ವಿದೇಶದಲ್ಲೂ ಆರ್ಭಟಿಸಲಿದೆ ಮೇಡ್-ಇನ್-ಇಂಡಿಯಾ ರಣಬೇಟೆಗಾರ ಮಾರುತಿ ಜಿಮ್ನಿ 5-ಡೋರ್ ಎಸ್‍ಯುವಿ
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜಿಮ್ನಿ ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಹೊಸ ಬಿರುಗಾಳಿಯನ್ನು ಎಬ್ಬಿಸಿತು. ಇದೀಗ ಜನಪ್ರಿಯ ಜಿಮ್ನಿ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲೂ ಕೂಡ ಬಾರೀ ಬೇಡಿಕೆಯೊಂದಿಗೆ ಹೊಸ ಕ್ರಾಂತಿ ಮಾಡುತ್ತಿದೆ. ಒಂದು ಕಾಲದ ಆಫ್-ರೋಡ್ ಕಿಂಗ್ ಆಗಿದ್ದ ಜಿಪ್ಸಿಯ ಉತ್ತರಾಧಿಕಾರಿಯಾಗಿ ಬಂದ ಜಿಮ್ನಿ ಕೂಡ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಮ್ನಿ ಪ್ರಸ್ತುತ ಭಾರತದಲ್ಲಿ ಬಿಡುಗಡೆಯಾದ ಅತ್ಯಂತ ಬೇಡಿಕೆಯಲ್ಲಿರುವ ಆಫ್-ರೋಡ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿಯು ಭಾರತದಲ್ಲಿ ತಯಾರಿಸಿದ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) 5-ಡೋರನ್ನು ಮಧ್ಯಪ್ರಾಚ್ಯ, ಲ್ಯಾಟಿನ್ ಅಮೇರಿಕಾ ಮತ್ತು ಆಫ್ರಿಕಾ ಪ್ರದೇಶಗಳು ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲು ಪ್ರಾರಂಭಿಸಿದೆ. ಈ ಐದು-ಡೋರಿನ ಬಾಡಿ ಶೈಲಿಯಲ್ಲಿ ಆಫ್-ರೋಡರ್ ಅನ್ನು ತಯಾರಿಸುವ ಏಕೈಕ ದೇಶ ಭಾರತ.

ರಫ್ತುಗಳಿಗಾಗಿ ಜಿಮ್ನಿ 5-ಡೋರು ಸಣ್ಣ ಪ್ರದೇಶ-ನಿರ್ದಿಷ್ಟ ವ್ಯತ್ಯಾಸಗಳನ್ನು ಹೊಂದಿರುತ್ತದೆ, ಆದರೆ ಪವರ್‌ಟ್ರೇನ್ ಅಥವಾ ಆಫ್-ರೋಡ್ ಗೇರ್‌ಗೆ ಯಾವುದೇ ಬದಲಾವಣೆಗಳಿಲ್ಲ. ಮೇಡ್-ಇನ್-ಇಂಡಿಯಾ ಜಿಮ್ನಿಯನ್ನು ಬಹು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗಿದ್ದರೂ, ಕಟ್ಟುನಿಟ್ಟಾದ ಹೊರಸೂಸುವಿಕೆಯ ಮಾನದಂಡಗಳ ಕಾರಣದಿಂದಾಗಿ ಜಿಮ್ನಿಯನ್ನು ಯುರೋಪ್‌ನಲ್ಲಿ ಮಾರಾಟವಾಗುವುದಿಲ್ಲ.
ಭಾರತದಲ್ಲಿ ಜಿಮ್ನಿಯ ಪ್ರತಿಸ್ಪರ್ಧಿಗಳಾದ ಥಾರ್ ಮತ್ತು ಗೂರ್ಖಾಗೆ ಹೋಲಿಸಿದರೆ ಡ್ರೈವ್ ಮಾಡಲು ಹೆಚ್ಚು ಸುಲಭವಾಗಿದೆ. ಹಳೆಯ ಜಿಪ್ಸಿಯಂತೆಯೇ, ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಬಳಸುತ್ತದೆ. ಜಿಮ್ನಿ ಕಾಂಪ್ಯಾಕ್ಟ್ ಆಯಾಮಗಳನ್ನು ಹೊಂದಿದೆ, ಇದು ಗರಿಷ್ಠ ಟ್ರಾಫಿಕ್ ಸಮಯದಲ್ಲಿ ಚಾಲನೆ ಮಾಡಲು ಸುಲಭ. ರಸ್ತೆಯಲ್ಲಿ ಕಡಿಮೆ ಜಾಗ ಸಾಕಾಗುತ್ತದೆ. ಅದರ ಹೊರತಾಗಿ, ಜಿಮ್ನಿಯು ಕುಶಲತೆಯಿಂದ ಕಂಟ್ರೋಲ್ ಮಾಡಲು ತುಂಬಾ ಸುಲಭವಾಗಿದೆ. ಏಕೆಂದರೆ ಇದು ತೂಕದಲ್ಲಿ ಹೆಚ್ಚು ಹಗುರವಾಗಿರುತ್ತದೆ.
ಅದಕ್ಕಾಗಿಯೇ ಥಾರ್‌ಗೆ ಹೋಲಿಸಿದರೆ ಜಿಮ್ನಿ ದೈನಂದಿನ ಬಳಕೆ ಮತ್ತು ಪ್ರಯಾಣಕ್ಕೆ ಹೆಚ್ಚು ಪ್ರಾಯೋಗಿಕವಾಗಿದೆ.ಹೊಸ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ .ಈ ಮಾರುತಿ ಜಿಮ್ನಿ ಎಸ್‍ಯುವಿಯಲ್ಲಿ ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ.
ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. ರೇರ್ ಆಕರ್ಷವಾಗಿದ್ದು, ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ. 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ. ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‍ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.
ಈ ಎಂಜಿನ್ 6000 rpm ನಲ್ಲಿ 104.8 ಪಿಎಸ್ ಗರಿಷ್ಠ ಪವರ್ ಹಾಗೂ 4000 rpm ನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಜಿಮ್ನಿ ಎಲ್ಲಾ ರೂಪಾಂತರಗಳಲ್ಲಿ 4WD ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.
ಈ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‍ಯುವಿಯಲ್ಲಿ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಹಾಗೂ ಕಿವಿಗೆ ಕೇಳಲು ಹಿತವಾಗಿರುವ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಜಿಮ್ನಿ ಆರು ಏರ್‌ಬ್ಯಾಗ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications