MARUTI SUZUKI JIMNY: ಇಷ್ಟರಲ್ಲಿಯೇ ಬರಲಿದೆ 'ಕಿಂಗ್' ಮಾರುತಿ ಸುಜುಕಿ ಜಿಮ್ನಿ.. ಪ್ರಮುಖ ಮಾಹಿತಿ

ಮಾರುತಿ ಸುಜುಕಿ ಕಂಪನಿ, ದೇಶೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಫ್ರಾಂಕ್ಸ್ ಎಸ್‌ಯುವಿಯನ್ನು ಬಿಡುಗಡೆಗೊಳಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟುಹಾಕಿತ್ತು. ಇದೀಗ, ಬಹುನೀರಿಕ್ಷಿತ ಆಫ್-ರೋಡ್ ಕಾರಾಗಿರುವ ಜಿಮ್ನಿ 5 ಡೋರ್ ಅನ್ನು ಶೀಘ್ರದಲ್ಲಿ ಲಾಂಚ್ ಮಾಡಲಿದ್ದು, ಅದಕ್ಕಾಗಿ ಎಲ್ಲ ರೀತಿಯಿಂದಲ್ಲೂ ಸಕಲ ಸಿದ್ಧತೆ ನಡೆದಿದೆ.

ಕಳೆದ ಜನವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಜಿಮ್ನಿ 5 ಡೋರ್ ಎಸ್‌ಯುವಿಯನ್ನು ಅನಾವರಣ ಮಾಡಿ, ಅಂದಿನಿಂದಲೇ ಬುಕಿಂಗ್ ಆರಂಭಿಸಿತ್ತು. ಗ್ರಾಹಕರಿಂದಲೂ ಸಕಾರತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆರ್ಡರ್ ಮಾಡುತ್ತಿದ್ದಾರೆ. ಈಗಲೂ ಅವಕಾಶವಿದ್ದು, ಆಸಕ್ತರು ರೂ.25,000 ಪಾವತಿಸಿ ಕಾಯ್ದಿರಿಸಬಹುದು. ಈ ಜಿಮ್ನಿಯನ್ನು ಕಂಪನಿಯು ಬಹುತೇಕ ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಲಾಂಚ್ ಮಾಡಲಿದೆ.

MARUTI SUZUKI JIMNY: ಇಷ್ಟರಲ್ಲಿಯೇ ಬರಲಿದೆ ಕಿಂಗ್ ಮಾರುತಿ ಸುಜುಕಿ ಜಿಮ್ನಿ.. ಪ್ರಮುಖ ಮಾಹಿತಿ

ಜಿಮ್ನಿ 5 ಡೋರ್ ಎಸ್‌ಯುವಿ ಬೆಲೆ ಕುರಿತಂತೆ ಕಂಪನಿಯು ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಲ್ಲ. ಆದರೆ, ಈ ಮೊದಲು ಫ್ರಾಂಕ್ಸ್ ಎಸ್‌ಯುವಿಯನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಸುಮಾರು 7 ಲಕ್ಷ ಆರಂಭಿಕ ದರದಲ್ಲಿ ಲಾಂಚ್ ಮಾಡಿ, ಮಾರುತಿ ಸುಜುಕಿ ತನ್ನ ಖರೀದಿದಾರರಿಗೆ ಸಿಹಿಸುದ್ದಿ ನೀಡಿತ್ತು. ಇದೀಗ, ಜಿಮ್ನಿಯು ಸುಮಾರು ರೂ.10 ಲಕ್ಷದಿಂದ ರೂ.15 ಲಕ್ಷ ಬೆಲೆಯಲ್ಲಿ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಆಫ್-ರೋಡ್ ಚಾಲನೆಗೆ ಸಾಧ್ಯವಾಗುವಂತೆ ಜಿಮ್ನಿ 5 ಡೋರ್ ಎಸ್‌ಯುವಿ ಶಕ್ತಿಶಾಲಿ ಎಂಜಿನ್ ಪಡೆದಿದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್, 103 bhp ಗರಿಷ್ಠ ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಜಿಮ್ನಿ 5 ಡೋರ್ ಸುತ್ತಳೆತೆ ಬಗ್ಗೆ ಹೇಳುವುದಾದರೆ, ಇದು 3,985 ಎಂಎಂ ಉದ್ದ, 1,645 ಎಂಎಂ ಅಗಲ ಹಾಗೂ 1,720 ಎಂಎಂ ಎತ್ತರವಿದ್ದು, 2,590 ಎಂಎಂ ಉದ್ದದ ವೀಲ್ ಬೇಸ್ ಹೊಂದಿದೆ. ಝೀಟಾ ಮತ್ತು ಆಲ್ಫಾ ಎಂಬ ಎರಡು ರೂಪಾಂತರಗಳೊಂದಿಗೆ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನ ಆಯ್ಕೆಯಲ್ಲಿ ಸಿಗಲಿದ್ದು, 2 ಡುಯಲ್ ಟೋನ್ ಹಾಗೂ 5 ಮೊನೊ ಟೋನ್ ಬಣ್ಣಗಳನ್ನು ಪಡೆದಿದೆ.

ಈ ಎಸ್‌ಯುವಿ, ಬಲೆನೊ ಹಾಗೂ ಬ್ರೆಜ್ಜಾ ಕಾರುಗಳು ಹೊಂದಿರುವಂತೆಯೇ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು, ಮಾರುತಿ ಸುಜುಕಿ ಜಿಮ್ನಿಗೆ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾಗಳು ಪ್ರಬಲ ಪ್ರತಿಸ್ಪರ್ಧಿಗಳಿವೆ. ಕಂಪನಿಯು ನೆಕ್ಸಾ ಡೀಲರ್ ಶಿಪ್ ಮೂಲಕ ಈ ಎಸ್‌ಯುವಿಯನ್ನು ಮಾರಾಟ ಮಾಡಲು ತೀರ್ಮಾನಿಸಿದ್ದು, ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದ್ದು, ಗ್ರಾಹಕರಿಂದ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.

Article Published On: Sunday, May 7, 2023, 8:30 [IST]
English summary
Maruti suzuki jimny launch soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+