ಮಾರುತಿ ಸುಜುಕಿ ಜಿಮ್ನಿ 3-ಡೋರ್ Vs 5-ಡೋರ್: ವ್ಯತ್ಯಾಸಗಳು
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಕ್ರಾಂತಿಯನ್ನು ಸೃಷ್ಟಿಸಿತು. ಇದೀಗ ಜನಪ್ರಿಯ ಜಿಮ್ನಿ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲೂ ಕೂಡ ಬಾರೀ ಬೇಡಿಕೆಯೊಂದಿಗೆ ಹೊಸ ಕ್ರಾಂತಿ ಮಾಡುತ್ತಿದೆ. ಒಂದು ಕಾಲದ ಆಫ್-ರೋಡ್ ಕಿಂಗ್ ಆಗಿದ್ದ ಜಿಪ್ಸಿಯ ಉತ್ತರಾಧಿಕಾರಿಯಾಗಿ ಬಂದ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny)ಕೂಡ ಭಾರತೀಯರ ಮನ ಗೆದ್ದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಕಂಪನಿಯು ಮೂರು-ಡೋರಿನ ಜಿಮ್ನಿ ಎಸ್‍ಯುವಿಯನ್ನು ಮಾರಾಟ ಮಾಡುತ್ತಿದೆ. ಇತ್ತೀಚೆಗೆ, ಸುಜುಕಿ ಡೀಲರ್‌ಶಿಪ್‌ಗೆ ಭೇಟಿ ನೀಡಿದ ವ್ಲಾಗರ್ ಮೂರು-ಡೋರಿನ ಜಿಮ್ನಿ ಮತ್ತು ಹೊಸ ಐದು-ಡೋರ್ ಜಿಮ್ನಿ ಎಸ್‍ಯುವಿ ಮಾದರಿಗಳ ನಡುವಿನ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಶೇರ್ ಮಾಡಿದೆ. ಎರಡೂ ಜಿಮ್ನಿಗಳ ನಡುವಿನ ಈ ಹೋಲಿಕೆಯ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ FE ಬಿಲ್ಡ್ಸ್ ಅವರ ಚಾನೆಲ್‌ನಲ್ಲಿ ಹಂಚಿಕೊಂಡಿದೆ.

ಪ್ರೆಸೆಂಟರ್ ಮೊದಲು ತನ್ನ ಮಾಡಿಫೈ ಜಿಮ್ನಿ ಮೂರು-ಡೋರ್ ಜಿಮ್ನಿ ಐದು-ಡೋರ್ ಪಕ್ಕದಲ್ಲಿ ಜೋಡಿಸುವುದರೊಂದಿಗೆ ಇದು ಪ್ರಾರಂಭವಾಗುತ್ತದೆ. ಹೊರಗಿನಿಂದ ಎರಡೂ ಎಸ್‍ಯುವಿಗಳು ಒಂದೇ ವಿನ್ಯಾಸವನ್ನು ಹೊಂದಿವೆ ಎಂದು ಹೇಳಿದ್ದಾರೆ. ಎರಡೂ ಒಂದೇ ಮುಂಭಾಗ ಮತ್ತು ಹಿಂಭಾಗವನ್ನು ಪಡೆಯುತ್ತವೆ. ಸೈಡ್ ಪ್ರೊಫೈಲ್‌ನಲ್ಲಿ ಮಾತ್ರ ಪ್ರಮುಖ ವ್ಯತ್ಯಾಸವಿದೆ ಎಂದಿದ್ದಾರೆ.
ಮೂರು-ಡೋರ್ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯು ಚಿಕ್ಕದಾದ ವೀಲ್‌ಬೇಸ್ ಮತ್ತು ಉದ್ದವನ್ನು ಪಡೆಯುತ್ತದೆ. ಜಿಮ್ನಿ ಮೂರು-ಡೋರ್ ಜಿಮ್ನಿ ಐದು-ಬಾಗಿಲಿನ ಹಿಂದಿನ ಕ್ವಾರ್ಟರ್ ಗ್ಲಾಸ್‌ನ ಅರ್ಧದಾರಿಯಲ್ಲೇ ಕೊನೆಗೊಳ್ಳುತ್ತದೆ ಎಂದು ಅವರು ಹೈಲೈಟ್ ಮಾಡುತ್ತಾರೆ. ನಿಖರವಾದ ಆಯಾಮಗಳ ಪ್ರಕಾರ, ಜಿಮ್ನಿ ಐದು-ಬಾಗಿಲು 3,985 ಮಿಮೀ ಉದ್ದವನ್ನು ಹೊಂದಿದೆ. ಆದರೆ ಜಿಮ್ನಿ ಮೂರು-ಡೋರ್ ಮಾದರಿಯು 3,645 ಮಿ.ಮೀ ಉದ್ದವನ್ನು ಹೊಂದಿದೆ.ಎರಡು ಮಾದರಿಗಳ ಉದ್ದದಲ್ಲಿ 340 ಮಿಮೀ ಗಣನೀಯ ವ್ಯತ್ಯಾಸವಿದೆ.

ಇದರ ಹೊರತಾಗಿ, ಎರಡೂ ಕಾರುಗಳು ಒಂದೇ ಎತ್ತರ ಮತ್ತು ಅಗಲವನ್ನು ಹೊಂದಿದ್ದು, ಕ್ರಮವಾಗಿ 1,720 mm ಮತ್ತು 1,645 mm ಎತ್ತರ ಮತ್ತು ಅಗಲವನ್ನು ಹೊಂದಿದೆ. ಈ ಎರಡೂ ಎಸ್‍ಯುವಿಗಳು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆಯುತ್ತವೆ. ಎರಡು ಮಾದರಿಗಳ ವ್ಹೀಲ್‌ಬೇಸ್ ನಡುವೆ ಮತ್ತೊಂದು ಪ್ರಮುಖ ವ್ಯತ್ಯಾಸವಿದೆ. ಐದು-ಬಾಗಿಲಿನ ಜಿಮ್ನಿ ಸುಮಾರು 2,590 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ.
ಜಿಮ್ನಿ ಐದು-ಬಾಗಿಲು ಹಿಂದಿನ ಬೂಟ್ ಸಾಮರ್ಥ್ಯವನ್ನು 208 ಲೀಟರ್ ನೀಡುತ್ತದೆ, ಇನ್ನು ಮೂರು-ಡೋರಿನ ಜಿಮ್ನಿಯು ಕೇವಲ 85 ಲೀಟರ್ ಬೂಟ್ ಸಾಮರ್ಥ್ಯವನ್ನು ನೀಡುತ್ತದೆ. ಇವೆರಡರ ನಡುವಿನ ವ್ಯತ್ಯಾಸ 123 ಲೀಟರ್ ಬೂಟ್ ಸ್ಪೇಸ್ ಆಗಿದೆ. ಎರಡೂ ಮಾದರಿಗಳಲ್ಲಿ ಒಟ್ಟಾರೆ ವಿನ್ಯಾಸ ಮತ್ತು ಉಪಕರಣಗಳು ಒಂದೇ ಆಗಿವೆ.

ಆದರೆ ಏಕೈಕ ಪ್ರಮುಖ ವ್ಯತ್ಯಾಸವೆಂದರೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಇದು ವಾಹನದ ECU ನೊಂದಿಗೆ ಲಿಂಕ್ ಆಗಿದೆ, ಜೊತೆಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನ ಎರಡು ಡಯಲ್‌ಗಳ ನಡುವೆ ಇರಿಸಲಾದ ಡಿಜಿಟಲ್ MID ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ಜಿಮ್ನಿ ಎಸ್‍ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದೆ.
ಈ ಎಂಜಿನ್ 6000 rpm ನಲ್ಲಿ 104.8 ಪಿಎಸ್ ಗರಿಷ್ಠ ಪವರ್ ಹಾಗೂ 4000 rpm ನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಎಸ್‍ಯುವಿಯು 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications