Maruti Jimny: ಬಿಡುಗಡೆಗೂ ಮುನ್ನವೇ ಬಹುನೀರಿಕ್ಷಿತ ಮಾರುತಿ ಸುಜುಕಿ ಜಿಮ್ನಿ ಮೈಲೇಜ್ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗ

ಭಾರತದ ಮಾರುಕಟ್ಟೆಯಲ್ಲಿ ಕಳೆದ ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ, 'ಜಿಮ್ನಿ 5 ಡೋರ್' ಎಸ್‌ಯುವಿಯನ್ನು ಪ್ರದರ್ಶಿಸಿ, ಅಂದಿನಿಂದಲೇ ಬುಕಿಂಗ್ ಆರಂಭಿಸಿತ್ತು. ಈಗಾಗಲೇ, ಉತ್ಪಾದನೆಯನ್ನು ಶುರು ಮಾಡಿದೆ. ಇದೀಗ, ಈ ಆಫ್-ರೋಡ್ ಎಸ್‌ಯುವಿಯ ಮೈಲೇಜ್ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿದೆ.

ಮಾರುತಿ ಸುಜುಕಿ ಕಂಪನಿ ಪ್ರಕಾರ, ಮ್ಯಾನುವಲ್ ರೂಪಾಂತರ 16.94 km/l ಹಾಗೂ ಆಟೋಮೆಟಿಕ್ ರೂಪಾಂತರ 16.39 km/l ಮೈಲೇಜ್ ನೀಡಲಿದೆ. ಫ್ಯುಯೆಲ್ ಟ್ಯಾಂಕ್ ಬಗ್ಗೆ ಮಾತನಾಡುವುದಾದರೆ, ಮ್ಯಾನುವಲ್ ವೇರಿಯೆಂಟ್ 40 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 678 ಕಿಲೋಮೀಟರ್ ಕ್ರಮಿಸುತ್ತದೆ. ಆಟೋಮೆಟಿಕ್ ವೇರಿಯೆಂಟ್ ಕೂಡ ಇದೇ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಪಡೆದಿದ್ದು, 656 ಕಿಲೋಮೀಟರ್ ಓಡುತ್ತದೆ.

Maruti Jimny: ಬಿಡುಗಡೆಗೂ ಮುನ್ನವೇ ಬಹುನೀರಿಕ್ಷಿತ ಮಾರುತಿ ಸುಜುಕಿ ಜಿಮ್ನಿ ಮೈಲೇಜ್ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗ

ನಿಮಗೆ ತಿಳಿದಿರಲಿ, ಮಾರುತಿ ಸುಜುಕಿ ಜಿಮ್ನಿ 5 ಡೋರ್, ಆಫ್ ರೋಡ್ ಎಸ್‌ಯುವಿಯಾಗಿರುವುದರಿಂದ ಕೊಂಚ ಕಡಿಮೆ ಮೈಲೇಜ್ ನೀಡುತ್ತದೆ. ಇದೇ ಪವರ್‌ಟ್ರೇನ್‌ ಆಯ್ಕೆ ಹೊಂದಿರುವ ಬ್ರೆಝಾ ಕಾರಿನ ಮ್ಯಾನುವಲ್ ರೂಪಾಂತರ 20.15 km/l ( (ZXI ಹಾಗೂ ZXI+ ವೇರಿಯೆಂಟ್ 19.89 km/l), ಆಟೋಮೆಟಿಕ್ ರೂಪಾಂತರ 19.80 km/l ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‌ಯುವಿ, ಸದ್ಯ, ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಳ್ಳುವ ಮೂಲಕ ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿದೆ. ಈವರೆಗೆ 30,000ಕ್ಕೂ ಆಧಿಕ ಗ್ರಾಹಕರು ಆರ್ಡರ್ ಮಾಡಿದ್ದಾರೆ. ಆಸಕ್ತರು, ರೂ.25,000 ಮುಂಗಡ ಹಣ ಪಾವತಿಸುವ ಮೂಲಕ ಬುಕ್ ಮಾಡಬಹುದು. ಕಳೆದ ತಿಂಗಳು ಫ್ರಾಂಕ್ಸ್ ಎಸ್‌ಯುವಿ ಬಿಡುಗಡೆಯಾದ ಹಿನ್ನೆಲೆ, ಜಿಮ್ನಿಯಲ್ಲಿ ಇದೇ ತಿಂಗಳು ಲಾಂಚ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೀಗ ಜೂನ್ ನಲ್ಲಿ ಗ್ರಾಹಕರಿಗೆ ಸಿಗಲಿದೆ.

ಮಾರುತಿ ಸುಜುಕಿ ಜಿಮ್ನಿ 5 ಡೋರ್ ಪವರ್‌ಟ್ರೇನ್‌ ಬಗ್ಗೆ ಮಾತನಾಡುವುದಾದರೆ, ಇದು, ಆಫ್-ರೋಡ್ ಎಸ್‌ಯುವಿಯಾಗಿರುವದರಿಂದ ಪವರ್ ಫುಲ್ ಎಂಜಿನ್ ಹೊಂದಿದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್, 103 bhp ಪವರ್, 134 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ.

ಈ ಹೊಚ್ಚ ಹೊಸ ಜಿಮ್ನಿ 5 ಡೋರ್ ಎಸ್‌ಯುವಿ, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನ ಆಯ್ಕೆಯನ್ನು ಹೊಂದಿದೆ. 2 ಡುಯಲ್ ಟೋನ್ ಮತ್ತು 5 ಮೊನೊ ಟೋನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಸುತ್ತಳತೆ ಬಗ್ಗೆ ಮಾತನಾಡುವುದಾದರೆ, ಇದು 3,985ಎಂಎಂ ಉದ್ದ, 1,645ಎಂಎಂ ಅಗಲ ಹಾಗೂ 1,720ಎಂಎಂ ಎತ್ತರವಿದ್ದು, 2,590 ಎಂಎಂ ಉದ್ದದ ವೀಲ್ ಬೇಸ್ ಪಡೆದಿದೆ.

ಮಾರುತಿ ಸುಜುಕಿ ಜಿಮ್ನಿ ಪಡೆದಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಅಲಾಯ್ ವೀಲ್ಸ್, ಹೆಡ್ ಲ್ಯಾಪ್ ವಾಷರ್ಸ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ನೂತನ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‌ಯುವಿ ಬೆಲೆಯನ್ನು ಕಂಪನಿ ಎಲ್ಲಿಯೂ ವಿವರವನ್ನು ಬಹಿರಂಗಪಡಿಸಿಲ್ಲ. ಆದರೂ ಮೂಲಗಳ ಪ್ರಕಾರ, ರೂ.10 - 12 ಲಕ್ಷ ಆರಂಭಿಕ ದರದಲ್ಲಿ ಭಾರತದ ಗ್ರಾಹಕರಿಗೆ ಸಿಗಬಹುದು. ಈ ಜಿಮ್ನಿಯನ್ನು ಕಂಪನಿಯು ನೆಕ್ಸಾ ಡೀಲರ್ ಶಿಪ್ ಮೂಲಕ ಮಾರಾಟ ಮಾಡಲಿದ್ದು, ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಎಸ್‌ಯುವಿಗಳು ಪ್ರತಿಸ್ಪರ್ಧಿಯಾಗಿವೆ.

Article Published On: Monday, May 22, 2023, 16:34 [IST]
English summary
Maruti suzuki jimny fuel efficiency figures out details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+