ಮಾರುತಿ ಸುಜುಕಿಯ ಈ ಎಸ್‌ಯುವಿಗಳಿಗೆ ಬೃಹತ್ ಬೇಡಿಕೆ: ಬರೋಬ್ಬರಿ 30,000 ಬುಕಿಂಗ್

ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಾರುತಿ ಸುಜುಕಿಯ ಕಾರುಗಳು ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡಿವೆ. ಕಳೆದ ತಿಂಗಳು ದೆಹಲಿಯಲ್ಲಿ ಮುಕ್ತಾಯಗೊಂಡ ಆಟೋ ಎಕ್ಸ್‌ಪೋದಲ್ಲಿ ಜಿಮ್ನಿ 5-ಡೋರ್ ಹಾಗೂ ಫ್ರಾಂಕ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಅನಾವರಣಗೊಳಿಸಿತು. ಜೊತೆಗೆ ಬುಕಿಂಗ್ ಕೂಡ ಆರಂಭಿಸಿತ್ತು.

ಸದ್ಯ, ಈ ವಿಚಾರದಲ್ಲಿ ಕಂಪನಿಯು ದೊಡ್ಡ ದಾಖಲೆ ಮಾಡಿದೆ. ಬುಕಿಂಗ್ ಆರಂಭವಾಗಿ ಕೇವಲ 44 ದಿನಗಳು ಕಳೆದಿದ್ದು, ಎರಡು ಎಸ್‌ಯುವಿಗಳು ಒಟ್ಟು 30,000 ಬುಕಿಂಗ್ ಪಡೆದುಕೊಂಡಿವೆ. ಅದರಲ್ಲಿ ಜಿಮ್ನಿ 5-ಡೋರ್ 20,000, ಫ್ರಾಂಕ್ಸ್ ಎಸ್‌ಯುವಿಗಾಗಿ 10,000 ಮಂದಿ ಗ್ರಾಹಕರು ಬುಕ್ ಮಾಡಿದ್ದಾರೆ. ಆಸಕ್ತ ಗ್ರಾಹಕರು ಸಮೀಪದ ಡೀಲರ್ ಶಿಪ್ ಗೆ ಭೇಟಿ ನೀಡುವ ಮೂಲಕ ಜಿಮ್ನಿಗಾಗಿ ರೂ.25,000, ಫ್ರಾಂಕ್ಸ್ ಎಸ್‌ಯುವಿಗಾಗಿ ರೂ.11,000 ಮುಂಗಡ ಹಣವನ್ನು ಪಾವತಿಸಿ ಬುಕಿಂಗ್ ಮಾಡಬಹುದು.

ಮಾರುತಿ ಸುಜುಕಿಯ ಈ ಎಸ್‌ಯುವಿಗಳಿಗೆ ಬೃಹತ್ ಬೇಡಿಕೆ: ಬರೋಬ್ಬರಿ 30,000 ಬುಕಿಂಗ್

ಮಾರುತಿ ಸುಜುಕಿಯ ಜಿಮ್ನಿ 5 ಡೋರ್, ಫ್ರಾಂಕ್ಸ್‌ ಎಸ್‌ಯುವಿಗಳು ಜಾಗತಿಕವಾಗಿ ವ್ಯಾಪಕವಾಗಿ ಜನಪ್ರಿಯತೆಯನ್ನು ಗಳಿಸಿವೆ ಎಂದು ಹೇಳಬಹುದು. ಅದಕ್ಕೆ ಉದಾಹರಣೆ ಆಸ್ಟ್ರೇಲಿಯಾಕ್ಕೆ ಈ ಎಸ್‌ಯುವಿಗಳನ್ನು ರಫ್ತು ಮಾಡಲಾಗುತ್ತದೆ ಎಂದು ಅಧಿಕೃತವಾಗಿ ಕಂಪನಿ ಪ್ರಕಟಿಸಿದೆ. ಜಿಮ್ನಿ 5 ಡೋರ್ ಎಸ್‌ಯುವಿಯನ್ನು ಹರಿಯಾಣದ ಗುರುಗ್ರಾಮ್ ಹಾಗೂ ಫ್ರಾಂಕ್ಸ್‌ ಕಾರನ್ನು ಗುಜರಾತ್ ನ ಉತ್ಪಾದನಾ ಘಟಕದಲ್ಲಿ ತಯಾರಿಸುತ್ತದೆ. ಇತ್ತೀಚೆಗೆ ಗ್ರ್ಯಾಂಡ್ ವಿಟಾರಾವನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಾಗಿತ್ತು.

