತಿ ಕಿಝಾಶಿಯನ್ನು ಬಿಡುಗಡೆ ಮಾಡಿತು. 2012ರಲ್ಲಿ ಮಾರುತಿ ಎರ್ಟಿಗಾವನ್ನು ಪರಿಚಯಿಸಿತು. 2014ರಲ್ಲಿ ಮಾರುತಿ ಸೆಲೆರಿಯೊ ಮತ್ತು ಸಿಯಾಜ್ ಅನ್ನು ಪರಿಚಯಿಸಿತು. 2015ರಲ್ಲಿ ಮಾರುತಿ ಎಸ್-ಕ್ರಾಸ್ ಮತ್ತು ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಗ್ರಾಹಕರಿಗೆ ಖರೀದಿಗೆ ನೀಡಲಾಯಿತು. 2016ರಲ್ಲಿ ಮಾರುತಿ ವಿಟಾರಾ ಬ್ರೆಜ್ಜಾವನ್ನು ಪರಿಚಯಿಸಿತು. ಅದನ್ನು ಸದ್ಯ ಬ್ರೆಜ್ಜಾ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಹೇಳಬಹುದು.

2017ರಲ್ಲಿ ಮಾರುತಿ ಇಗ್ನಿಸ್ ಅನ್ನು ಪರಿಚಯಿಸಿತು. 2019ರಲ್ಲಿ ಮಾರುತಿ S-ಪ್ರೆಸ್ಸೊ ಮತ್ತು XL-6 ಅನ್ನು ಬಿಡುಗಡೆ ಮಾಡಲಾಯಿತು. 2022ರಲ್ಲಿ ಮಾರುತಿ ಗ್ರ್ಯಾಂಡ್ ವಿಟಾರಾದ ನವೀಕರಿಸಿದ ಆವೃತ್ತಿಯನ್ನು ಖರೀದಿದಾರರಿಗೆ ಬಿಡುಗಡೆ ಮಾಡಿತ್ತು. ಈ ವರ್ಷವು (2023) ಮಾರುತಿ ಸುಜುಕಿ ಹೊಸ ಕಾರುಗಳನ್ನು ಪರಿಚಯಿಸಲು ಯೋಜಿಸಿದೆ. ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಎರಡು ಹೊಸ SUVಗಳನ್ನು ಅನಾವರಣ ಮಾಡಲಿದ್ದು, ಜೊತೆಗೆ ಒಂದು ಹೊಸ EV ಪರಿಕಲ್ಪನೆಯನ್ನು ಪ್ರದರ್ಶಿಸುವ ಸಾಧ್ಯತೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, January 5, 2023, 18:27 [IST]
English summary
Maruti suzuki is turning 40 the cars that created a revolution in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+