Maruti Suzuki Jimny: ಬಿಡುಗಡೆಗೂ ಮುನ್ನವೇ 'ಬುಕಿಂಗ್ ಕಿಂಗ್' ಮಾರುತಿ ಸುಜುಕಿ ಜಿಮ್ನಿ 5 ಡೋರ್' ಬೆಲೆಯ ಮಾಹಿತಿ ಸೋರಿಕೆ
ಭಾರತದ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಆಫ್-ರೋಡ್ ಎಸ್‌ಯುವಿ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಮುಂದಿನ ಒಂದೆರಡು ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಖರೀದಿದಾರರಲ್ಲಿ ದೊಡ್ಡ ಮಟ್ಟದ ನೀರಿಕ್ಷೆ ಹುಟ್ಟುಹಾಕಿದ್ದು, ಅದರ ಬೆಲೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ಕಳೆದ ಜನವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್ ಪೋದಲ್ಲಿ ಮಾರುತಿ ಸುಜುಕಿ ಕಂಪನಿ, ಜಿಮ್ನಿ 5 ಡೋರ್ ಹಾಗೂ ಫ್ರಾಂಕ್ಸ್ ಎಸ್‌ಯುವಿಯನ್ನು ಅನಾವರಣ ಮಾಡಿ, ಅಂದಿನಿಂದಲೇ ಬುಕಿಂಗ್ ಆರಂಭಿಸಿತ್ತು. ಈವರೆಗೆ ಜಿಮ್ನಿ ಗರಿಷ್ಠ ಸಂಖ್ಯೆಯಲ್ಲಿ ಆರ್ಡರ್ ಸ್ವೀಕರಿಸುವ ಮೂಲಕ ದೊಡ್ಡ ದಾಖಲೆ ಮಾಡಿದ್ದು, ಈಗಲೂ ಆಸಕ್ತ ಗ್ರಾಹಕರು, ರೂ.25,000 ಮುಂಗಡ ಹಣ ಪಾವತಿಸಿ, ಕಾಯ್ದಿರಿಸಬಹುದು. ಈ ಎಸ್‌ಯುವಿ ರೂ.12 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ, ಮಾರುತಿ ಸುಜುಕಿ ಜಿಮ್ನಿ 5 ಡೋರ್ ಬೆಲೆಯ ಇನ್‌ವಾಯ್ಸ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಅದರ ಪ್ರಕಾರ, ಜಿಮ್ನಿಯ ಅಂತಿಮ ಎಕ್ಸ್ ಫ್ಯಾಕ್ಟರಿ ಬೆಲೆ ರೂ.13,65,705 ಇರಲಿದೆ. ಅದರಲ್ಲಿ ರೂ.9,41,866 ಅಸೇಂಬಲ್ ಶುಲ್ಕ ಹಾಗೂ GST ತೆರಿಗೆಗಳು ಸೇರಿವೆ. ಇದನ್ನು ಗಮನಿಸಿದರೆ, ರೂ.16 ರಿಂದ 16.5 ಲಕ್ಷ ಆನ್ ರೋಡ್ ಬೆಲೆಯಲ್ಲಿ ಈ ಎಸ್‌ಯುವಿ ಖರೀದಿಗೆ ಸಿಗಬಹುದು.
ಇನ್‌ವಾಯ್ಸ್ ಬೆಲೆ ಎಂಬುದು ಅಂತಿಮವಾಗಿ ಗ್ರಾಹಕ ಹಾಗೂ ಚಿಲ್ಲರೆ ವ್ಯಾಪಾರಿಯು ತನಗೆ ಬೇಕಿರುವ ಉತ್ಪನ್ನಕ್ಕಾಗಿ ತಯಾರಕರು ಅಥವಾ ವಿತರಕರಿಗೆ ಪಾವತಿಸುವ ಮೊತ್ತವಾಗಿದೆ. ಆದಾಗ್ಯೂ, ವಾಸ್ತವಾಗಿ ಈ ಬೆಲೆಗಳು ಬೇರೆಯಾಗಬಹುದು. ಇದೀಗ, ಸೋರಿಕೆಯಾಗಿರುವ ಮಾಹಿತಿ ಎಷ್ಟು ನಿಜವೆಂಬುದರ ಬಗ್ಗೆ ಪುರಾವೆಗಳಿಲ್ಲ. ದರದ ಬಗ್ಗೆ ಕಂಪನಿ ನೀಡುವ ಪ್ರಕಟಣೆ ಅಂತಿಮವಾಗಿದ್ದು, ಇನ್‌ವಾಯ್ಸ್ ನಲ್ಲಿ ನಮೂದಿಸಿರುವ ಬೆಲೆಗಿಂತ ಕಡಿಮೆ ಬೆಲೆ ಅಥವಾ ಅದಕ್ಕಿಂತ ಹೆಚ್ಚಿನ ದರಕ್ಕೆ ಲಾಂಚ್ ಆಗಬಹುದು.
ಇದಿಷ್ಟೇ ಅಲ್ಲದೆ, ಡೀಲರ್ ಶಿಪ್ ಮಳಿಗೆಯೊಂದರಲ್ಲಿ ನಿಂತಿರುವ ವೈಡ್ ಬಣ್ಣದ ಮಾರುತಿ ಸುಜುಕಿ ಜಿಮ್ನಿ 5 ಡೋರ್ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಇದು ಎಲ್ಲರನ್ನು ಆಕರ್ಷಿಸುತ್ತಿದೆ. ಈ ಜಿಮ್ನಿ, ಕೆನೆಟಿಕ್ ಯೆಲ್ಲೋ ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಸುತ್ತಳೆತೆ ಬಗ್ಗೆ ಹೇಳುವುದಾದರೆ, ಇದು 3,985 ಎಂಎಂ ಉದ್ದ, 1,645 ಎಂಎಂ ಅಗಲ ಹಾಗೂ 1,720 ಎಂಎಂ ಎತ್ತರವಿದ್ದು, 2,590 ಎಂಎಂ ಉದ್ದದ ವೀಲ್ ಬೇಸ್ ಹೊಂದಿದೆ.
ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‌ಯುವಿ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಇದು 1.5 ಲೀಟರ್ 4 ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 105 bhp ಗರಿಷ್ಠ ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಅಥವಾ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.
ಈ ಆಫ್-ರೋಡ್ ಎಸ್‌ಯುವಿ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, ಇದು 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆ ಸಲುವಾಗಿ 6 ಏರ್ ಬಾಗ್ಸ್, ABS ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ.
ಮಾರುತಿ ಸುಜುಕಿ ಕಂಪನಿ ಜಿಮ್ನಿಗೆ ಇರುವ ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ವಾರ್ಷಿಕ ಒಂದು ಲಕ್ಷ ಯುನಿಟ್ ಉತ್ಪಾದಿಸಲು ತೀರ್ಮಾನ ಮಾಡಿದೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಬಹುತೇಕ ಖರೀದಿಗೆ ಸಿಗುವ ಸಾಧ್ಯತೆ ಇದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಭಾರತದ ಮಾರುಕಟ್ಟೆಗೆ ಬಹುತೇಕ ಬಿಡುಗಡೆಯಾಬಹುದು. ಅಲ್ಲಿಯವರೆಗೆ ಕಾಯಲೇಬೇಕು.


Click it and Unblock the Notifications