ಮಾರುತಿ ಸುಜುಕಿ ಜಿಮ್ನಿ 5 ಡೋರ್, ಗ್ರ್ಯಾಂಡ್ ವಿಟಾರಾ, ಗ್ರ್ಯಾಂಡ್ ವಿಟಾರಾ, ಬ್ರೆಝಾ, ಸಿಯಾಜ್ ಹಾಗೂ XL6 ಕಾರುಗಳು ಹೊಂದಿರುವ ಎಂಜಿನ್ ಅನ್ನೇ ಪಡೆದುಕೊಂಡಿದೆ. ಇದರ 1.5 ಲೀಟರ್ 4 ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 105 bhp ಗರಿಷ್ಠ ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ವೀಡ್ ಮ್ಯಾನುವಲ್ ಅಥವಾ 4-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.

ಮಾರುತಿ ಸುಜುಕಿಯ ಈ ಎಸ್‌ಯುವಿಗಳಿಗೆ ಬೃಹತ್ ಬೇಡಿಕೆ: ಬರೋಬ್ಬರಿ 30,000 ಬುಕಿಂಗ್

ಬಹುನೀರಿಕ್ಷಿತ ಫ್ರಾಂಕ್ಸ್‌ ಎಸ್‌ಯುವಿ ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ, 1.2-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 89 bhp ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 100 bhp ಪವರ್, 148 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಮ್ಯಾನುವಲ್ ಅಥವಾ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಬಹುದು.

ಮಾರುತಿ ಸುಜುಕಿ ಜಿಮ್ನಿ 5 ಡೋರ್, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಕ್ರೂಸ್ ಕಂಟ್ರೋಲ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಪಡೆದಿದೆ.

ಮಾರುತಿ ಸುಜುಕಿ ಫ್ರಾಂಕ್ಸ್‌ ಎಸ್‌ಯುವಿ ಕೂಡ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇವು ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಕಂಪನಿ ನಂಬಿದ್ದು, 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ವಾಯ್ಸ್ ಅಸಿಸ್ಟೆಂಟ್, ಬ್ಲೂಟೂತ್, OTA ಅಪ್‌ಡೇಟ್, 4 - ಸ್ಪೀಕರ್ ಆಡಿಯೊ ಸಿಸ್ಟಮ್ ಸೇರಿದಂತೆ ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಪ್ರತಿಯೊಬ್ಬ ಗ್ರಾಹಕರ ಆದ್ಯತೆಯಾಗಿರುವ ಸುರಕ್ಷತೆ ವಿಚಾರದಲ್ಲೂ ಈ ಕಾರು ಅತ್ಯುತ್ತಮವಾಗಿದೆ ಎಂದು ಹೇಳಬಹುದು.

ಜಿಮ್ನಿ 5-ಡೋರ್ ಹಾಗೂ ಫ್ರಾಂಕ್ಸ್ ಕಾಂಪ್ಯಾಕ್ಟ್ ಎಸ್‌ಯುವಿಗಳು ಪಡೆದುಕೊಂಡಿರುವ ಬುಕಿಂಗ್ ಗಮನಿಸಿದಾಗ ಎಷ್ಟರಮಟ್ಟಿಗೆ ಬೇಡಿಕೆ ಸೃಷ್ಟಿಸಿಕೊಂಡಿವೆ ಎಂಬುದು ತಿಳಿಯುತ್ತದೆ. ಜಿಮ್ನಿ 5-ಡೋರ್ ರೂ.10-12 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾಗೆ ಭಾರೀ ಪೈಪೋಟಿ ನೀಡಲಿದೆ. ಫ್ರಾಂಕ್ಸ್‌ ಎಸ್‌ಯುವಿ ಬೆಲೆ ರೂ.10 ರಿಂದ 14 ಲಕ್ಷ ದರದಲ್ಲಿ ಖರೀದಿಗೆ ಸಿಗಬಹುದು. ಇವು ಮುಂಬರುವ ದಿನಗಳಲ್ಲಿ ತಮ್ಮದೇ ಮೈಲಿಗಲ್ಲನ್ನು ನಿರ್ಮಿಸಬಹುದು.

Article Published On: Saturday, February 25, 2023, 13:22 [IST]
English summary
Maruti suzuki jimny 5 door fronx garners 30000 bookings details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+